ಮಧ್ಯಪ್ರದೇಶ: Tulu Times | ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಹಿಂದೂವಿನಂತೆ ವೇಷ ಧರಿಸಿ ಯುವತಿಯೊಂದಿಗೆ ಮಹಾಕಾಲನ ದರ್ಶನಕ್ಕೆ ಬಂದ ಮುಸ್ಲಿಂ ಯುವಕನಿಗೆ ಭಜರಂಗದಳದ ಯುವಕರು ಥಳಿಸಿರುವ ಘಟನೆ ನಡೆದಿದೆ.
ಮೊಹಾಲಿಯ ಹಿಂದೂ ಮಹಿಳೆ ಹಾಗೂ ಮುಸ್ಲಿಂ ಯುವಕ ಇಬ್ಬರು ಉಜ್ಜಯಿನಿಯ ಹೊಟೇಲೊಂದರಲ್ಲಿ ರೂಮ್ ಪಡೆದು ಉಳಿದುಕೊಂಡಿದ್ದರು.
ಈ ವಿಚಾರ ಭಜರಂಗದಳದವರಿಗೆ ತಿಳಿಯುತ್ತಿದ್ದಂತೆ ಭಜರಂಗದಳದವರು ಆ ಮುಸ್ಲಿಂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಾರಿಸುತ್ತಿದ್ದಂತೆ ಆತ ತಾನು ಮುಸ್ಲಿಂ ಹೆಸರು ಜಾಫರ್ ಖಾನ್ ಎಂದು ಹೇಳಿದ್ದಾನೆ. ಭಜರಂಗದಳದವರು ಆತನನ್ನು ವಿಚಾರಿಸಿದಾಗ ಆತ ತಾನು ಶಿವನ ಭಕ್ತನೆಂದು ಮಹಾಕಾಳೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಬಂದಿದ್ದಾಗಿ ಹೇಳಿದ್ದಾನೆ. ಆದ್ರೆ ನಂತರ ಜಾಫರ್ ಖಾನ್ ಎಂದು ಗೊತ್ತಾಗಿದೆ.
ಈತನ ವೇಷ ನೋಡಿದ್ರೆ, ಈತ ಹಿಂದೂ ಅಲ್ಲ ಎಂಬ ಯಾವುದೇ ಅನುಮಾನ ಬರುವುದಕ್ಕೆ ಸಾಧ್ಯವಿರಲಿಲ್ಲ. ಯಾಕೆಂದರೆ, ಆತ ಹಳದಿ ಬಣ್ಣದ ಬಟ್ಟೆ ಕುರ್ತಾ ಹಾಗೂ ಧೋತಿ ಧರಿಸಿದ್ದ. ಕತ್ತಿನಲ್ಲಿ ರುದ್ರಾಕ್ಷಿ ಮಾಲೆ ಹಾಕಿದ್ದ ಆತನ ಹಣೆಯ ಮೇಲೆ ವಿಭೂತಿ ಇತ್ತು. ಇನ್ನು ಭಜರಂಗದಳದವರು ಮಾಡಿರುವ ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು ಒಂದು ಗಂಟೆ ಹೋಟೆಲ್ ಹೊರಗೆ ಕಾದ ಭಜರಂಗದಳದವರಿಗೆ ನಂತರ ಮಾಹಿತಿ ಪಡೆದಾಗ ವಿಚಾರ ತಿಳಿದಿದೆ. ಪುರುಷ ಹಾಗೂ ಮಹಿಳೆ ಇಬ್ಬರೂ ಮೊಹಾಲಿಯ ನಿವಾಸಿಗಳು ಎಂದು ನಾನಖೇಡಾ ಪೊಲೀಸ್ ಠಾಣೆಯ ಉಸ್ತುವಾರಿ ನರೇಂದ್ರ ಯಾದವ್ ತಿಳಿಸಿದ್ದಾರೆ. ಮಹಿಳೆಗೆ ಅವನ ಧರ್ಮದ ಬಗ್ಗೆ ತಿಳಿದಿತ್ತು ಮತ್ತು ಅವರು ಮೊದಲೇ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು. ಪೊಲೀಸರು ಅವರ ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದ್ದು, ದೂರು ಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
How was a Muslim youth disguised as a Hindu caught?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










