ಬ್ರೇಕಿಂಗ್ ನ್ಯೂಸ್
ಕರಾವಳಿ

ಎಂಎಸ್ ಐಲ್ಯಾಂಡ್ ಸ್ಕೈ ಹಡಗು ಮಂಗಳೂರು ಬಂದರಿಗೆ ಭೇಟಿ

ಮಂಗಳೂರು: Tulu Times l ಬಹಾಮಾಸ್ ಧ್ವಜದಡಿ ಸಂಚರಿಸುವ ಕ್ರೂಸ್ ಹಡಗು MS Island Sky ಗುರುವಾರ ಮಂಗಳೂರು ಬಂದರಿಗೆ ಭೇಟಿ ನೀಡಿತು. ಈ ಹಡಗಿನಲ್ಲಿ 95 ಪ್ರವಾಸಿಗರು ಮತ್ತು 70 ಸಿಬ್ಬಂದಿ ಇದ್ದರು.

ಈ ಹಂಗಾಮಿನ ಎರಡನೇ ಕ್ರೂಸ್ ಹಡಗಾದ ಎಂಎಸ್ ಐಲ್ಯಾಂಡ್ ಸ್ಕೈ, ಗೋವಾದ Mormugao ನಿಂದ ಬೆಳಿಗ್ಗೆ 7.30ಕ್ಕೆ ಆಗಮಿಸಿತು ಎಂದು ಮಂಗಳೂರು ಬಂದರಿನಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರವಾಸಿಗರಿಗೆ ಸುಗಮ ಮತ್ತು ವಿಶಿಷ್ಟ ಅನುಭವ ಕಲ್ಪಿಸಲು ಬಂದರು ಪ್ರಾಧಿಕಾರ ಹಾಗೂ ಇತರ ಸಂಸ್ಥೆಗಳು ವ್ಯಾಪಕ ಸಿದ್ಧತೆ ಮಾಡಿಕೊಂಡಿದ್ದವು.

ಆಯುಷ್ ಸಚಿವಾಲಯದಿಂದ ಧ್ಯಾನ ಕೇಂದ್ರ,‌ ಉಚಿತ ವೈ-ಫೈ ವ್ಯವಸ್ಥೆ, ಪ್ರವಾಸೋದ್ಯಮ ಸಚಿವಾಲಯದಿಂದ ಯಕ್ಷಗಾನ ಥೀಮ್ ಸೆಲ್ಫಿ ಸ್ಟ್ಯಾಂಡ್, ಪ್ರವಾಸಿಗರು ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಮಾರ್ಗದರ್ಶಿತ ಪ್ರವಾಸ ಕೈಗೊಂಡರು. ಇದರಲ್ಲಿ ಕುದ್ರೋಳಿ ಗೋಕರ್ಣ ದೇವಸ್ಥಾನ, St. ಅಲೋಶಿಸಿಯಸ್ ಚ್ಯಾಪೆಲ್, ಸ್ಥಳೀಯ ಮಾರುಕಟ್ಟೆಗಳು, ಕ್ಯಾಶ್ಯೂ ಫ್ಯಾಕ್ಟರಿ ಮುಖ್ಯವಾಗಿವೆ. ಪ್ರವಾಸಿಗರ ಹೆಚ್ಚಿನ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ವಲಸೆ ಪ್ರಕ್ರಿಯೆ ಸುಗಮವಾಗಲು ಮುಂಚಿತ ಯೋಜನೆ ಕೈಗೊಳ್ಳಲಾಗಿತ್ತು. ಇದರಿಂದ ನಿರೀಕ್ಷಾ ಸಮಯ ಕಡಿಮೆಯಾಗಿದ್ದು, ಪ್ರವಾಸಿಗರ ಅನುಭವ ಉತ್ತಮಗೊಂಡಿತು. ಯಶಸ್ವಿ ಬಂದರು ಭೇಟಿಯ ಬಳಿಕ ಹಡಗು ಮಧ್ಯಾಹ್ನ 1 ಗಂಟೆಗೆ ಮುಂದಿನ ಪ್ರಯಾಣಕ್ಕೆ ಹೊರಟಿತು.

MS Island Sky ship visits Mangalore port – ತುಳುಟೈಮ್ಸ್

ಇದನ್ನೂ ಓದಿ : ಆನ್‌ಲೈನ್ ದಂಡ ವ್ಯವಸ್ಥೆ ರದ್ದುಗೊಳಿಸಬೇಕು : ಲಾರಿ ಮಾಲೀಕರ ಒತ್ತಾಯ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SMsGYz8mdYQ?si=KUAjDridRSgvQ3S8

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 30

You cannot copy content of this page