ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

Mangaluru: ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಸಂದೇಶ – ಎರಡು ಖಾತೆಗಳ ವಿರುದ್ಧ ಎಫ್‌ಐಆರ್‌

Mangaluru: ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಸಂದೇಶವನ್ನು ಹಂಚಿದ್ದಕ್ಕಾಗಿ ಎರಡು ಖಾತೆಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಪ್ರಚೋದನಕಾರಿ ಸಂದೇಶ ಹಂಚಿದ ಆರೋಪ ಹಿನ್ನಲೆ ಕಂಕನಾಡಿ ನಗರ ಠಾಣೆಯಲ್ಲಿ ನಝೀರ್ ಮಂಗಳೂರು ಮತ್ತು Gandhian Nehruvian Magar ಎಂಬ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ASI ಶಿವಕುಮಾರ್ ದೂರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಅ. 21ರ ಮಂಗಳವಾರದಂದು ಅಪರಾಹ್ನ 3 ಗಂಟೆಗೆ ತಾನು ಸಾಮಾಜಿಕ ಜಾಲತಾಣಾ ಮಾನಿಟರಿಂಗ್ ನಿಗಾವಣೆ ಕರ್ತವ್ಯದ ಮೇರೆಗೆ ಫೇಸ್‌ಬುಕ್ ವೀಕ್ಷಿಸುತ್ತಿರುವಾಗ ದ್ವೇಷ ಹರಡುವ ಪೋಸ್ಟ್‌ ಕಾಣಿಸಿದೆ.

Nazeer Mangalore ಎಂಬ ಫೇಸ್‌ಬುಕ್ ಖಾತೆಯಿಂದ Mumthas Abdul Nelyadka ಮತ್ತು Mahesh Vikram Hegde ಎಂಬ ಫೇಸ್‌ಬುಕ್ ಖಾತೆಗಳಿಗೆ ಟ್ಯಾಗ್ ಮಾಡಿರುವ Gandhian Nehruvian Magar ಎಂಬ ಫೇಸ್‌ಬುಕ್ ಖಾತೆಯ ಮೂಲಕ Ai video but funny ಎಂಬ ಶೀರ್ಷೀಕೆ ಇರುವ 10 ಸೆಕೆಂಡ್‌ಗಳ ವಿಡಿಯೋ ತುಣುಕನ್ನು ಶೇರ್ ಮಾಡಿ ಸಮಾಜದ ವಿವಿಧ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟು ಹಾಕಿ ಅಪರಾಧ ಕೃತ್ಯ ಎಸಗುವಂತೆ ಮಾಡಲಾಗಿದೆ ಎಂದು ದೂರಲಾಗಿದೆ.

ಹೀಗಾಗಿ ನಝೀರ್‌ ಮಂಗಳೂರು ಮತ್ತು Gandhian Nehruvian Magar ಎಂಬ ಫೇಸ್‌ಬುಕ್ ಖಾತೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಇದನ್ನೂ ಓದಿ: Deepawali Bonus ಕಡಿಮೆ ಕೊಟ್ಟಿದ್ದಕ್ಕೆ ಟೋಲ್‌ ಸಿಬ್ಬಂದಿಗಳು ಮಾಡಿದ್ದೇನು ಗೊತ್ತಾ?

=================

 

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 36

You cannot copy content of this page