ಮಂಗಳೂರು: Tulu Times | ಮಂಗಳೂರು ಏರ್ಪೋರ್ಟ್ಗೆ ಸತತ 2ನೇ ಬಾರಿಗೆ ವಿಶ್ವದ ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ ಪ್ರಶಸ್ತಿ ದೊರಕಿದೆ. ಪ್ರಯಾಣಿಕರ ಸರ್ವೆ ಮೂಲಕ ಮಾಹಿತಿ ಪಡೆದು ACI ASQ ಸಂಸ್ಥೆಯಿಂದ ಪ್ರಶಸ್ತಿ ನೀಡಲಾಗಿದೆ.
ಇಮಿಗ್ರೇಷನ್, ಕಸ್ಟಮ್ಸ್, ಹೈಸ್ಪೀಡ್ ವೈಫೈ, ವೇಗದ ಬ್ಯಾಗೇಜ್, ಲಾಂಜ್, ಸುಗಮ ಮತ್ತು ತೊಂದರೆ ಮುಕ್ತ ಆಗಮನ ದ್ವಾರ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ.ಆಗಮನ ವಿಭಾಗದಲ್ಲಿ ಇಮಿಗ್ರೇಶನ್ ಪ್ರಕ್ರಿಯೆ, ಸರಕು (ಬ್ಯಾಗೇಜ್) ವಿತರಣಾ ವ್ಯವಸ್ಥೆ, ಟರ್ಮಿನಲ್ ವಾತಾವರಣ, ಸ್ವಚ್ಛತೆ, ದಿಕ್ಕು ಸೂಚನೆ ಮತ್ತು ಒಟ್ಟು ಆರಾಮದಾಯಕತೆ ಸೇರಿದಂತೆ ಸಂಪೂರ್ಣ ಆಗಮನ ಅನುಭವವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಈ ವರ್ಷ ವಿಶ್ವಾದ್ಯಂತ 100 ವಿಮಾನ ನಿಲ್ದಾಣಗಳನ್ನು ವಿಭಾಗಗಳಲ್ಲಿ ಗುರುತಿಸಲಾಗಿದೆ ಮತ್ತು ಒಟ್ಟು 195 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.ಆಗಸ್ಟ್ 31 ರಿಂದ ಸೆಪ್ಟೆಂಬರ್ 4 ರವರೆಗೆ ನಡೆಯಲಿರುವ ಎಸಿಐ ವರ್ಲ್ಡ್‌ನ ವಿಮಾನ ನಿಲ್ದಾಣ ಅನುಭವ ಶೃಂಗಸಭೆಯ ಭಾಗವಾಗಿ, ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಸೆಪ್ಟೆಂಬರ್ 2, 2026 ರಂದು ನಡೆಯಲಿರುವ ಎಎಸ್‌ಕ್ಯೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಔಪಚಾರಿಕವಾಗಿ ಪ್ರದಾನ ಮಾಡಲಾಗುತ್ತದೆ.
Best Arrival Airport Award to Mangalore Airport!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










