ಮಂಗಳೂರು:Tulu Times | ಚೊಕ್ಕಬೆಟ್ಟು ಮಠದ ಬಾಲಕ ಶಿವನಗೌಡ (15) ಮನೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕರ್ನಾಟಕದ ಅತಿದೊಡ್ಡ ಇವಿ ಎಕ್ಸ್‌ಪೋ ಆರಂಭ
ಈ ಬಾಲಕ ರಾಮನಗೌಡ ಎಂಬವರ ಪುತ್ರ ಆಗಿದ್ದು, ಈತ ಫಿಟ್ಸ್ ಹಾಗೂ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕೆಲಸಕ್ಕೆ ಹೋಗಿದ್ದ ತಾಯಿ 5.30ರ ವೇಳೆಗೆ ಮನೆಗೆ ಬಂದಾಗ ಮನೆಯಲ್ಲಿ ಶಿವನಗೌಡ ಇರಲಿಲ್ಲ. ಮನೆಯ ಸುತ್ತ ಮುತ್ತ ನೋಡಿದರೂ ಸಿಗಲಿಲ್ಲ. ಮಗನನ್ನು ಯಾರೋ ಅಪರಿಚಿತರು ಆಮೀಷವೊಡ್ಡಿ ಅಪಹರಿಸಿಕೊಂಡು ಹೋಗಿರುವ ಸಾಧ್ಯತೆಯಿದೆ ಎಂದು ಬಾಲಕನ ತಂದೆ ತಿಳಿಸಿದ್ದಾರೆ.
ಇದನ್ನೂ ಓದಿ: ವಯನಾಡಿನಲ್ಲಿ ಪಕ್ಷಿ ವೀಕ್ಷಣಾ ಕಾರ್ಯಾಗಾರ : ಪ್ರಕೃತಿ ಪ್ರೇಮಿಗಳು ಇಂದೇ ಹೆಸರು ನೋಂದಾಯಿಸಿ
ನಾಪತ್ತೆಯಾಗಿರುವ ದಿನ ನೀಲಿ ಬಣ್ಣದ ಟಿ ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದರು. ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ ಭಾಷೆ ತಿಳಿಸಿದೆ. ಈ ಬಾಲಕನ ಬಗ್ಗೆ ಮಾಹಿತಿ ಇದ್ದಲ್ಲಿ ಸುರತ್ಕಲ್ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಸೌತ್ 70ನೇ ಫಿಲ್ಮ್‌ಫೇರ್ ಅವಾರ್ಡ್ಸ್ : ಸಾಧನೆಗೆ ಗೌರವ
Mangaluru: Boy goes missing from home- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










