ಬ್ರೇಕಿಂಗ್ ನ್ಯೂಸ್
ಕರಾವಳಿಸುಳ್ಯ

Sullia: ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ಇನ್ನಿಲ್ಲ

Sullia: ಹಿರಿಯ ಯಕ್ಷಗಾನ ಕಲಾವಿದ ಮತ್ತು ರಂಗಕರ್ಮಿ ಸುಜನಾ ಸುಳ್ಯ (ಎಸ್.ಎನ್. ಜಯರಾಮ್) ಅ. 24ರ ಶುಕ್ರವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ವಯೋಸಹಜ ನಿಶ್ಶಕ್ತಿಯಿಂದಿದ್ದ ಎಸ್.ಎನ್. ಜಯರಾಮ್ ಅವರು ಎರಡು ದಿನಗಳಿಂದ ಆರೋಗ್ಯ ಹದಗೆಟ್ಟು ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜಯರಾಮ ನಾವೂರು ಅವರು ಸುಜನಾ ಸುಳ್ಯ ಎಂದು ಜನಪ್ರಿಯತೆ ಗಳಿಸಿಕೊಂಡಿದ್ದರು. ಅವರು ಯಕ್ಷಗಾನದಲ್ಲಿ ಬಹುಮುಖ ಕಲಾವಿದರಾಗಿದ್ದರು. ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದ ಅವರು ಸುಳ್ಯ ತಾಲೂಕಿನ ‘ರಂಗಮನೆ’ ಎಂಬ ಕಲಾ ಕೇಂದ್ರದ ರೂವಾರಿ ಮತ್ತು ನಿರ್ದೇಶಕ ಜೀವನ್‌ರಾಮ್ ಸುಳ್ಯ ಅವರ ತಂದೆ.

ರಂಗಮನೆಯ ಯಕ್ಷಗಾನ ಮತ್ತು ರಂಗಭೂಮಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸುಜನಾ ತೊಡಗಿಸಿಕೊಂಡಿದ್ದರು. ಇವರ ಅಗಲುವಿಕೆಗೆ ಹಲವರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Bhagat Singh ಅವರನ್ನು ಹಮಾಸ್‌ ಜೊತೆಗೆ ಹೋಲಿಕೆ ಮಾಡಿದ ಕಾಂಗ್ರೆಸ್‌ ಮುಖಂಡ

==================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 35

You cannot copy content of this page