ಸುಳ್ಯ: Tulu Times | ಸುಳ್ಯದ ಮುಸ್ಲೀಂ ಯುವಕರು ದಲಿತ ವೃದ್ಧೆಗೆ ಸೂರು ಕಲ್ಪಿಸಿರುವ ಮಾನವೀಯತೆಯ ಸಂಗತಿ ನಡೆದಿದೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕಲಹಗಳಿಗೆ ಇಂತಹ ಘಟನೆ ನಿಜಕ್ಕೂ ಒಳ್ಳೆಯ ಉದಾಹರಣೆಯಾಗಿದೆ.
ಇದನ್ನೂ ಓದಿ: ಕೈ-ಕಾಲುಗಳಲ್ಲಿ ಹೆಚ್ಚು ಬೆವರು : ಇದು ಯಾವಾಗ ಸಾಮಾನ್ಯವಲ್ಲ ?
ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಂದಿನ ಕಾಲದಲ್ಲಿ ಮನುಷ್ಯತ್ವವೇ ಎಲ್ಲಕ್ಕಿಂತ ಮಿಗಿಲು ಎಂಬುವುದನ್ನುಈ ಘಟನೆ ಸಾಬೀತುಪಡಿಸಿದೆ. ಇರೋಕೆ ಮನೆ ಇಲ್ಲದ ದಲಿತ ಸಮುದಾಯದ ವೃದ್ಧ ಮಹಿಳೆಯ ಕುಟುಂಬಕ್ಕೆ ಮುಸ್ಲಿಮ್ ಯುವಕರ ತಂಡವೊಂದು ಮನೆ ಕಟ್ಟಿ ಕೊಟ್ಟಿದೆ.
ಇದನ್ನೂ ಓದಿ: ಕಾರಿಂಜ ಶ್ರೀ ವನಶಾಸ್ತಾರ-ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
70 ವರ್ಷದ ದಲಿತ ವೃದ್ಧೆ ದೇಸಿಲು ತನ್ನ ಮಗಳು ಮತ್ತು ಆಕೆಯ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ವಾಸ್ತವ್ಯಕ್ಕೆ ಸ್ವಂತ ಮನೆ ಇಲ್ಲದೆ ಪರದಾಡುತ್ತಿದ್ದರು. ಗಂಡನ ಆಸರೆ ಇಲ್ಲದ ವೃದ್ಧೆ ಕಷ್ಟದ ಬದುಕು ಸಾಗಿಸುತ್ತಿದ್ದರು. ಗಾಳಿ, ಮಳೆ ಬರುವ ಸಂದರ್ಭ ಜನತಾ ಕಾಲನಿಯಲ್ಲಿರುವ ಹಳೆಯ ಶಿಥಿಲಾವಸ್ಥೆಯಲ್ಲಿರುವ ನಿರಂತರ ಕಲಿಕಾ ಕೇಂದ್ರವನ್ನು ಆಶ್ರಯಿಸುತ್ತಿದ್ದರು.
ಈ ದಲಿತ ಮಹಿಳೆಯ ಕುಟುಂಬದ ಸ್ಥಿತಿಯನ್ನು ಗಮನಿಸಿದ ಯುವಕರು ಸೂರು ಕಲ್ಪಿಸಿಕೊಡಲು ನಿರ್ಧಾರ ಮಾಡಿದ್ದಾರೆ. ಇನ್ನು ಹಿಂದೂ ಯುವಕರು ದೇಸಿಲು ಮನೆ ನಿರ್ಮಾಣ” ಎಂಬ ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡು ಸುಳ್ಯ ತಾಪಂ ಮಾಜಿ ಸದಸ್ಯ ಅಬ್ದುಲ್ ಗಫೂರ್ರ ಸಹಕಾರದಲ್ಲಿ ಸ್ಥಳೀಯರಾದ ಟಿ.ಎಸ್.ಅಬ್ದುಲ್ ಖಾದರ್, ಎನ್.ಅಬೂಬಕರ್, ಸಿ.ಎಂ.ಬಶೀರ್, ಜಮಾಲ್ ಪಡ್ಪಿನಂಗಡಿ ನೇತೃತ್ವದಲ್ಲಿ ಹಣ ಸಂಗ್ರಹಿಸಿ ಸರಕಾರಿ ಜಾಗದಲ್ಲಿ ಅಚ್ಚುಕಟ್ಟಾದ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
Muslim youth from Sullia built a house for an elderly Dalit!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










