ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೆಟ್ಟ ನಿದ್ರೆ ಪ್ರೀ-ಡಯಾಬಿಟಿಸ್‌ಗೆ ಕಾರಣವಾಗಬಹುದು

ಆರೋಗ್ಯ : Tulu Times l ಇಂದಿನ ವೇಗದ ಜೀವನಶೈಲಿ, ತಡರಾತ್ರಿ ಕೆಲಸ, ಮೊಬೈಲ್ ಬಳಕೆ ಮತ್ತು ಒತ್ತಡ  ಇವೆಲ್ಲವೂ ನಮ್ಮ ನಿದ್ರೆಯ ಗುಣಮಟ್ಟವನ್ನು ಹಾಳುಮಾಡುತ್ತಿವೆ. ಆದರೆ ಕೆಟ್ಟ ನಿದ್ರೆ ಕೇವಲ ದಣಿವು ಮಾತ್ರವಲ್ಲ, ಆರೋಗ್ಯದ ದೊಡ್ಡ ಅಪಾಯಕ್ಕೂ ಕಾರಣವಾಗಬಹುದು ಎಂಬುದನ್ನು ಹೊಸ ಅಧ್ಯಯನಗಳು ಸೂಚಿಸುತ್ತಿವೆ. ಸರಿಯಾಗಿ ನಿದ್ರೆ ಮಾಡದಿದ್ದರೆ ಬೆಳಿಗ್ಗೆ ಎದ್ದಾಗಲೇ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿ ಪ್ರೀ-ಡಯಾಬಿಟಿಸ್ ಸ್ಥಿತಿಗೆ ತಳ್ಳಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ನಿದ್ರೆ ಮತ್ತು ರಕ್ತದ ಸಕ್ಕರೆಯ ಸಂಬಂಧ ;

ನಾವು ಆಳವಾಗಿ, ನಿರಂತರವಾಗಿ ನಿದ್ರೆ ಮಾಡದಿದ್ದರೆ ದೇಹದಲ್ಲಿ ಗ್ಲೂಕೋಸ್ ಚಯಾಪಚಯ ಸರಿಯಾಗಿ ನಡೆಯುವುದಿಲ್ಲ. ಇದರಿಂದ ಉಪವಾಸದ (fasting) ರಕ್ತಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಕಡಿಮೆ ನಿದ್ರೆ ಇನ್ಸುಲಿನ್ ಪ್ರತಿರೋಧವನ್ನು (insulin resistance) ಹೆಚ್ಚಿಸಿ, ಪ್ರೀ-ಡಯಾಬಿಟಿಸ್ ಹಾಗೂ ಟೈಪ್-2 ಡಯಾಬಿಟಿಸ್ ಅಪಾಯವನ್ನು ಹೆಚ್ಚಿಸುತ್ತದೆ.

ಹಾರ್ಮೋನ್‌ಗಳ ಪರಿಣಾಮ ;

ನಿದ್ರೆ ಕೊರತೆಯಿಂದ ದೇಹದಲ್ಲಿ ಒತ್ತಡ ಹಾರ್ಮೋನ್‌ಗಳಾದ ಕಾರ್ಟಿಸೋಲ್ ಪ್ರಮಾಣ ಹೆಚ್ಚುತ್ತದೆ. ಈ ಹಾರ್ಮೋನ್ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಆದ್ದರಿಂದ ರಾತ್ರಿ ನಿದ್ರೆ ಸರಿಯಾಗಿರದಿದ್ದರೆ ಬೆಳಿಗ್ಗೆ ದೇಹದ ಸಕ್ಕರೆ ನಿಯಂತ್ರಣ ವ್ಯವಸ್ಥೆ ಅಸ್ಥಿರವಾಗುತ್ತದೆ. ಅಧ್ಯಯನದಲ್ಲಿ ಲಕ್ಷಾಂತರ ಜನರ ನಿದ್ರೆ ಮಾದರಿಗಳನ್ನು ಪರಿಶೀಲಿಸಲಾಯಿತು. ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದವರು ರಕ್ತದಲ್ಲಿನ ಸಕ್ಕರೆ ಸಮಸ್ಯೆಗಳನ್ನು ಹೆಚ್ಚು ಅನುಭವಿಸಿದ್ದಾರೆ. 6 ರಿಂದ 8 ಗಂಟೆಗಳ ಮಧ್ಯೆ ನಿದ್ರೆ ಮಾಡಿದವರಲ್ಲಿ ಆರೋಗ್ಯದ ಅಪಾಯ ಕಡಿಮೆ ಕಂಡುಬಂದಿದೆ. ನಿದ್ರೆ ಅವಧಿ ಕಡಿಮೆಯಾದಂತೆ ಮರಣದರ ಸಹ ಹೆಚ್ಚಾಗಿರುವುದನ್ನು ಅಧ್ಯಯನ ಸೂಚಿಸಿದೆ.

ಭಾರತದಲ್ಲಿ ಈಗಾಗಲೇ ಕೋಟ್ಯಾಂತರ ಜನರು ಪ್ರೀ-ಡಯಾಬಿಟಿಸ್ ಸ್ಥಿತಿಯಲ್ಲಿ ಇದ್ದಾರೆ ಎಂದು ಆರೋಗ್ಯ ವರದಿಗಳು ತಿಳಿಸಿವೆ. ನಗರ ಜೀವನ, ತಡರಾತ್ರಿ ಆಹಾರ, ಸ್ಕ್ರೀನ್ ಬಳಕೆ ಮತ್ತು ಮಾನಸಿಕ ಒತ್ತಡ — ಇವುಗಳು ನಿದ್ರೆ ಗುಣಮಟ್ಟವನ್ನು ಇನ್ನಷ್ಟು ಹಾಳುಮಾಡುತ್ತಿವೆ. ಇದರಿಂದ ಡಯಾಬಿಟಿಸ್ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚುತ್ತಿದೆ.

Poor sleep can lead to pre-diabetes – ತುಳುಟೈಮ್ಸ್

ಇದನ್ನೂ ಓದಿ : ಧ್ಯಾನ ಮಾಡಿದರೆ ನಿಮ್ಮಲ್ಲಿ ಏನಾದರು ಬದಲಾವಣೆ ಕಾಣುತ್ತಿದೆಯೇ ?

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :‌https://youtu.be/SDL5CAMpIQ0?si=PGs41XL5D72eLHYu

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page