ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಾರವಾರದಲ್ಲಿ ಎಂಡೊಸಲ್ಫಾನ್ ಬಾಧಿತ ಮಕ್ಕಳ ಆರೈಕೆ ಕೇಂದ್ರ ಸ್ಥಾಪನೆ

ಕಾರವಾರ: Tulu Times | ಕಾರವಾರದಲ್ಲಿ ಎಂಡೊಸಲ್ಫಾನ್ ಬಾಧಿತರಿಗೆ ಆರೈಕೆ ಕೇಂದ್ರ ಸ್ಥಾಪನೆಯಾಗಿದೆ. ರಾಜ್ಯದಿಂದ ಇದೇ ಮೊದಲ ವಿಶೇಷ ಪ್ರಯತ್ನವಾಗಿದೆ. ಭಟ್ಕಳ ತಾಲ್ಲೂಕಿನ ಬೆಳಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿ ಎಂಡೊಸಲ್ಫಾನ್ ಬಾಧಿತ ಮಕ್ಕಳ ಆರೈಕೆ ಕೇಂದ್ರ ಸ್ಥಾಪನೆ ಆಗಿದೆ.

ಬಾಧಿತರ ಪೈಕಿ 18 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮೂಲಕ ಸಹಜಸ್ಥಿತಿಗೆ ತರಲು ‘ಆರೈಕೆ ಕೇಂದ್ರ’ ಆರಂಭವಾಗಿದೆ. ಸುಮಾರು 4ನೇ ತಲೆಮಾರಿನವರ ಮೇಲೂ ಎಂಡೊಸಲ್ಫಾನ್ ಪರಿಣಾಮ ಬೀರಿದೆ. ಇದೀಗ ಆರೈಕೆ ಕೇಂದ್ರದಲ್ಲಿ ಆರ್ಥಿಕ ನೆರವಿನೊಂದಿಗೆ ಬಾಧಿತ ಮಕ್ಕಳಿಗೆ ಫಿಸಿಯೊಥೆರಪಿ ಚಿಕಿತ್ಸೆ ನೀಡುತ್ತಿದೆ. ಇದರ ಜೊತೆಗೆ ಪೌಷ್ಟಿಕ ಆಹಾರಗಳನ್ನು ಒದಗಿಸಲಾಗುತ್ತಿದೆ. ಈ ಕುರಿತು ಮಾತನಾಡಿದ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ, ಎರಡು ಪ್ರತ್ಯೇಕ ವಿಭಾಗಗಳಲ್ಲಿ ತಲಾ 15 ಮಂದಿಗೆ 2 ತಿಂಗಳವರೆಗೆ ಶಿಬಿರ ಆಯೋಜಿಸಿ, ಆರೈಕೆ ನೀಡುತ್ತೇವೆ. ಈಗಾಗಲೇ 15 ಮಂದಿ ಚಿಕಿತ್ಸೆ ಪಡೆದಿದ್ದು, ಬಹುತೇಕರ ಆರೋಗ್ಯ ಕೊಂಚ ಸುಧಾರಿಸಿದೆ ಎಂದರು.

ಕೇಂದ್ರದ ಸಮನ್ವಯಾಧಿಕಾರಿ ಸೂರ್ಯ ಗುಂಡು ಮಾತನಾಡಿ, ಎಂಡೊಸಲ್ಫಾನ್ ಬಾಧಿತ ಮಕ್ಕಳ ಪೈಕಿ ಬಹುತೇಕರಲ್ಲಿ ಬುದ್ಧಿಮಾಂದ್ಯತೆ, ಅಂಗವೈಕಲ್ಯತೆ ಇದೆ. ಅಂತಹ ಮಕ್ಕಳಿಗೆ ಫಿಸಿಯೊಥೆರಪಿ ಚಿಕಿತ್ಸೆ ನೀಡುವುದರಿಂದ ಸುಧಾರಣೆ ಜೊತೆಗೆ ಮಾನಸಿಕ ಸ್ಥಿತಿಯಲ್ಲೂ ಸುಧಾರಣೆ ಕಂಡುಬರುತ್ತಿದೆ. ಆರೈಕೆ ಕೇಂದ್ರಕ್ಕೆ ಬಂದಾಗ ಒಳಗೆ ಬರಲು ಹಿಂದೇಟು ಹಾಕುತ್ತಿದ್ದವರು ಎರಡು ತಿಂಗಳ ಬಳಿಕ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ ಎಂದರು. ಎಂಡೋಸಲ್ಫಾನ್ ಬಾಧಿತರ ಮರು ಸಮೀಕ್ಷೆಯಲ್ಲಿ 96 ಬಾಲಕಿಯರು ಸೇರಿ 228 ಮಕ್ಕಳು ಬಾಧಿತರಾಗಿರುವುದು ಹಾಗೂ 543 ಸಂತ್ರಸ್ತ ಕುಟುಂಬಗಳು ಇಂದಿಗೂ ಸೌಲಭ್ಯ ವಂಚಿತರಾಗಿರುವುದು ಗೊತ್ತಾಗಿದೆ.

Care center for endosulfan-affected children established in Karwar- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page