ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬೆಳ್ತಂಗಡಿ: ತಾಲೂಕಿನಾದ್ಯಂತ ಗಾಳಿ ಮಳೆ..!

ಬೆಳ್ತಂಗಡಿ: Tulu Times | ತಾಲೂಕಿನಾದ್ಯಂತ ಗುಡುಗು-ಗಾಳಿ ಸಹಿತ ಮಳೆಗೆ ಕಕ್ಕಿಂಜೆಯ ಬಸ್ತಿ ಭಾಗದಲ್ಲಿ ತಂತಿಯ ಮೇಲೆ ಮರ ಬಿದ್ದಿದೆ. 4 ವಿದ್ಯುತ್‌ ಕಂಬಗಳು ಧರೆಗುರುಳಿವೆ.

ನಾರಾವಿ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಜೆ 3.30ರ ಸುಮಾರಿಗೆ ಮಳೆ ಜೋರಾಗಿ ಬೀಸಿದೆ. ನಂತರ ಬಹುತೇಕ ಪ್ರದೇಶಗಳಿಗೆ ವಿಸ್ತರಿಸಿದೆ. ಇನ್ನು ಕೆಲವೆಡೆ ಸಾಧಾರಣ ಮಳೆಯಾಗಿದೆ. ಗುಡುಗು ಸಹಿತ ಗಾಳಿ ಮಳೆಯಿಂದ ಬಾಳೆ ಗಿಡಗಳಿಗೆ ಹಾನಿಯಾಗಿದೆ. ಕಕ್ಕಿಂಜೆಯ ಬಸ್ತಿ ಭಾಗದಲ್ಲಿ ಮರವೊಂದು ವಿದ್ಯುತ್‌ ತಂತಿಯ ಮೇಲೆ ಬಿದ್ದಿದೆ.  ವಿದ್ಯುತ್‌ ಕಂಬವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿತ್ತು. ಬಳಿಕ ವಿದ್ಯುತ್‌ ಕಂಬ ತೆರವು ಕಾರ್ಯ ನಡೆದಿದೆ.ಧರ್ಮಸ್ಥಳ, ಕಾಶಿಪಟ್ಣ, ಕಡಿರುದ್ಯಾವರ, ಬದ್ಯಾರು, ನಡ, ನೆರಿಯ, ಚಾರ್ಮಾಡಿ, ಬಳಂಜ, ಗುರುವಾಯನಕೆರೆ, ಅಳದಂಗಡಿ, ವೇಣೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಇದನ್ನೂ ಓದಿ: ಬೆಳ್ಳಿತೆರೆ ಮೇಲೆ ರವಿ ಬೆಳಗೆರೆ ಅವರ ಭೀಮಾತೀರದ ಹಂತಕರು..!

ಅಡಿಕೆ, ಕಾಳುಮೆಣಸು ಮೊದಲಾದ ಬೆಳೆಗಳು ಒದ್ದೆಯಾಗಿ ಕೃಷಿಕರಿಗೆ ನಷ್ಟವಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ನಿರಂತರ ಬಿಸಿಲಿನ ತೀವ್ರತೆಯ ಪರಿಣಾಮ ಬೆಂದಿದ್ದ ಇಳೆಗೆ ಮಳೆ ಬಿದ್ದ ಪರಿಣಾಮ ತಂಪಾಗಿದೆ. ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ. ಮಳೆ ಬಂದಾಗ ಘಾಟಿಯ ಒಣಗಿದ ಸ್ಥಳಗಳಲ್ಲಿ ಬೆಂಕಿ ನಂದಿ ಹೋಗುವ ಜತೆಗೆ ಭೂಮಿ ತಂಪಾಗಿದ್ದಾಗ ಬೆಂಕಿಯ ತೀವ್ರತೆ ಕಡಿಮೆಯಾಗಲಿದೆ. ಮಳೆಯಿಂದಾಗಿ ವಿವಿಧ ಕಡೆ ನಡೆಯುತ್ತಿರುವ ಜಾತ್ರೆ, ಉತ್ಸವ, ಯಕ್ಷಗಾನ, ಬ್ರಹ್ಮಕಲಶೋತ್ಸವಗಳಿಗೆ ಭಾರೀ ತೊಂದರೆಯಾಗಿದೆ. ಸುಳ್ಯ ತಾಲೂಕಿನ ವಿವಿಧೆಡೆ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆ ಗಾಳಿ ಸಹಿತ ಉತ್ತಮ ಮಳೆಯಾಗಿದೆ.

Belthangady: Heavy rain across the taluk..!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page