ಬ್ರೇಕಿಂಗ್ ನ್ಯೂಸ್
ಕರ್ನಾಟಕಸುಳ್ಯ

ಸುಳ್ಯ: ಅಪ್ರಾಪ್ತೆ ಯುವತಿಯನ್ನು ಗರ್ಭಿಣಿಯಾಗಿಸಿದ ಯುವಕ.. ಪೋಕ್ಸೋ ಪ್ರಕರಣ ದಾಖಲು!

ಸುಳ್ಯ : Tulu Times | ತೋಟದ ಕೆಲಸಕ್ಕೆ ಬಂದಿದ್ದ ಅಪ್ರಾಪ್ತ ಯುವತಿಯನ್ನು ಗರ್ಭಿಣಿಯಾಗಿಸಿದ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.

ಝಾರ್ಖಂಡ್ ಮೂಲದ ಯುವಕ ಹಾಗೂ ಯುವತಿ ಐವರ್ನಾಡಿನ ಮನೆಯೊಂದಕ್ಕೆ ತೋಟದ ಕೆಲಸಕ್ಕೆ ಬಂದಿದ್ದರು.  ಇನ್ನು ಯುವತಿಗೆ ಜ್ವರ ಬಂದ ಕಾರಣ ಆಕೆಯನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದ್ದರು. ಈ ವೇಳೆ ವೈದ್ಯರು ಪರೀಕ್ಷೆ ಮಾಡಿ ನೋಡಿದಾಗ ಯುವತಿ ಗರ್ಭವತಿ ಎಂದು ತಿಳಿದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದಾರೆ. ಯುವತಿ ಅಪ್ರಾಪ್ತ ವಯಸ್ಕಳಾದ ಕಾರಣ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ಮದುವೆ ಸಂಭ್ರಮ: ಪ್ರೀಮಿಯಂ ಆಹ್ವಾನ ಪೆಟ್ಟಿಗೆ ವೈರಲ್

ಕಡಬದಲ್ಲಿ ಕುತೂಹಲ ಹುಟ್ಟಿಸಿದ ಹಳದಿ ಬಣ್ಣದ ಚುಕ್ಕೆಗಳು!

ಕಡಬ: ಪ್ರತ್ಯೇಕ ಪ್ರಕರಣದಲ್ಲಿ, ಕಡಬ ಪರಿಸರದಲ್ಲಿ ವಿಶೇಷವಾದ ಅಚ್ಚರಿಯ ಸಂಗತಿ ಕೇಳಿಬಂದಿದೆ. ಮಳೆಹನಿ ಬಿದ್ದಲ್ಲಿ ಹಳದಿ ಬಣ್ಣದ ಚುಕ್ಕೆಗಳು ಜನರಲ್ಲಿ ಕುತೂಹಲ ಮೂಡಿಸಿದೆ.

ಹೌದು, ಕೊಂಬಾರುಸಿರಿಬಾಗಿಲು, ಕೈಕಂಬ ಪ್ರದೇಶದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮಲೆ ಹನಿ ಬಿದ್ದ ಜಾಗದಲ್ಲಿ ಹಳದಿ ಚುಕ್ಕಿಗಳು ಕಂಡು ಬಂದಿವೆ. ಬೆಳಗ್ಗೆ ಎದ್ದು ನೋಡಿದಾಗ ಮನೆಯ ಅಂಗಳ, ಗಿಡಗಳು ಹಾಗೂ ಒಣ ಹಾಕಿದ ಬಟ್ಟೆಗಳ ಮೇಲೆ ಹಳದಿ ಬಣ್ಣದ ಚುಕ್ಕಿಗಳನ್ನು ನೋಡಿ ಜನ ಶಾಕ್ ಆಗಿದ್ದಾರೆ. ಇನ್ನು ಹಳದಿ ಬಣ್ಣ ಬಿದ್ದ ಜಾಗದಲ್ಲಿ ಹುಡಿಯಂತೆ ಕಂಡುಬಂದಿದೆ. ವಿಷಯ ತಿಳಿದ ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಳದಿ ಬಣ್ಣದ ಮಾದರಿಯನ್ನು ಸಂಗ್ರಹಿಸಿ ದ್ದಾರೆ. ಇದರ ಬಗ್ಗೆ ಟೆಸ್ಟ್ ಮುಗಿದ ಬಳಿಕ ವರದಿ ಗೊತ್ತಾಗಬೇಕಿದೆ.

Sullia: A young man who impregnated a minor girl.. POCSO case registered!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page