ಕರ್ನಾಟಕ : Tulu Times l ಶಾಲೆ-ಕಾಲೇಜು ವಿದ್ಯಾರ್ಥಿಗಳ ಹಾಜರಾತಿಯನ್ನು ನಿಖರವಾಗಿ ದಾಖಲಿಸಲು ಕರ್ನಾಟಕ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳ ಮುಖವನ್ನು ಗುರುತಿಸುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಸರ್ಕಾರ ಅನುಮೋದನೆ ನೀಡಿದೆ.
ಫೆಬ್ರವರಿ 16, 2026ರಂದು ಆದೇಶ ಹೊರಡಿಸಲಾಗಿದ್ದು, ಈ ಯೋಜನೆ ರಾಜ್ಯದ ಇ-ಗವರ್ನೆನ್ಸ್ ಕಾರ್ಯಕ್ರಮದಲ್ಲಿ ಪ್ರಮುಖ ಮೈಲುಗಲ್ಲಾಗಿ ಪರಿಗಣಿಸಲಾಗಿದೆ. ಈ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಸಾಧನೆಗಳನ್ನು ಗಮನಿಸುವ Student Achievement Tracking System (SATS) ಹಾಗೂ Karnataka Advanced Attendance Management System (KAAMS) ಜೊತೆ ಸಂಪರ್ಕಿಸಲಾಗುತ್ತದೆ.
ಯೋಜನೆಯ ಉದ್ದೇಶ ;
ಈ ವ್ಯವಸ್ಥೆಯ ಮುಖ್ಯ ಗುರಿ ಏನೆಂದರೆ ತ್ವರಿತ ಮತ್ತು ನಿಖರ ಹಾಜರಾತಿ ದಾಖಲಿಸುವುದಾಗಿದೆ. AI/ML ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳನ್ನು ತಕ್ಷಣ ಗುರುತಿಸಿ ಹಾಜರಾತಿ ದಾಖಲಿಸಲಾಗುತ್ತದೆ. ಕಡಿಮೆ ಬೆಳಕಿನಲ್ಲಿಯೂ ಮುಖ ಗುರುತಿಸುವ ಸಾಮರ್ಥ್ಯ ಇದಕ್ಕೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಗಾಗಿ ಒಟ್ಟು ₹2.16 ಕೋಟಿ ವೆಚ್ಚವನ್ನು ಮೀಸಲಿರಿಸಲಾಗಿದೆ. ಇದರಿಂದ ಹಾಜರಾತಿ ದಾಖಲೆಗಳಲ್ಲಿ ನಿಖರತೆ ಹೆಚ್ಚಳ, ಶಿಕ್ಷಕರ ಆಡಳಿತ ಭಾರ ಕಡಿತ, ವಿದ್ಯಾರ್ಥಿಗಳ ಹಾಜರಾತಿ ಮೇಲ್ವಿಚಾರಣೆ ಸುಧಾರಣೆ, ರಾಜ್ಯದ ಶಿಕ್ಷಣ ವ್ಯವಸ್ಥೆಯ ಡಿಜಿಟಲ್ ಪರಿವರ್ತನೆಗೆ ಉತ್ತೇಜನ ನೀಡುವುದಾಗಿದೆ. ಈ ಯೋಜನೆಯನ್ನು ಇ-ಗವರ್ನೆನ್ಸ್ ಕೇಂದ್ರ (Centre for e-Governance) ಮೇಲ್ವಿಚಾರಣೆ ಮಾಡಲಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳ ದೊಡ್ಡ ಸಂಖ್ಯೆಯನ್ನು ನಿರ್ವಹಿಸುವಂತೆ ವ್ಯವಸ್ಥೆಯನ್ನು ವಿಸ್ತರಿಸಬಹುದಾಗಿದೆ. ಈ ಕ್ರಮವು ಶಿಕ್ಷಣ ಕ್ಷೇತ್ರದಲ್ಲಿ AI ಬಳಕೆಯನ್ನು ಹೆಚ್ಚಿಸುವ ಸರ್ಕಾರದ ದೃಷ್ಠಿಕೋನವನ್ನು ತೋರಿಸುತ್ತದೆ. ಯಶಸ್ವಿಯಾದರೆ ಇತರ ರಾಜ್ಯಗಳಿಗೂ ಮಾದರಿಯಾಗುವ ಸಾಧ್ಯತೆ ಇದೆ.
AI face recognition system for student attendance in Karnataka – ತುಳುಟೈಮ್ಸ್
ಇದನ್ನೂ ಓದಿ : ಶಿವರಾಜ್ ಕುಮಾರ್ ಕೈಜೋಡಿಸಿದ ಯುವ ಸರ್ಕಾರ್ ಸಿನಿಮಾ !
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wrBMy_DIHWs?si=p4YmSOE8Zu-FyJxY










