ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಹೊಳೆಯುವ ತ್ವಚೆ ನಿಮ್ಮದಾಗಲು ಸರಳ ಟಿಪ್ಸ್‌ ಇಲ್ಲಿದೆ ನೋಡಿ!

ಜೀವನಶೈಲಿ: Tulu Times | ಮನುಷ್ಯನಿಗೆ ವಯಸ್ಸಾದಂತೆ ಆತನ ದೇಹದಲ್ಲಿ ನಾನಾ ಬದಲಾವಣೆಗಳು ನಡೆಯುತ್ತವೆ. ಅದ್ರಲ್ಲೂ ತ್ವಚೆಯ ಆರೋಗ್ಯ ಕುಂದುತ್ತದೆ. ಹಾಗಾದ್ರೆ ನಿಮ್ಮ ಚರ್ಮ ಹೊಳೆಯಬೇಕಾದರೆ ಮಾಡಬೇಕಾದ ಸರಳ ಉಪಾಯಗಳೇನು ನೋಡೋಣ ಈ ಸ್ಟೋರಿಲಿ..

ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಹಲವರು ದುಬಾರಿ ಸ್ಕಿನ್‌ಕೇರ್‌, ಮೇಕಪ್‌ ಉತ್ಪನ್ನಗಳ ಮೊರೆ ಹೋಗ್ತಾರೆ. ಆದ್ರೆ ಇದ್ಯಾವುದ ಅವಶ್ಯಕತೆಯೇ ಇಲ್ಲ, ಬದಲಾಗಿ ಆರೋಗ್ಯಕರ, ಸಮತೋಲಿತ ಆಹಾರಕ್ರಮವನ್ನು ಪಾಲಿಸುವ ಮೂಲಕ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು.  ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್‌ಗಳು, ಔಷಧಿಗಳು ಮತ್ತು ಸೌಂದರ್ಯವರ್ಧಕಗಳು ಚರ್ಮಕ್ಕೆ ತಾತ್ಕಾಲಿಕ ಹೊಳಪನ್ನು ನೀಡಬಹುದು.

ವಿಟಮಿನ್ ಸಿ ಚರ್ಮಕ್ಕೆ ಅತ್ಯಂತ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳಲ್ಲಿ ಒಂದಾಗಿದೆ.ನೀವು ಕಿತ್ತಳೆ, ಕಿವಿ, ಪಪ್ಪಾಯಿ, ಸ್ಟ್ರಾಬೆರಿ ಮತ್ತು ಪೇರಳೆಯಂತಹ ವಿಟಮಿನ್‌ ಸಿ ಯಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವನೆ ಮಾಡಿದರೆ ಒಳ್ಳೆಯದು. ಬಾದಾಮಿ, ವಾಲ್‌ನಟ್ಸ್, ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳು ಚರ್ಮವನ್ನು ಮೃದುವಾಗಿಡಲು ಒಳ್ಳೆಯದು. ಡ್ರೈಫ್ರೂಟ್ಸ್‌ಗಳನ್ನು ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.ಪಾಲಕ್, ಮೆಂತ್ಯ, ಬ್ರೊಕೊಲಿಯಂತಹ ಹಸಿರು ತರಕಾರಿಗಳು ಕಬ್ಬಿಣ, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಸಿಹಿ ಗೆಣಸನ್ನು ತಿನ್ನುವುದರಿಂದ, ತ್ವಚೆಯ ಕಾಂತಿ ಹೆಚ್ಚಾಗುತ್ತದೆ.ದಾಳಿಂಬೆಯ ನಿಯಮಿತ ಸೇವನೆಯು ಚರ್ಮವನ್ನು ಕಾಂತಿಯುತಗೊಳಿಸುತ್ತದೆ. ಸೌತೆಕಾಯಿ, ಕಲ್ಲಂಗಡಿ ನೀರಿನಲ್ಲಿ ಸಮೃದ್ಧವಾಗಿದ್ದು, ಇವು ದಿನವಿಡೀ ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡುತ್ತವೆ.

Here are some simple tips to get glowing skin!-ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page