ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಚಾರ್ಮಾಡಿಯ ಅಂಗನವಾಡಿ ಸಹಾಯಕಿ ಆತ್ಮಹತ್ಯೆ

ಚಾರ್ಮಾಡಿ: Tulu Times | ಚಾರ್ಮಾಡಿಯ ಅಂಗನವಾಡಿ ಸಹಾಯಕಿ  ಚಿಬಿದ್ರೆ ಗ್ರಾಮದ ಮುಕ್ಕುಡ ಸಮೀಪದ ನಿವಾಸಿ ಲೀಲಾ(55ವರ್ಷ)    ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಸಮೀಪದ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಧರ್ಮಸ್ಥಳ ಠಾಣೆಯ ಪೊಲೀಸರು ಪರಿಶೀಲನ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರಾವಳಿಯಲ್ಲಿ ಕುಷ್ಠರೋಗ ಹೆಚ್ಚಳ : ನಿರ್ಲಕ್ಷ್ಯದಿಂದ ಗಂಭೀರ ಹಂತಕ್ಕೆ ತಲುಪುತ್ತಿರುವ ರೋಗ

ದ.ಕ: ಪ್ರತ್ಯೇಕ ಪ್ರಕರಣದಲ್ಲಿ, ಕರ್ನಾಟಕದ ಕರಾವಳಿ ಭಾಗದಲ್ಲಿ ಕುಷ್ಠರೋಗ ಪ್ರಕರಣಗಳು ಏರಿಕೆಯಾಗುತ್ತಿರುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದ ಆರು ತಿಂಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಟ್ಟು 439 ಪ್ರಕರಣಗಳು ಪತ್ತೆಯಾಗಿರುವುದು ವೈದ್ಯಕೀಯ ವಲಯದ ಗಮನ ಸೆಳೆದಿದೆ. ಇದರಲ್ಲಿ ಬಹುತೇಕ ಪ್ರಕರಣಗಳು ರೋಗದ ಎರಡನೇ ಹಂತದಲ್ಲಿರುವುದು ಸಮಸ್ಯೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ‘ಕೇರಳ’ಗೆ ‘ಕೇರಳಂ’ ಹೆಸರು : ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ

ಕುಷ್ಠರೋಗವು ನಿಧಾನವಾಗಿ ಮುಂದುವರಿಯುವ ಸೋಂಕು ರೋಗವಾಗಿದ್ದು, ಆರಂಭದಲ್ಲಿ ಸಣ್ಣ ಲಕ್ಷಣಗಳ ಮೂಲಕ ಕಾಣಿಸಿಕೊಳ್ಳುತ್ತದೆ. ದೇಹದ ಮೇಲೆ ಬಿಳಿ ಅಥವಾ ತಾಮ್ರ ಬಣ್ಣದ ಚರ್ಮದ ಕಲೆಗಳು, ಸ್ಪರ್ಶ ಸಂವೇದನೆ ಕಡಿಮೆಯಾಗುವುದು, ನರಗಳ ದುರ್ಬಲತೆ ಇವು ಮೊದಲ ಸೂಚನೆಗಳಾಗಿವೆ. ಆದರೆ ಈ ಲಕ್ಷಣಗಳನ್ನು ಅನೇಕರು ಸಾಮಾನ್ಯ ಚರ್ಮ ಸಮಸ್ಯೆಯೆಂದು ನಿರ್ಲಕ್ಷಿಸುವುದು ಸಾಮಾನ್ಯ ಈ ನಿರ್ಲಕ್ಷ್ಯವೇ ರೋಗವನ್ನು ಗಂಭೀರ ಹಂತಕ್ಕೆ ತಳ್ಳುವ ಪ್ರಮುಖ ಕಾರಣವಾಗಿದೆ.

ಜಿಲ್ಲಾವಾರು ಮಾಹಿತಿಯನ್ನು ಪರಿಶೀಲಿಸಿದರೆ ಸಮಸ್ಯೆಯ ವ್ಯಾಪ್ತಿ ಸ್ಪಷ್ಟವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 295 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಬಹುಪಾಲು ಎರಡನೇ ಹಂತದಲ್ಲಿವೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ 144 ಪ್ರಕರಣಗಳು ಪತ್ತೆಯಾಗಿದ್ದು, ಗಳಿಸಿದ್ದಾರೆ. ತುಳು ಟೈಮ್‌ನಲ್ಲಿ ಜಾಗತಿಕ ಪ್ರಸ್ತುತತೆಯೊಂದಿಗೆ ಹೆಚ್ಚಿನವು ಮಲ್ಟಿಬ್ಯಾಸಿಲರಿ ಹಂತಕ್ಕೆ ತಲುಪಿವೆ. ಈ ಹಂತದಲ್ಲಿ ರೋಗವು ಹಲವು ನರಗಳಿಗೆ ಹಾನಿ ಉಂಟುಮಾಡಿ ದೇಹದ ಅಂಗಚಲನೆ ಮೇಲೆ ಪರಿಣಾಮ ಬೀರುತ್ತದೆ.

Charmadi Anganwadi helper commits suicide- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page