ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಮಂಗಳೂರಿನ ಜನರಿಗೆ ಬಿಗ್‌ ಗಿಫ್ಟ್‌ ! ಏನದು..?

ಮಂಗಳೂರು:Tulu Times | ನಗರದ ಜನರಿಗೆ ಬಂಪರ್‌ ಸುದ್ದಿಯೊಂದಿದೆ. ಇದೀಗ ನಗರದಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆಯಲ್ಲೇ  ಎಲೆಕ್ಟ್ರಿಕ್‌ ಬಸ್‌ ಸೇವೆ ಆರಂಭಿಸಲು ಮುಂದಾಗಿದೆ. ಫೆಬ್ರವರಿ 26, 2026 ರಂದು ಇ -ಬಸ್‌  ರಸ್ತೆಗಿಳಿಯಲಿದೆ. ಈ ಮೂಲಕ ಮಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯಾಗಲಿದೆ.

ಇದನ್ನೂ ಓದಿ: ಕಾರಿಂಜ ಶ್ರೀ ವನಶಾಸ್ತಾರ-ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಈಗಾಗಲೇ ಪ್ರಧಾನಮಂತ್ರಿ ಇ-ಬಸ್‌ ಯೋಜನೆಯಡಿ ಒಟ್ಟು 750 ಹೊಸ ಎಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿದೆ. ಪರಿಸರದ ದೃಷ್ಟಿಯಿಂದ ರಾಜ್ಯದಲ್ಲಿ ಇ ಬಸ್‌ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಹಲವು ಜಿಲ್ಲೆಗಳಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದರಿಂದ, ಖಾಸಗಿ ಸಾರಿಗೆ ವ್ಯವಸ್ಥೆಗೆ ಭಾರೀ ಪೆಟ್ಟು ಬೀಳುವ ಸಾಧ್ಯತೆ ಇತ್ತು. ಆದ್ರೆ ಇದೀಗ ಸರ್ಕಾರಿ ಇ-ಬಸ್‌ ಆರಂಭವಾಗುವ ಮೊದಲೇ, ಖಾಸಗಿ ಸಾರಿಗೆಯಲ್ಲೂ ಇವಿ ಬಸ್‌ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ಇದನ್ನೂ ಓದಿ: ಉಪ್ಪಿನಂಗಡಿ ಸಮೀಪ ರೈಲು ದುರಂತ: ಯುವಕನ ಸಾವು, ಆತ್ಮಹತ್ಯೆ ಶಂಕೆ

ಈ ಕುರಿತು ಮಾತನಾಡಿದ ಖಾಸಗಿ ಬಸ್‌ ಮಾಲೀಕ ದಿಲ್ರಾಜ್‌ ಆಳ್ವಾ , ಫೆಬ್ರವರಿ 26, 2026ರಂದು ರೂಟ್‌ ಸಂಖ್ಯೆ 27 ರಲ್ಲಿ ಹೊಸ ಎಲೆಕ್ಟ್ರಿಕ್‌ ಬಸ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. “ತಯಾರಕರು ಮುಂದಿನ ಒಂದೆರಡು ದಿನಗಳಲ್ಲಿ ವಾಹನವನ್ನು ತಲುಪಿಸುತ್ತಾರೆ. ಆ ನಂತರ ನಗರದಲ್ಲಿ ಇವಿ-ಬಸ್‌ಗಳು ಓಡಾಡಲಿದೆ ಮತ್ತು ಪರಿಸರ ಸುರಕ್ಷತೆಗೆ ಸಹಕಾರಿಯಗಲಿದೆ ಎಂದರು. ಇದು ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣಕ್ಕೆ ದೊಡ್ಡ ಹೆಜ್ಜೆಯಾಗಲಿದೆ. ಖಾಸಗಿ ಇ-ಬಸ್‌ ಸೇವೆ ಆರಂಭಸುತ್ತಿರುವ ಮಂಗಳೂರು ಮೊದಲ ನಗರ ಎಂಬ ಹೆಗ್ಗಳಿಕೆ ಮಂಗಳೂರು ಪಾತ್ರವಾಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮಂಗಳೂರು ವಿಭಾಗವೂ 100 ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸುವ ಯೋಜನೆ ಹಾಕಿಕೊಂಡಿದೆ.

Big gift for the people of Mangalore! What is it..?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page