Deepawali Bonus: ಭಾರತದಲ್ಲಿ ದೀಪಾವಳಿಗೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ದೀಪಾವಳಿಯಂದು ಉದ್ಯೋಗಿಗಳಿಗೆ ಮಾಲೀಕ ಬೋನಸ್, ಉಡುಗೊರೆ ಕೊಡುವುದು ಸರ್ವೇ ಸಾಮಾನ್ಯ. ಇಲ್ಲೊಂದು ಕಡೆ ವಿಚಿತ್ರ ಘಟನೆ ನಡೆದಿದೆ. ಮಾಲೀಕ ಕೊಟ್ಟ ಬೋನಸ್ನಿಂದ ಅಸಮಾಧಾನಗೊಂಡ ಸಿಬ್ಬಂದಿಗಳು ಹೀಗೆ ಮಾಡೋದಾ? ಸಿಬ್ಬಂದಿಗಳು ಏನ್ ಮಾಡಿದ್ರು? ಮುಂದೆ ಓದಿ…
ಟೋಲ್ ಮಾಲೀಕ ಕೊಟ್ಟ ಅಲ್ಪ ಪ್ರಮಾಣದ ದೀಪಾವಳಿ ಬೋನಸ್ನಿಂದ ಅಸಮಾಧಾನಗೊಂಡ ಟೋಲ್ ಬೂತ್ ಸಿಬ್ಬಂದಿಗಳು ಎಲ್ಲ ವಾಹನಗಳನ್ನೂ ಫ್ರೀಯಾಗಿ ಬಿಟ್ಟಿದ್ದಾರೆ. ಆ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದರ ವಿಡಿಯೋ ಸಾಕಷ್ಟು ವೈರಲ್ ಆಗ್ತಿದೆ.
ಹೌದು.. ಆಗ್ರಾ-ಲಖನೌ ಹೆದ್ದಾರಿಯ ಫತೇಹಾಬಾದ್ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಟೋಲ್ ಪ್ಲಾಜಾ ಮಾಲೀಕತ್ವ ಹೊಂದಿರುವ ಶ್ರೀ ಸೈನ್ & ದಾತಾರ್ ಕಂಪನಿ ತನ್ನ ಸಿಬ್ಬಂದಿಗಳಿಗೆ ಕೇವಲ 1100 ರೂ ಬೋನಸ್ ನೀಡಿತ್ತು. ಹೆಚ್ಚು ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಸಿಬ್ಬಂದಿಗೆ ನಿರಾಸೆಯಾಗಿದೆ.
ಅಲ್ಪ ಪ್ರಮಾಣದ ಬೋನಸ್ ನಿಂದಾಗಿ ಅಸಮಾಧಾನಗೊಂಡಿದ್ದ ಸಿಬ್ಬಂದಿಗಳು ಈ ಬಗ್ಗೆ ಮಾಲೀಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಆಕ್ರೋಶಗೊಂಡ ಸಿಬ್ಬಂದಿಗಳು ಟೋಲ್ ಪ್ಲಾಜಾದ ಎಲ್ಲ ಗೇಟ್ ಗಳನ್ನು ತೆರೆದಿದ್ದಾರೆ. ಯಾವನೇ ಒಬ್ಬ ಸಿಬ್ಬಂದಿ ಕೂಡ ಕರ್ತವ್ಯ ನಿರ್ವಹಿಸಿಲ್ಲ. ಎಲ್ಲ ವಾಹನಗಳನ್ನು ಫ್ರೀಯಾಗಿ ಬಿಟ್ಟಿದ್ದಾರೆ. ಈ ವೇಳೆ ನೂರಾರು ವಾಹನಗಳು ಫ್ರೀಯಾಗಿ ಟೋಲ್ ಬೂತ್ ಹಾದು ಹೋಗಿವೆ.
ಸಿಬ್ಬಂದಿಗಳ ಧೋರಣೆಯಿಂದ ಬೆಚ್ಚಿಬಿದ್ದ ಟೋಲ್ ಮಾಲೀಕ ಬೇರೆ ಟೋಲ್ ಗಳಿಂದ ಸಿಬ್ಬಂದಿ ಕರೆಸಿ ಟೋಲ್ ನಿರ್ವಹಣೆಗೆ ಮುಂದಾಗಿದ್ದಾರೆ. ಈ ವೇಳೆ ಪ್ರತಿಭಟನಾ ನಿರತ ಸಿಬ್ಬಂದಿಗಳು ಕೆಲಸ ಮಾಡದಂತೆ ತಡೆದಿದ್ದಾರೆ. ಇದು ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟೋಲ್ ಸಿಬ್ಬಂದಿ ಮತ್ತು ಮಾಲೀಕರ ನಡುವೆ ಸಂಧಾನ ನಡೆಸಿ ವಿವಾದ ಅಂತ್ಯಗೊಳಿಸಲು ಪ್ರಯತ್ನಿಸಿದರು. ಟೋಲ್ ಕಂಪನಿಯ ಹಿರಿಯ ಅಧಿಕಾರಿಗಳು ತಕ್ಷಣದ ಪರಿಹಾರವಾಗಿ ಶೇಕಡಾ 10 ರಷ್ಟು ವೇತನ ಹೆಚ್ಚಳ ಭರವಸೆ ನೀಡಿದರು.
ಈ ಭರವಸೆಯ ನಂತರ, ನೌಕರರು ಕೆಲಸವನ್ನು ಪುನರಾರಂಭಿಸಲು ಒಪ್ಪಿಕೊಂಡಿದ್ದಾರೆ. ಎರಡು ಗಂಟೆಗಳ ಅಡಚಣೆಯ ನಂತರ ಸಾಮಾನ್ಯ ಟೋಲ್ ಕಾರ್ಯಾಚರಣೆ ಪುನಾರಂಭವಾಯಿತು.
ಶ್ರೀ ಸೈನ್ & ದಾತಾರ್ ಸೀಮಿತ ದೀಪಾವಳಿ ಬೋನಸ್ನ ನಿರ್ಧಾರಕ್ಕೆ ಬದ್ಧರಾಗಿದ್ದರು, ಮಾರ್ಚ್ನಲ್ಲಿ ಒಪ್ಪಂದವನ್ನು ವಹಿಸಿಕೊಂಡಿದೆ ಮತ್ತು ಆದ್ದರಿಂದ ಪೂರ್ಣ ವರ್ಷದ ಬೋನಸ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರದಾನ
==============
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











