ಜೀವನಶೈಲಿ: Tulu Times | ಪ್ರತಿಯೊಬ್ಬರಿಗೂ ದೇಹದ ತೂಕ ಕಡಿಮೆ ಆಗಿ ಸುಂದರವಾಗಿ ಕಾಣಬೇಕು ಅನ್ನೋ ಹಂಬಲ ಇದ್ದೇ ಇರುತ್ತೆ. ಅದ್ರಲ್ಲೂ ನಮ್ಮ ಹೆಣ್ಣು ಮಕ್ಕಳಂತೂ ಪ್ರತೀ ದಿನ ಡಯೆಟ್ ಅಂತ ಯೋಚಿಸ್ತಾನೆ ಇರುತ್ತೀವಿ. ಹಾಗಾದ್ರೆ ನೀವು ಸಮ ತೂಕ ಹೊಂದೋಕೆ ಏನು ಮಾಡಬೇಕು ನೋಡೋಣ ಈ ಸ್ಟೋರಿಲಿ.
ದೇಹದ ಬೊಜನ್ನು ಕರಗಿಸಲು ನಾವು ತರಹೇವಾರಿ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಬೆಳಗ್ಗಿನ ಜಾವ ಉತ್ತಮ ಹೈ ಪ್ರೋಟಿನ್ ಆಹಾರವನ್ನೇ ಸೇವಿಸುವುದು ಒಳ್ಳೆಯದು. ಬೆಳಗ್ಗೆ ಉತ್ತಮ ಆಹಾರ ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕ ಕಡಿಮೆ ಆಗಲು ಸಹಾಯಕ. ನಿಮ್ಮ ದಿನವನ್ನು ನೀರು ಸೇವಿಸುವುದರಿಂದ ಆರಂಭಿಸುವುದು ಒಳ್ಳೆಯದು.
ಇದು ದೇಹದಲ್ಲಿ ಕ್ಯಾಲೊರಿ ನಿಯಂತ್ರಿಸಲು ಸಹಾಯಕ. ಬೆಳಗ್ಗೆ ಇಡ್ಲಿ ಅಥವಾ ದೋಸೆಯನ್ನು ತಿನ್ನಬಹುದು. ಈ ಆಹಾರವು ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿ. ಆಹಾರ ತಜ್ಞರು ಚಹಾ ಕುಡಿಯುವದನ್ನು ಬಿಡಬೇಕು. ಗ್ರೀನ್ ಟೀ ಕುಡಿದರೆ ಒಳ್ಳೆಯದು. ಉಪಾಹಾರದಲ್ಲಿ ಮೊಟ್ಟೆಗಳನ್ನು ಸೇವಿಸಿ. ಇದರಲ್ಲಿ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತದೆ. ಮೊಟ್ಟೆಯ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ. ಬೆಳಗಿನ ಉಪಾಹಾರಕ್ಕಾಗಿ ನೀವು ಬೇಯಿಸಿದ ಮೊಟ್ಟೆಗಳನ್ನು ಸೇವಿಸಿ. ಮೊಳಕೆಯಿಂದ ಕೂಡಿದ ಸಲಾಡ್ ತಿನ್ನಿ. ಇದು ರಿಚ್ ಫೈಬರ್ನಿಂದ ಕೂಡಿರುತ್ತದೆ. ಫೈಬರ್ ಹೊಂದಿರುವ ಮೊಳಕೆ, ತರಕಾರಿಗಳನ್ನು ತಿನ್ನಿ. ಉದ್ದಿನ ಬೇಳೆಯಿಂದ ತಯಾರಿಸಿದ ದೋಸೆಯನ್ನು ತಿನ್ನಿ. ಬೆಳಗ್ಗೆ ಬಾದಾಮಿ ಹಾಲು ಕುಡಿದರೆ ಒಳ್ಳೆಯದು.
What should I do to lose weight and become like a slender vine?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










