ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇಂದು ರಶ್ಮಿಕಾ ಮಂದಣ್ಣ ವಿಜಯ್‌ ಮದುವೆ ಸಂಭ್ರಮ..!

ಕರ್ನಾಟಕ: Tulu Times | ಇಂದು ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಯ ಸಂಭ್ರಮ. ಇಂದು ಬೆಳಗ್ಗೆ ತೆಲುಗು ಸಂಪ್ರದಾಯದಂತೆ ಮದುವೆ ನಡೆಯಲಿದ್ದು, ಸಂಜೆ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ.

ರಾಜಸ್ಥಾನದ ಉದಯಪುರದಲ್ಲಿ ಇಂದು ರಶ್ಮಿಕಾ-ವಿಜಯ್  ಮದುವೆ ಸಂಭ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಈಗಾಗಲೇ ಹಳದಿ, ಮೆಹಂದಿ, ಸಂಗೀತ್ ಅಂತ ಈ ಜೋಡಿ ಸಂಭ್ರಮದಲ್ಲಿ ಮುಳುಗಿ ಎದ್ದಿತ್ತು. ಇಬ್ಬರು ಪಕ್ಕಾ ತೆಲುಗು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.  ಇಂದು ಬೆಳಗ್ಗೆ 8 ಗಂಟೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಅಭಿಮಾನಿಗಳು ಇಬ್ಬರ ಮದುವೆ ಫೋಟೋಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಎದುರು ನೋಡುತ್ತಿದ್ದಾರೆ. ಇಂದು ಸಂಜೆ ಕೊಡವ ಸಂಸ್ಖೃತಿಯಂತೆ ಮತ್ತೊಮ್ಮೆ ಮದುವೆ ಆಗಲಿದ್ದಾರೆ.ವಿಜಯ್ ದೇವರಕೊಂಡು ಕೊಡವ ಉಡುಪು ಧರಿಸಿ, ರಶ್ಮಿಕಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮೂಲತ: ಕೊಡಗಿನವರಾಗಿದ್ದರಿಂದ ಕೊಡವ ಸಂಪ್ರದಾಯದಂತೆಯೂ ವಿವಾಹವಾಗಲಿದ್ದಾರೆ.

ರಣ್ಬೀರ್ ಕಪೂರ್, ಸಂದೀಪ್ ರೆಡ್ಡಿ ವಂಗಾ ವಿವಾಹದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ರಶ್ಮಿಕಾ ಗೆಳತಿ ಆಶಿಕಾ ರಂಗನಾಥ್ ಈಗಾಗಲೇ ರಾಜಸ್ಥಾನದ ಉದಯಪುರದಲ್ಲಿ ಇದ್ದಾರೆ. ಕಳೆದ ಮೂರು ದಿನಗಳಿಂದ ರಶ್ಮಿಕಾ-ವಿಜಯ್ ರಾಜಸ್ಥಾನದ ಉದಯಪುರದಲ್ಲಿ ಬೀಡುಬಿಟ್ಟಿದ್ದು ತಮ್ಮ ಮದುವೆ ಒಂದೊಂದು ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಗೀತಾ ಗೋವಿಂದಂ’ ಸಿನಿಮಾದಿಂದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬೆಸ್ಟ್ ಪೇರ್ ಲಿಸ್ಟ್ ಸೇರಿದ್ದರು. ಗೀತಾ ಗೋವಿಂದಂ’ ಸಿನಿಮಾ ಬಳಿಕ ಈ ಜೋಡಿ ‘ಡಿಯರ್ ಕಾಮ್ರೆಡ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು.

Today is Rashmika Mandanna Vijay’s wedding celebration!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page