Congress MP ಇಮ್ರಾನ್ ಮಸೂದ್ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದೆ. ಪಾಡ್‌ಕ್ಯಾಸ್ಟ್‌ನಲ್ಲಿ ನೀಡಿದ್ದ ಹೇಳಿಕೆಯೊಂದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಉಗ್ರಗಾಮಿ ಗುಂಪು ಹಮಾಸ್‌ಗೆ ಹೋಲಿಸುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ.
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಇತ್ತೀಚೆಗೆ ಪಾಡ್‌ಕ್ಯಾಸ್ಟ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಪ್ಯಾಲೆಸ್ಟೈನ್ ಉಗ್ರಗಾಮಿ ಗುಂಪು ಹಮಾಸ್‌ಗೆ ಹೋಲಿಸಿ ಚರ್ಚೆಗೆ ಕಾರಣವಾದ್ರು.
ಇಸ್ರೇಲ್ ಮೇಲೆ ನಡೆದ ದಾಳಿಯ ಕುರಿತು ಪಾಡ್‌ಕ್ಯಾಸ್ಟ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ನಿರೂಪಕರು ʼಹಮಾಸ್ ಒಂದು ಭಯೋತ್ಪಾದಕ ಸಂಘಟನೆʼ ಎಂದು ಹೇಳಿದಾಗ ಕಾಂಗ್ರೆಸ್ ಸಂಸದ ಆಕ್ರೋಶಗೊಂಡಿದ್ದಾರೆ. ಇದಕ್ಕೆ ಕೋಪದಿಂದ ಪ್ರತಿಕ್ರಿಯಿಸಿದ ಸಂಸದ ಇಮ್ರಾನ್ “ಭಗತ್ ಸಿಂಗ್ ಕೂಡ ಒಬ್ಬ ಭಯೋತ್ಪಾದಕನೇ?” ಎಂದು ಕೇಳಿದರು.
ಭಗತ್ ಸಿಂಗ್ ಮತ್ತು ಹಮಾಸ್ ನಡುವೆ ಹೋಲಿಕೆ ಇದೆಯೇ ಎಂದು ಮಸೂದ್ ಅವರನ್ನು ಪ್ರಶ್ನಿಸಿದಾಗ, ಮಸೂದ್ ಹೀಗೆ ಉತ್ತರಿಸಿದ್ದಾರೆ. “ಹಮಾಸ್‌ನವರು ತಮ್ಮ ಭೂಮಿಗಾಗಿ ಹೋರಾಡುತ್ತಿದ್ದಾರೆ. ಭಗತ್ ಸಿಂಗ್ ಕೂಡ ತನ್ನ ಭೂಮಿಗಾಗಿ ಹೋರಾಡುತ್ತಿದ್ದರು” ಎಂದಿದ್ದಾರೆ.
“ಭಗತ್ ಸಿಂಗ್ ತನ್ನ ಭೂಮಿಗಾಗಿ ಸರ್ವೋಚ್ಚ ತ್ಯಾಗ ಮಾಡಿದ್ದಾರೆ. ಇಸ್ರೇಲ್ ಆಕ್ರಮಣಕಾರಿ ದೇಶ. ನಿಮಗೆ, ಹಮಾಸ್ ಒಂದು ಭಯೋತ್ಪಾದಕ ಸಂಘಟನೆ. ಹಮಾಸ್ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ ಎಂದು ನಾನು ನಂಬುತ್ತೇನೆ. ಹಮಾಸ್ ವಶಪಡಿಸಿಕೊಂಡಿದ್ದ 250 ಒತ್ತೆಯಾಳುಗಳನ್ನು ನೋಡುತ್ತಿದ್ದೀರಿ. ಆದರೆ ಇಸ್ರೇಲ್ ಕೊಂದ 1 ಲಕ್ಷ ಜನರನ್ನು ನೀವು ನೋಡುತ್ತಿಲ್ಲ” ಎಂದು ಅವರು ಹೇಳಿದ್ರು.
ಭಗತ್ ಸಿಂಗ್ ಅವರನ್ನು ಹಮಾಸ್ ಉಗ್ರರಿಗೆ ಹೋಲಿಕೆ ಮಾಡಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಮಸೂದ್ ಭಯೋತ್ಪಾದಕ ಗುಂಪುಗಳನ್ನು ಹೊಗಳುತ್ತಿದ್ದಾರೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. X ನೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಇಮ್ರಾನ್ ಮಸೂದ್ ಹಮಾಸ್ ಅನ್ನು ಭಗತ್ ಸಿಂಗ್ ಜಿಗೆ ಹೋಲಿಸಿದ್ದಾರೆ. ಇದು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Hyderabad: ಧಗ ಧಗ ಹೊತ್ತಿ ಉರಿದ ವೋಲ್ವೊ ಬಸ್ – 20ಕ್ಕೂ ಅಧಿಕ ಸಾವು
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ: https://www.youtube.com/@tulutimess











