ಕಡಬ: Tulu Times | ಕಡಬ ಪರಿಸರದಲ್ಲಿ ವಿಶೇಷವಾದ ಅಚ್ಚರಿಯ ಸಂಗತಿ ಕೇಳಿಬಂದಿದೆ. ಮಳೆಹನಿ ಬಿದ್ದಲ್ಲಿ ಹಳದಿ ಬಣ್ಣದ ಚುಕ್ಕೆಗಳು ಜನರಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಭಾರತ–ಬ್ರೆಜಿಲ್ ಸಭೆ: ಪ್ರಮುಖ ಖನಿಜಗಳು, ವ್ಯಾಪಾರ ಸಹಕಾರ ಬಗ್ಗೆ ಚರ್ಚೆ
ಹೌದು, ಕೊಂಬಾರುಸಿರಿಬಾಗಿಲು, ಕೈಕಂಬ ಪ್ರದೇಶದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮಲೆ ಹನಿ ಬಿದ್ದ ಜಾಗದಲ್ಲಿ ಹಳದಿ ಚುಕ್ಕಿಗಳು ಕಂಡು ಬಂದಿವೆ. ಬೆಳಗ್ಗೆ ಎದ್ದು ನೋಡಿದಾಗ ಮನೆಯ ಅಂಗಳ, ಗಿಡಗಳು ಹಾಗೂ ಒಣ ಹಾಕಿದ ಬಟ್ಟೆಗಳ ಮೇಲೆ ಹಳದಿ ಬಣ್ಣದ ಚುಕ್ಕಿಗಳನ್ನು ನೋಡಿ ಜನ ಶಾಕ್ ಆಗಿದ್ದಾರೆ. ಇನ್ನು ಹಳದಿ ಬಣ್ಣ ಬಿದ್ದ ಜಾಗದಲ್ಲಿ ಹುಡಿಯಂತೆ ಕಂಡುಬಂದಿದೆ. ವಿಷಯ ತಿಳಿದ ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಳದಿ ಬಣ್ಣದ ಮಾದರಿಯನ್ನು ಸಂಗ್ರಹಿಸಿ ದ್ದಾರೆ. ಇದರ ಬಗ್ಗೆ ಟೆಸ್ಟ್ ಮುಗಿದ ಬಳಿಕ ವರದಿ ಗೊತ್ತಾಗಬೇಕಿದೆ.
Curious yellow dots on the Kadaba!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










