ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ಕಾರಿಂಜ ಶ್ರೀ ವನಶಾಸ್ತಾರ-ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಉರುವಾಲು: Tulu Times l ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾರಿಂಜದಲ್ಲಿರುವ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿ ದೇವರ ಸಾನಿಧ್ಯದಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶಿರ್ವಾದಗಳೊಂದಿಗೆ, 70 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿರುವ ದೇವಸ್ಥಾನವು ಫೆ.20ರಿಂದ 22ರ ವರೆಗೆ ದೇವರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವೇಣೂರು ಕುಂಡಿ ವೇದಮೂರ್ತಿ ಶ್ರೀ ಕೆ.ಲಕ್ಷ್ಮೀ ನಾರಾಯಣ ಕಾರಂತರ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಂಸ್ಕೃತಿ ಕಾರ್ಯಕ್ರಮಗಳ ಮೂಲಕ ವಿಜ್ರಂಬಣೆಯಿಂದ ನಡೆಯಿತು.

ಫೆ.22 ರಂದು ಗಣಪತಿ ಹೋಮ, ಅಧಿವಾಸೋದ್ವಾರ, ವನಶಾಸ್ತಾರ ಮತ್ತು ವೀರಭದ್ರ ದೇವರ ಪ್ರತಿಷ್ಠೆ, ಕಲಶಾಭಿಷೇಕ ಅವಸ್ತಾರ ಪ್ರೋಕ್ಷಣೆ, ಮಹಾಪೂಜೆ, ಪಲ್ಲಪೂಜೆ, ಪ್ರತಿಷ್ಠಾಬಲಿ, ಪ್ರಸಾದ ವಿತರಣೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ, ಭಜನೆ ನಡೆಯಿತು.

ಈ ಸಂದರ್ಭ ನೂರಾರು ಮಂದಿ ಭಕ್ತರು ದೇವರ ದರ್ಶನ ಪಡೆದರು. ಮಧ್ಯಾಹ್ನ ಗಡಿನಾಡ ಕನ್ನಡ ಧ್ವನಿ ರಾಜ್ಯ ಪ್ರಶಸ್ತಿ ಪುರಸ್ಕೃತ ಎಲ್ ಕೆ.ಧರಣ್ ರಾಜ್ ಮಾಣಿಯವರಿಂದ ಹರಿನಾಮ ಸಂಕೀರ್ತನಾ, ಸಂಜೆ ಯಕ್ಷಗಾನ-ಜಾಂಬವತಿ ಕಲ್ಯಾಣ ನಡೆಯಿತು.

Punar Pratistha Brahmakalashotsava of Karinja Sri Vanashastar-Sri Veerabhadra Swamy Temple – ತುಳುಟೈಮ್ಸ್

ಇದನ್ನೂ ಓದಿ :ಬಿಎಂಟಿಸಿ ಬಸ್‌ಗಳಲ್ಲಿ ಮಹತ್ವದ ಬದಲಾವಣೆ : ಹಳೆಯ 2,000 ಬಸ್ ರದ್ದು, ಹೊಸ ವಿದ್ಯುತ್ ಬಸ್ ಸೇರ್ಪಡೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=WySLQXA_F_4A9ILS

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 11

You cannot copy content of this page