ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನೆಲ್ಯಾಡಿಯಲ್ಲಿ ವೇಗವಾಗಿ ಸಾಗುತ್ತಿದೆ ರಸ್ತೆ ಕಾಮಗಾರಿ ಕೆಲಸ !

ನೆಲ್ಯಾಡಿ: Tulu Times | ಅರ್ಧದಲ್ಲೇ ಬಾಕಿಯಾಗಿದ್ದ ನೆಲ್ಯಾಡಿ ಹೆದ್ದಾರಿ ಕಾಮಗಾರಿ ಈಗ ಚುರುಕುಗೊಂಡಿದ್ದು, ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿ ಇದೀಗ ಆರಂಭಗೊಂಡಿದೆ.

ಸುಮಾರು ಎಂಟು ವರ್ಷದಲ್ಲಿ ನರಕಸದೃಶ ಸ್ಥಿತಿಯಲ್ಲಿರುವ ನೆಲ್ಯಾಡಿ ಪೇಟೆಗೆ ಈಗ ಮುಕ್ತಿ ಸಿಕ್ಕಿದೆ. ನೆಲ್ಯಾಡಿ ಪೇಟೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿ ಮತ್ತೆ ಪ್ರಾರಂಭಗೊಂಡಿದೆ. ನೆಲ್ಯಾಡಿ ಪೇಟೆಯಲ್ಲಿ ಆರ್‌.ಇ. ವಾಲ್‌ (ಎಲಿವೇಟೆಡ್‌ ರೋಡ್‌) ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು, ರಸ್ತೆಯ ಭಾಗವನ್ನು ಮಣ್ಣು ಹಾಕಿ ಎತ್ತರಿಸಿ ಎರಡು ಭಾಗ ಕಾಣದ ಹಾಗೆ ರಸ್ತೆ ನಿರ್ಮಾಣ ಆಗುತ್ತಿರುವುದನ್ನು ಕಂಡು ಇದಕ್ಕೆ ವಿರೋಧ ವ್ಯಕ್ತವಾಯಿತು. ರಸ್ತೆ ನಿರ್ಮಿಸುವ ಎಲೆವೇಟೆಡ್‌ ರೋಡ್‌ನಿಂದ ಪೇಟೆ ಇಬ್ಭಾಗವಾಗಲಿದ್ದು ಇದರ ಬದಲು ಪಿಲ್ಲರ್‌ನಲ್ಲಿ ನಿಲ್ಲುವ ಫ್ಲೈ ಓವರ್‌ ನಿರ್ಮಿಸುವ ಆಗ್ರಹ ಕೇಳಿ ಬಂತು.

ಇದನ್ನೂ ಓದಿ: ನಾಳೆ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

ರಸ್ತೆಯ ಸ್ಥಿತಿಯಿಂದ ಬಳಲಿ ಬೆಂಡಾದ ವರ್ತಕರು, ಜನರು ಹೇಗಾದರೂ ಸರಿ ಇದು ಮುಕ್ತಾಯ ಕಂಡರೆ ಸಾಕು ಎನ್ನುವ ಹಂತಕ್ಕೆ ತಲುಪಿದ್ದರು. ಪೇಟೆ ಮಧ್ಯೆ1 ಕಿ.ಮೀ. ಉದ್ದದ ಕಾಮಗಾರಿ ಪ್ರಗತಿಯಲ್ಲಿದ್ದು ರಸ್ತೆಯ ಎರಡು ಬದಿಯಿಂದ ಆರ್‌.ಇ. ವಾಲ್‌ ಮೇಲ್ಭಾಗದಲ್ಲಿ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ. ಪೇಟೆಯ ಮಧ್ಯ ಭಾಗದಲ್ಲಿ ಅಂಡರ್‌ಪಾಸ್‌ ನಿರ್ಮಾಣವಾಗುತ್ತಿದ್ದು ಎರಡು ಅಂಡರ್‌ಪಾಸ್‌ಗಳ ನಡುವೆಯೇ ಮೂರನೇ ಅಂಡರ್‌ಪಾಸ್‌ ನಿರ್ಮಾಣ ಏಕೆ ಎನ್ನುವ ಪ್ರಶ್ನೆ ಕೇಳಿ ಬಂದಿದೆ.

ಹೆದ್ದಾರಿ ಮೇಲೆ ಘನವಾಹನಗಳು 50 ರಿಂದ 60 ಟನ್‌ ಭಾರ ಹೊತ್ತು ಸಂಚರಿಸುವಾಗ ಹಾಲಿ ತಡೆಗೋಡೆ ಕೆಡಹಿ ಪ್ರತ್ಯೇಕವಾಗಿ 3 ಅಂಡರ್‌ಪಾಸ್‌ ನಿರ್ಮಿಸುವುದು ಸಮರ್ಪಕ ಅಲ್ಲ ಎಂದು ಎನ್‌ಎಚ್‌ಎಐ ಎಂಜಿನಿಯರ್‌ಗಳು ಹೇಳುತ್ತಾರೆ. ಹೆದ್ದಾರಿ ಕಾಮಗಾರಿ ಅಪೂರ್ಣವಾಗಿರುವ ಕಾರಣ ಮಂಗಳೂರು-ಬೆಂಗಳೂರು ನಡುವೆ ತೆರಳುವ ಬಸ್‌, ಘನವಾಹನಗಳು ಈ ಕಿರಿದಾದ ಸರ್ವಿಸ್‌ ರಸ್ತೆಯಲ್ಲೇ ನುಗ್ಗುತ್ತವೆ. ಆಗ ತಾಸುಗಟ್ಟಲೇ ಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ನೆಲ್ಯಾಡಿ ಪೇಟೆಯಲ್ಲಿ ಕಾಮಗಾರಿ ಪ್ರಾರಂಭಗೊಂಡು ಮೂರು ವರ್ಷ ಕಳೆದಿದೆ. ಇಲ್ಲಿನ ಜನರು ಮಳೆಗಾಲ, ಬೇಸಗೆಯಲ್ಲಿ ಪಡುತ್ತಿರುವ ಪಾಡು ಹೇಳತೀರದು ಎಂದು ಪ್ರಯಾಣಿಕರು ಹೇಳುತ್ತಾರೆ.

Road construction work is progressing rapidly in Nelyadi!- ತುಳುಟೈಮ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page