ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಿಟ್ಲದಲ್ಲಿ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯ ಮೃತದೇಹ ಪತ್ತೆ

ವಿಟ್ಲ: Tulu Times | ಮೂರ್ಕಜೆಯ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.
10ನೇ ತರಗತಿಯ ವಿದ್ಯಾರ್ಥಿನಿ ಬೆಂಗಳೂರು ಮೂಲದ ವೈಗ ಲಕ್ಷ್ಮೀ ಮೃತಪಟ್ಟಿದ್ದಾರೆ.

ನಾಪತ್ತೆಯಾದ ಹಿನ್ನೆಲೆ ಹುಡುಕಾಟ ನಡೆಸಿದಾಗ ಗುರುಕುಲದ ಕೆರೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ವೈಗ ಲಕ್ಷ್ಮೀ ರವಿವಾರ(ಫೆ.22)ದಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಮೃತದೇಹವನ್ನು ಮೇಲಕ್ಕೆತ್ತಿ, ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಉಡುಪಿಯಲ್ಲಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಉಡುಪಿ:  ಪ್ರತ್ಯೇಕ ಪ್ರಕರಣದಲ್ಲಿ, ಜನನಿಬಿಡ ಪ್ರದೇಶದಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ವ್ಯಕ್ತಿಯೊಬ್ಬರು ಯತ್ನಿಸಿದ ಘಟನೆ ನಡೆದಿದೆ. ಈತನನ್ನು ನಗರ ಪೊಲೀಸರು ಮತ್ತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಗದಗ ಮೂಲದವನೆಂದು ಗುರುತಿಸಲಾಗಿದೆ

ಕಲ್ಸಂಕ ವೃತ್ತದ ಬಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಲ್ಸಂಕ ವೃತ್ತದ ಬಳಿ ಗಟ್ಟಿಯಾಗಿ ಕಿರುಚಿದ್ದಾನೆ. ಈ ವೇಳೆ ಅಲ್ಲಿಯೇ ಕೆಲಸದಲ್ಲಿದ್ದ ಸಂಚಾರ ಪೊಲೀಸರು ಆತನ ಕೈಯಲ್ಲಿದ್ದ ಬಾಟಲಿಯನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಒಮ್ಮೆ ಪೊಲೀಸರು ಬಂದು ಕೈಯಲ್ಲಿದ್ದ ಬಾಟಲನ್ನು ಕಸಿದುಕೊಳ್ಳಲು ಯತ್ನಿಸಿದ್ದರೂ ಆತ ಮತ್ತೆ ಬಾಟಲಿ ಕಸಿದುಕೊಂಡಿದ್ದಾನೆ. ನಗರ ಪೊಲೀಸ್ ಠಾಣೆಯ ಎಸ್‌ಐಗಳಾದ ನಾರಾಯಣ ಮತ್ತು ಗಂಗಪ್ಪ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು, ಆತನನ್ನು ಹಿಡಿದು ತಡೆದಿದ್ದಾರೆ. ಆತ ಪಾನಮತ್ತನಾಗಿದ್ದನೋ ಅಥವಾ ಮಾನಸಿಕ ಅಸ್ವಸ್ಥನೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

body-of-maitreyi-gurukul-student-found-in-vitla-ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page