ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಲವ್‌ ಬೇಕಪ್‌ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಯೂಟ್ಯೂಬರ್‌ !

ಕರ್ನಾಟಕ: Tulu Times | ಖ್ಯಾತ ಯೂಟ್ಯೂಬರ್ ಕೋಮಲಿ ಪ್ರೀತಿ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಮಣಿಕೊಂಡದ ಚಿತ್ರಪುರಿ ಕಾಲೋನಿಯ ತಮ್ಮ ಸಂಬಂಧಿಕರ ನಿವಾಸದಲ್ಲಿ ನಡೆದಿದೆ.

ಕೋಮಲಿ ಭಾರೀ ಜನಪ್ರಿಯತೆ ಗಳಿಸಿದ ಕಂಟೆಂಟ್ ಕ್ರಿಯೇಟರ್. ಜೀವನಶೈಲಿ, ದೈನಂದಿನ ಬ್ಲಾಗ್‌ಗಳು ಮತ್ತು ವೈಯಕ್ತಿಕ ವಿಷಯಗಳ ಕುರಿತು ವಿಡಿಯೋಗಳಿಂದ ಅಪಾರ ಜನಪ್ರಿಯತೆಗಳಿಸಿದ್ದರು. ಕೋಮಲಿ,  ಮಲ್ಲರೆಡ್ಡಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಓದುತ್ತಿದ್ದರು. ತನ್ನ ಬಿಡುವಿನ ವೇಳೆಯಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿದ್ದಳು. ಇದೀಗ ಈಕೆಯ ಆತ್ಮಹತ್ಯೆ ಫಾಲೋವರ್ಸ್‌ಗಳಿಗೆ ಶಾಕ್ ನೀಡಿದೆ.

ಕೆಲವು ವರ್ಷಗಳ ಹಿಂದೆ ಯೂಟ್ಯೂಬ‌ರ್ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ನಿಖಿಲ್ ರೆಡ್ಡಿ ಜೊತೆ ಸಂಬಂಧ ಹೊಂದಿದ್ದರು. ಇಬ್ಬರ ಪ್ರೀತಿಯೂ ಕಳೆದ ವರ್ಷ ಬ್ರೇಕಪ್‌ ಆಗಿತ್ತು. ನಂತರದ ದಿನಗಳಲ್ಲಿ ಹಲವು ಬಾರಿ ಸಾಯಲು ಪ್ರಯತ್ನ ಪಟ್ಟಿದ್ದ ಈಕೆ, ಕಳೆದ ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಇಬ್ಬರಲ್ಲೂ ಜಗಳ ಕೂಡ ಆಗಿತ್ತು ಎನ್ನಲಾಗಿದೆ.  ಈ ಬಗ್ಗೆ
ಪೊಲೀಸರಿಗೆ ಮಾಹಿತಿ ತಿಳಿದಿದ್ದು, ಕೋಮಲಿ ತಾಯಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

A famous YouTuber committed suicide after being rejected by a love interest!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 151

You cannot copy content of this page