ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಶಸ್ತ್ರಚಿಕಿತ್ಸೆ ಇಲ್ಲದೇ ಬೆನ್ನುಹುರಿ ಸಮಸ್ಯೆಗಳ ಚಿಕಿತ್ಸೆಗೆ ಆಧುನಿಕ ತಂತ್ರಜ್ಞಾನ

ಮಂಗಳೂರು : Tulu Times l ಮಂಗಳೂರು ಮೂಲದ ಫಿಜಿಯೋಥೆರಪಿ ಕೇಂದ್ರದ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ರೋಬೋಟಿಕ್ ಸ್ಪೈನಲ್ ಡೀಕಂಪ್ರೆಶನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಮೂಲಕ ಶಸ್ತ್ರಚಿಕಿತ್ಸೆ ಇಲ್ಲದೆ ಬೆನ್ನುಹುರಿ ಸಂಬಂಧಿತ ಸಮಸ್ಯೆಗಳ ಚಿಕಿತ್ಸೆಗೆ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.

ಕೇಂದ್ರದ ನಿರ್ದೇಶಕ ಡಾ. ಭಾರತ್ ಕೆ ಹೆಚ್ ಅವರ ನೇತೃತ್ವದಲ್ಲಿ ಈ ಅತ್ಯಾಧುನಿಕ ವ್ಯವಸ್ಥೆ ಜಾರಿಗೆ ಬಂದಿದೆ. ಇದು ಕಂಪ್ಯೂಟರ್ ನಿಯಂತ್ರಿತ ರೋಬೋಟಿಕ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸಿ, ರೋಗಿಯ ಸಮಸ್ಯೆಗೆ ಅನುಗುಣವಾಗಿ ಒತ್ತಡ, ಕೋನ ಮತ್ತು ಚಿಕಿತ್ಸೆ ಅವಧಿಯನ್ನು ನಿಖರವಾಗಿ ಹೊಂದಿಸುತ್ತದೆ. ಈ ಚಿಕಿತ್ಸೆ ಮುಖ್ಯವಾಗಿ ಕೆಳಗಿನ ಸಮಸ್ಯೆಗಳಿಗೆ ಸಹಾಯಕವಾಗಿದೆ: ಸ್ಲಿಪ್ ಡಿಸ್ಕ್, ಡಿಸ್ಕ್ ಬಲ್ಜ್, ಸೈಯಾಟಿಕಾ

ಸರ್ವೈಕಲ್ ಮತ್ತು ಲಂಬರ್ ಸ್ಪೊಂಡಿಲೋಸಿಸ್, ಸ್ಕೋಲಿಯೊಸಿಸ್, ದೀರ್ಘಕಾಲದ ಬೆನ್ನು ಮತ್ತು ಕುತ್ತಿಗೆ ನೋವು, ಭಂಗಿ (ಪೋಶ್ಚರ್) ಸಂಬಂಧಿತ ಸಮಸ್ಯೆಗಳು. ಈ ವಿಧಾನವು ಬೆನ್ನುಹುರಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ಡಿಸ್ಕ್ ಪುನರುಜ್ಜೀವನ ಮತ್ತು ರಕ್ತ ಸಂಚಲನವನ್ನು ಸುಧಾರಿಸಲು ಸಹಕಾರಿಯಾಗಿದೆ.

ಡಾ. ಭರತ್ ಕೆ.ಎಚ್. ಅವರ ಪ್ರಕಾರ, “ರೋಬೋಟಿಕ್ ಸ್ಪೈನಲ್ ಡೀಕಂಪ್ರೆಶನ್ ಶಸ್ತ್ರಚಿಕಿತ್ಸೆ ರಹಿತ ಬೆನ್ನುಹುರಿ ಚಿಕಿತ್ಸೆಯಲ್ಲಿ ಅತ್ಯಂತ ನಿಖರತೆ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ. ಕರಾವಳಿ ಕರ್ನಾಟಕದ ಜನರಿಗೆ ಅಂತರಾಷ್ಟ್ರೀಯ ಮಟ್ಟದ ಚಿಕಿತ್ಸೆ ಸ್ಥಳೀಯವಾಗಿ ಲಭ್ಯವಾಗುವುದು ನಮ್ಮ ಉದ್ದೇಶ ಎಂದು ಹೇಳಿದರು.

ಪ್ರತಿ ರೋಗಿಗೂ ವೈಯಕ್ತಿಕವಾಗಿ ವೈದ್ಯಕೀಯ ಮತ್ತು ಬಯೋಮೆಕಾನಿಕಲ್ ಮೌಲ್ಯಮಾಪನ ನಡೆಸಿ, ಅದರ ಆಧಾರದ ಮೇಲೆ ಚಿಕಿತ್ಸೆ ರೂಪಿಸಲಾಗುತ್ತದೆ. ಇದರಲ್ಲಿ ರೋಬೋಟಿಕ್ ಚಿಕಿತ್ಸೆ ಜೊತೆಗೆ ವ್ಯಾಯಾಮ, ಭಂಗಿ ಸರಿಪಡಿಸುವಿಕೆ ಮತ್ತು ಕಾರ್ಯಕ್ಷಮತೆ ಪುನರ್‌ಸ್ಥಾಪನೆ ಕ್ರಮಗಳನ್ನು ಒಳಗೊಂಡಿರುತ್ತದೆ.

Modern technology to treat spinal problems without surgery – ತುಳುಟೈಮ್ಸ್

ಇದನ್ನೂ ಓದಿ : ದಕ್ಷಿಣ ಕನ್ನಡ ಹಾಲು ಉತ್ಪಾದಕರಿಗೆ ಲೀಟರ್‌ಗೆ 1 ರೂ.‌ ಹೆಚ್ಚುವರಿ ಪ್ರೋತ್ಸಾಹಧನ

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=33Inm1v2WZf8Fjfc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page