ಪುತ್ತೂರು : Tulu Times l ಶಾಲೆ, ಕಾಲೇಜು ಶಿಕ್ಷಣ ಅಂದ್ರೆ ಅಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ಕುಳಿತು ಭವಿಷ್ಯದ ಉತ್ತಮ ಗುರಿಗೆ ಕನಸಿನ ಮೆಟ್ಟಿಲೇರುತ್ತಾ, ಶಿಕ್ಷಕರು ಮಾಡುವ ಪಾಠವನ್ನು ಶ್ರದ್ಧೆಯಿಂದ ಕಲಿಯುವುದಾಗಿರುತ್ತದೆ. ಆದರೆ, ಇಲ್ಲೊಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಅತೀವ ಸಮಸ್ಯೆಯೊಂದನ್ನು ಅನುಭವಿಸುತ್ತಿದ್ದು, ತರಗತಿಯಲ್ಲಿ ಕುಳಿತುಕೊಳ್ಳಲೂ ಸಾಧ್ಯವಾಗದಷ್ಟು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಹೌದು… ! ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿ ಕೊಠಡಿಯೊಳಗೆ ಧೂಳು ತುಂಬಿಕೊಂಡಿದ್ದು ತರಗತಿಯೊಳಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿನಿಯರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ ಎಂದು ಆರೋಪಿಸಿ ಫೆ.16ರಂದು ಕಾಲೇಜಿನ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಕಾಲೇಜಿನ ಪಕ್ಕದಲ್ಲಿ ಸರಕಾರಿ ಆಸ್ಪತ್ರೆಯ ಕಾಮಗಾರಿಗಳು ನಡೆಯುತ್ತಿರುವುದರಿಂದ ಮಕ್ಕಳ ಪಾಠಗಳಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲೇಜಿನಲ್ಲಿ ತರಗತಿ ಕೊಠಡಿಗಳ ಸಮಸ್ಯೆಯಿದೆ. ಈ ಬಗ್ಗೆ ಕಾಲೇಜು ಶಿಕ್ಷಣ ಆಯುಕ್ತರು, ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ ಎಂದು ಪ್ರಾಂಶುಪಾಲರು ಹೇಳುತ್ತಿದ್ದು ರಸ್ತೆಯಲ್ಲಿ ಕುಳಿತ ಮಕ್ಕಳ ಸಮಸ್ಯೆ ಬಗ್ಗೆ ಕಾಲೇಜು ಅಭಿವೃದ್ಧಿ ಸಮಿತಿ ಎಚ್ಚೆತ್ತುಕೊಳ್ಳಬೇಕು. ಈ ಸಮಿತಿಯ ಅಧ್ಯಕ್ಷರೇ ಶಾಸಕರು. ಅವರ ಕಚೇರಿಯ ಪಕ್ಕದಲ್ಲೇ ಇದ್ದರೂ ಅವರ ಗಮನಕ್ಕೂ ಬಂದಿದ್ದರೂ ಮಕ್ಕಳನ್ನು ಬದಿಯಲ್ಲಿ ಹೋರಾಟ ಮಾಡುವಂತೆ ಮಾಡಿರುವುದು ಪ್ರಜ್ಞಾವಂತ ನಾಗರಿಕರ ಲಕ್ಷಣವಲ್ಲ. ವಿದ್ಯಾರ್ಥಿನಿಯರುವ ಬೀದಿಗಿಳಿದದ್ದು, ಹೋರಾಟ ನಡೆಸುವ ಮೂಲಕ ಪುತ್ತೂರಿನ ಸಮಸ್ಯೆಯ ಮೂಲಕ ಪುತ್ತೂರಿನ ಶಿಕ್ಷಣದ ಬಗ್ಗೆ ರಾಜ್ಯಕ್ಕೆ ಕೆಟ್ಟ ಸಂದೇಶ ಹೋಗುತ್ತಿದೆ. ಮಕ್ಕಳ ಪರವಾಗಿ ನಾವಿದ್ದೇವೆ. ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಪಕ್ಷ ಹಾಗೂ ಮಾಜಿ ಜನಪ್ರತಿನಿಧಿಗಳು ಬೆಂಬಲ ನೀಡಲಿದ್ದೇವೆ ಎಂದು ಮಾಜಿ ಶಾಸಕರು, ಸಂಜೀವ ಮಠಂದೂರು ಕಿಡಿಕಾಡಿದ್ದಾರೆ.
