ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿಗೆ ವಸತಿಗೃಹಗಳನ್ನು ಒದಗಿಸಲು ಡಾ| ಪರಮೇಶ್ವರ್‌ ಸೂಚನೆ !

ಮಂಗಳೂರು: Tulu Times | ನಾಲ್ಕು ವರ್ಷದೊಳಗೆ ಎಲ್ಲ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿಗೆ ವಸತಿಗೃಹಗಳನ್ನು ಒದಗಿಸಲಾಗುವುದು ಎಂದು ಗೃಹ ಸಚಿವ ಡಾ| ಪರಮೇಶ್ವರ್‌ ತಿಳಿಸಿದ್ದಾರೆ.

ಮಂಗಳೂರು ನಗರ ಮತ್ತು ಜಿಲ್ಲಾ ಪೊಲೀಸ್‌ ಅಧಿಕಾರಿ- ಸಿಬಂದಿಯ ನೂತನ ವಸತಿ ಗೃಹಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪಿಸಿ ಮಾತನಾಡಿದ್ದಾರೆ.  ಈ ವೇಳೆ, ಮಂಗಳೂರಿಗೆ ಸೀಮಿತವಾಗಿರುವ ಪೊಲೀಸ್‌ ಅಧಿಕಾರಿ ಮತ್ತು ಸಿಬಂದಿಗೆ 100 ಮನೆಗಳನ್ನು ನಿರ್ಮಿಸುತ್ತೇವೆ. ಪೊಲೀಸ್‌ ಇಲಾಖೆ ಸುವ್ಯವಸ್ಥಿತವಾಗಿದ್ದರೆ ಸಮಾಜ ಅಭಿವೃದ್ಧಿ ಸಾಧ್ಯ ಎಂಬ ಮನೋಭಾವದಿಂದ 2015ರಲ್ಲಿ ಈ ವಸತಿ ಯೋಜನೆಯನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ 1.10 ಲಕ್ಷ ಪೊಲೀಸ್‌ ಅಧಿಕಾರಿ ಸಿಬಂದಿ ಇದ್ದು, ಈ ವರೆಗೆ ಶೇ. 40 ರಷ್ಟು ಮಂದಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ ಎಂದರು. ಮಂಗಳೂರಿನಲ್ಲಿ ಎರಡು ಹೊಸ ಠಾಣೆಗಳಿಗೆ ಪೊಲೀಸ್‌ ಠಾಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಹಳೆ ಕಟ್ಟಡಗಳ ಬದಲಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಕರಾವಳಿ ಕಾವಲು ಪಡೆಯನ್ನು ಬಲಗೊಳಿಸುವ ಸಂಬಂಧ ವರದಿಯೊಂದನ್ನು ಶೀಘ್ರ ಹಸ್ತಾಂತರಿಸು ವುದಾಗಿ ತಿಳಿಸಿದರು. ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಶಾಲೆಟ್‌ ಪಿಂಟೋ, ಸ್ಟ್ಯಾನಿ ಅಲ್ವಾರಿಸ್‌, ಎಂ.ಎ. ಗಫೂರ್‌, ಟಿ.ಎಂ.ಶಹೀದ್‌ ತೆಕ್ಕಿಲ್‌, ಪಶ್ಚಿಮ ವಲಯ ಐಜಿಪಿ ಅಮಿತ್‌ ಸಿಂಗ್‌, ಜಿಲ್ಲಾ ಎಸ್‌ಪಿ ಡಾ| ಅರುಣ್‌ ಕುಮಾರ್‌, ವಿಶೇಷ ಕಾರ್ಯಪಡೆಯ ಐಜಿಪಿ ಪ್ರಕಾಶ್‌ ಗೌಡ ಇದ್ದರು.

ಜಿಲ್ಲಾ ಕಾರಾಗೃಹ ನಗರದ ಮಧ್ಯ ಭಾಗದಲ್ಲಿರುವ ಕಾರಣ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಹೀಗಾಗಿ, ಮುಡಿಪುವಿನ ನಿರ್ಮಾಣ ಹಂತದಲ್ಲಿರುವ ಜೈಲಿಗೆ ಅಗತ್ಯ ನೆರವು ನೀಡುವಂತೆ ಕೋಇದ್ದೇನೆ. ಮುಖ್ಯ ಮಂತ್ರಿಗಳು ಬಜೆಟ್‌ ನಲ್ಲಿ ಅನುದಾನ ನೀಡುವ ಭರವಸೆ ಇದೆ. ಸುತ್ತಲೂ ಸುಭದ್ರ ಆವರಣ ಗೋಡೆ, ಗೇಟ್‌ ಹಾಗೂ ಇತರ ಭದ್ರತಾ ವ್ಯವಸ್ಥೆಗಳಿಗೆ ಸುಮಾರು 120 ಕೋಟಿ ರೂ.ಗಳ ಅಗತ್ಯವಿದೆ ಎಂದರು. ಮಂಗಳೂರಿನಲ್ಲೂ  ಡ್ರಗ್ಸ್‌ ಪ್ರಕರಣಗಳು ನಿಯಂತ್ರಣದಲ್ಲಿವೆ ಎಂದು ಪೊಲೀಸ್‌ ವರದಿಗಳು ತಿಳಿಸಿವೆ. ಪೋಷಕರು ಮನಸ್ಸು ಮಾಡಿದ್ದಲ್ಲಿ ಮಕ್ಕಳನ್ನು ನಿಯಂ ತ್ರಿಸಬಹುದು ಎಂದು ಸೂಚನೆ ನೀಡಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

Dr. Parameshwar instructs to provide accommodation for police officers and staff!- ತುಳುಟೈಮ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 151

You cannot copy content of this page