ಬೆಳ್ತಂಗಡಿ:Tulu Times | ಫಾತಿಮಾ ಹೆಲ್ತ್ ಫೌಂಡೇಶನ್, ಇಂಡಿಯಾನ ಆಸ್ಪತ್ರೆ ವತಿಯಿಂದ ಮದ್ದಡ್ಕದಲ್ಲಿ 68 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.
ಫೆ.17 ರಂದು ಬೆಳ್ತಂಗಡಿ ತಾಲೂಕಿನ ಮದ್ಯಡ್ಕದಲ್ಲಿ ಪ್ರಖ್ಯಾತ ಹೃದಯರೋಗ ತಜ್ಞರಾದ ಡಾ. ಯೂಸುಫ್ ಕುಂಬ್ಳೆ ಅವರ ಸಹಯೋಗದೊಂದಿಗೆ 68 ಕುಟುಂಬಗಳಿಗೆ 1.50 ಲಕ್ಷ ರೂ. ವೆಚ್ಚದಲ್ಲಿ ರಂಝಾನ್ ಆಹಾರದ ಕಿಟ್ ವಿತರಿಸಲಾಯಿತು. ಈ ವೇಳೆ, ಮದ್ಯಡ್ಕ ನೂರುಲ್ ಹುದಾ ಜುಮ್ಮಾ ಮಸ್ಕಿದ್ ಖತೀಬ್ ಹಾಫಿಲ್ ಮುಈನುದ್ದೀನ್ ಅಮ್ಮದಿ ಉದ್ಘಾಟಿಸಿ, ಪವಿತ್ರ ಇಸ್ಲಾಂ ಧರ್ಮದ ಸಂದೇಶ ಹಾಗೂ ದಾನ ಧರ್ಮಕ್ಕೆ ಇಸ್ಲಾಂನಲ್ಲಿರುವ ಮಹತ್ವ ಸಾರಿದರು.
ಅತಿಥಿಗಳಾಗಿ ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಸಾಹಬ್, ಮದ್ದಡ್ಕ ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಕೋಶಾಧಿಕಾರಿ ಉಸ್ಮಾನ್ ಹಾಜಿ ಆಲಂದಿಲ, ಕೆಎಮ್‌ಜಿ ಸರ್ಕಲ್ ಅಧ್ಯಕ್ಷ ಹಮೀದ್ ಮುಸ್ಲಿಯಾರ್ ಗುರುವಾಯನಕರೆ ಶುಭ ಕೋರಿದರು. ಜಮಾಅತ್ ಉಪಾಧ್ಯಕ್ಷ ಹೆಚ್ ಎಂ ಹಸನಬ್ಬ ಮದ್ದಡ್ಕ, ಶಂಶುಲ್ ಉಲಮಾ ಕ್ರಿಯಾ ಸಮಿತಿಯ ಅಧ್ಯಕ್ಷ ಶಾಕಿರ್, ಎಸ್‌ಕೆಎಸ್ಸೆಸ್ಸೆಫ್ ಮದ್ದಡ್ಕ ಶಾಖೆಯ ಅಧ್ಯಕ್ಷ ಇಲ್ಯಾಸ್ ಮದ್ದಡ್ಕ, ಹಿರಿಯರಾದ ಅಚ್ಚಬ್ಬ ಮದ್ದಡ್ಕ, ಹಾಜಿ ಶಮೀಮ್ ಯೂಸುಫ್, ಅಬ್ಬಾಸ್ ಮದ್ದಡ್ಕ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಮಾರಂಭದಲ್ಲಿ ಒಟ್ಟು 10 ಕುಟುಂಬಗಳಿಗೆ ನಿಧಿ ಹಸ್ತಾಂತರಿಸಲಾಯಿತು.
Belthangady: Ramzan kits distributed to 68 families in Maddadka- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