ವಿದ್ಯಾರ್ಥಿನಿಯರು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಪುತ್ತೂರಿಗೆ ಶೋಭೆ ತರುವುಂತದಲ್ಲ. ಈ ಹಿಂದಿನ ಪ್ರಾಂಶುಪಾಲರು ಉತ್ತಮ ಕೆಲಸ ಮಾಡುತ್ತಿದ್ದರು. ಇವರು ಬಂದ ಬಳಿಕ ಯಾವ ಕೆಲಸವೂ ಆಗುತ್ತಿಲ್ಲ. ಪ್ರತಿ ತಿಂಗಳ ಅಪ್‌ಡೇಟ್ ಮಾಡಲು ಹೇಳಿದ್ದರೂ ಅವರು ಯಾವುದನ್ನೂ ಮಾಡಿಲ್ಲ. ಇವರು ಬಂದು ಕುಳಿತುಕೊಳ್ಳುವುದು ಸಂಬಳ ಪಡೆಯುವುದು ಮಾತ್ರ. ಕಾಲೇಜಿನ ಸಮಸ್ಯೆ ಬಗ್ಗೆ ನನ್ನಲ್ಲಿ ಹೇಳುವುದಕ್ಕೆ ಇವರಿಗೇನು ಎಂದು ಶಾಸಕರು ಪ್ರಶ್ನಿಸಿದರು.
ನಾವು ಆಟ ಆಡಲು ಅಲ್ಲಿ ಕೆಲಸ ಮಾಡುತ್ತಿಲ್ಲ. ಜೀವನ್ಮರಣದಲ್ಲಿ ಹೋರಾಡುತ್ತಿರುವ 32 ಮಂದಿ ಬಡವರು ಡಯಾಲಿಸಿಸ್‌ಗಾಗಿ ಕಾಯುತ್ತಿದ್ದಾರೆ. 1200ಪಾವತಿಸಿ ಡಯಾಲಿಸಿಸ್ ಮಾಡುವ ಶಕ್ತಿ ಬಡವರಲಿಲ್ಲ. ಅವರಿಗೆ ಉಚಿತವಾಗಿ ಡಯಾಲಿಸಿಸ್ ಸೌಲಭ್ಯ ನೀಡುವುದಕ್ಕಾಗಿ ಕಾಮಗಾರಿ ನಡೆಯುತ್ತಿದೆ. ಅದಕ್ಕೂ ಸರಕಾರದಿಂದ ಅನುದಾನ ದೊರೆತಿಲ್ಲ. ಸಾರ್ವಜನಿಕರಲ್ಲಿ ಕಾಡಿ ಬೇಡಿ ಕಾಮಗಾರಿ ಮಾಡುತ್ತಿರುವುದು. 32 ಜನರು ಬದುಕಲಿ ಎಂಬ ಉದ್ದೇಶದಿಂದ ಮಾಡಲಾಗುತ್ತಿದೆ. ಹೀಗಾಗಿ ಸಿಎಸ್‌ಆರ್ ನಿಧಿ, ಅವರ ಶಾಸಕ ನಿಧಿಯಿಂದ ಅನುದಾನ ನೀಡಿ ಇಲಾಖೆಯಿಂದ ಅನುಮತಿ ಪಡೆದು ಬಡವರ ಜೀವ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.
ನ್ಯಾಯಕ್ಕಾಗಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರು ಎಲ್ಲಿ ಎಲ್ಲಿ ಎಂಎಲ್‌ಎ ಎಲ್ಲಿ ಎಂದು ಘೋಷಣೆ ಕೂಗಿದರು. ಸುಮಾರು ಒಂದೂವರೆ ತಾಸುಗಳ ಕಾಲ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಬರಲಿ ಬರಲಿ ಎಂಎಲ್‌ಎ ಬರಲಿ ಎಂದು ಘೋಷಣೆ ಕೂಗುತ್ತಲೇ ಇದ್ದರು.
Protest by Puttur College students: Where is the MLA? – ತುಳುಟೈಮ್ಸ್
ಇದನ್ನೂ ಓದಿ : ಇಂಡಿಯಾ–ಅಮೆರಿಕಾ ವ್ಯಾಪಾರ ಒಪ್ಪಂದ ವಿವಾದ: ರೈತರನ್ನು ಬಲಿಯಾಗಿಸಬೇಡಿ — ಸಿಎಂ ಸಿದ್ದರಾಮಯ್ಯ ಮನವಿ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wrBMy_DIHWs?si=XWFrDFlC9YcSFwhH











