ಉಡುಪಿ : Tulu Times l ಕರ್ನಾಟಕದಲ್ಲಿ ಮೊದಲ ಸಂಪೂರ್ಣ ಸಾಕ್ಷರತಾ ಜಿಲ್ಲೆ ಎಂಬ ಗೌರವವನ್ನು ಪಡೆಯುವತ್ತ ಉಡುಪಿ ಜಿಲ್ಲೆ ಹೆಜ್ಜೆ ಇಟ್ಟಿದೆ. ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇಕಡಾ 95 ಏರಿಕೆಯಾದ ಹಿನ್ನೆಲೆಯಲ್ಲಿ, ಸಂಪೂರ್ಣ ಸಾಕ್ಷರ ಜಿಲ್ಲೆ ಎಂದು ಘೋಷಿಸಲು ಅಗತ್ಯ ಪೂರ್ವ ಪ್ರಕ್ರಿಯೆಗಳು ಆರಂಭಗೊಂಡಿವೆ.
ಸಾಕ್ಷರತಾ ಯೋಜನೆಗಳ ಫಲಿತಾಂಶ ;
ರಾಜ್ಯ ಸರ್ಕಾರದ “ಸಾವಿರ ಗ್ರಾಮ ಪಂಚಾಯತ್ ಸಾಕ್ಷರತಾ ಯೋಜನೆ” ಅಡಿಯಲ್ಲಿ ಜಿಲ್ಲೆಯ 15 ಗ್ರಾಮ ಪಂಚಾಯತ್ಗಳನ್ನು ಆಯ್ಕೆ ಮಾಡಿ ನಿರೀಕ್ಷರರಿಗೆ ತರಬೇತಿ ನೀಡಲಾಗಿದೆ. ಜೊತೆಗೆ ಜಿಲ್ಲಾ ಪಂಚಾಯತ್ನ “ಲಿಂಕ್ ಡಾಕ್ಯುಮೆಂಟ್” ಯೋಜನೆಯಡಿ ಬೈಂದೂರು ತಾಲೂಕಿನಲ್ಲಿ ನಾಲ್ಕು ಗ್ರಾಮ ಪಂಚಾಯತ್ಗಳಲ್ಲಿ ಸಾಕ್ಷರತಾ ತರಬೇತಿ ನಡೆಸಿ ಪರೀಕ್ಷೆಗಳನ್ನೂ ಪೂರ್ಣಗೊಳಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಗಳ ಮೂಲಕ ಒಟ್ಟು 6,158 ಹೊಸ ಸಾಕ್ಷರರು ಹೊರಹೊಮ್ಮಿದ್ದು, ಜಿಲ್ಲೆಯ ಸಾಕ್ಷರತಾ ಪ್ರಮಾಣ 95 ಶೇಕಡಾಕ್ಕೆ ಏರಿದೆ. ಉಳಿದ 5 ಶೇಕಡಾವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಜಿಲ್ಲೆಯನ್ನು ನೇರವಾಗಿ ಸಂಪೂರ್ಣ ಸಾಕ್ಷರ ಎಂದು ಘೋಷಿಸಲು ಸಾಧ್ಯವಿಲ್ಲ. ನಿಯಮಾನುಸಾರ ಗ್ರಾಮ ಪಂಚಾಯತ್ಗಳಿಂದ ದೃಢೀಕರಣ ಪತ್ರಗಳನ್ನು ಪಡೆಯಬೇಕು. ಅವುಗಳನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಕಳುಹಿಸಲಾಗುತ್ತದೆ. ಬಳಿಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
ಸಾಕ್ಷರತಾ ತರಬೇತಿ ಪಡೆದವರಿಗೆ ಮೂರು ತಿಂಗಳ ಅವಧಿಯಲ್ಲಿ 200 ಗಂಟೆಗಳ ಪಾಠ ನೀಡಲಾಗಿದೆ. ನಂತರ ಓದು, ಬರಹ ಮತ್ತು ಕಲಿಕೆಯ ವಿಷಯಗಳಲ್ಲಿ ಒಟ್ಟು 150 ಅಂಕಗಳ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನೀಡುವ ಪ್ರಮಾಣಪತ್ರವು 7ನೇ ತರಗತಿ ಉತ್ತೀರ್ಣತೆಗೆ ಸಮಾನವಾಗಿದೆ. ಎಲ್ಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ನಂತರ ಫೆಬ್ರವರಿ ಅಂತ್ಯದೊಳಗೆ ಉಡುಪಿ ಜಿಲ್ಲೆಯನ್ನು ರಾಜ್ಯದ ಮೊದಲ ಸಂಪೂರ್ಣ ಸಾಕ್ಷರ ಜಿಲ್ಲೆ ಎಂದು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Udupi district is the first fully literate district in the state – ತುಳುಟೈಮ್ಸ್
ಇದನ್ನೂ ಓದಿ : ಉಡುಪಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/wwrUgQ_xloY?si=lGeLfWNpkeP_-dny











