ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಬೆಳ್ತಂಗಡಿ: ಆಂಬ್ಯುಲೆನ್ಸ್‌ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಬೆಳ್ತಂಗಡಿ: Tulu Times | ಮಹಿಳೆಯೊಬ್ಬರು ಆಂಬ್ಯುಲೆನ್ಸ್‌ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.  ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಸಿಸ್ಟರ್ ಗಳು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

ಬೆಳಗ್ಗಿನ ಜಾವ ಹೆರಿಗೆಗೆಂದು ಬಂದಿದ್ದ ಬೆಳ್ತಂಗಡಿ ನಗರದ ಸುದಮುಗೇರು ನಿವಾಸಿ ಲೀಲಾವತಿ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು.  ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆ ಆಗಬೇಕು ಎಂದು ಇಬ್ಬರು ಶುಶೂಶಕ್ತಿಯರ ಜೊತೆಗೆ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ತುರ್ತು ವಾಹನದಲ್ಲಿ ಡಾಕ್ಟರ್‌ ಮಂಗಳೂರಿಗೆ ಕಳುಹಿಸಿದ್ದರು.

ಫರಂಗಿಪೇಟೆ  ಹತ್ತಿರ ತಲುಪುತ್ತಿದ್ದ ಸಮಯದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ನಿಗಾ ವಹಿಸಿಕೊಂಡು ಸಿಸ್ಟರ್ ಕುಮುದ ಹಾಗೂ ಸಿಸ್ಟ‌ರ್ ಸೌಮ್ಯಾ.ಎಸ್ ಗಂಡು ಮಗುವಿಗೆ ಆಂಬ್ಯುಲೆನ್ಸ್ ವಾಹನದೊಳಗೆ ಹೆರಿಗೆ ಮಾಡಿಸಿದ್ದಾರೆ. ಅತ್ಯಂತ ಕಡಿಮೆ ಸಮಯದಿಂದ ಆಂಬ್ಯುಲೆನ್ಸ್ ಚಾಲಕ ದಿನೇಶ್ ಗೌಡ ಕರ್ತವ್ಯ ಮೆರೆದಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.

Belthangady: Woman gives birth to baby boy in ambulance- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page