ಬೆಂಗಳೂರು: Tulu Times l ಭಾರತ–ಅಮೆರಿಕಾ ಮಧ್ಯಂತರ ವ್ಯಾಪಾರ ಒಪ್ಪಂದದ ಪರಿಣಾಮ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತರು ದೇಶದ ಜೀವನಾಡಿ, ಬಾರ್ಗೇನ್ ಚಿಪ್ಸ್ ಅಲ್ಲ ಎಂದು ಹೇಳಿದ್ದಾರೆ.
ಭಾನುವಾರ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, ದೇಶದ ಹಿತಾಸಕ್ತಿಗಳನ್ನು ರಾಜಕೀಯ ಲಾಭಕ್ಕಾಗಿ ಬಲಿ ಕೊಡಬಾರದು ಹಾಗೂ ವಿದೇಶಿ ಒತ್ತಡಕ್ಕೆ ಮಣಿಯಬಾರದು ಎಂದು ಎಚ್ಚರಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಪ್ಪಂದದ ಪರಿಣಾಮ ಕುರಿತು ವ್ಯಕ್ತಪಡಿಸಿದ ಆತಂಕಗಳಿಗೆ ಬೆಂಬಲ ಸೂಚಿಸಿದ ಸಿಎಂ, ರೈತರು, ಹಾಲು ಉತ್ಪಾದನಾ ಕ್ಷೇತ್ರ, ಕನಿಷ್ಠ ಬೆಂಬಲ ಬೆಲೆ (MSP) ವ್ಯವಸ್ಥೆ ಹಾಗೂ ಕೃಷಿಯ ಸ್ವಾವಲಂಬನೆ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದರು.
ಈ ಒಪ್ಪಂದದ ಮೂಲಕ ಜಿಎಮ್ ಬೆಳೆಗಳ ನಿಯಂತ್ರಣರಹಿತ ಆಮದುಗೆ ಅವಕಾಶ ನೀಡಿದರೆ ಅಥವಾ ರಕ್ಷಣಾ ಕ್ರಮಗಳನ್ನು ದುರ್ಬಲಗೊಳಿಸಿದರೆ ದೇಶದ ರೈತರಿಗೆ ನೇರ ಹಾನಿಯಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು. ಭಾರತದ ಹಿತಾಸಕ್ತಿಗಳನ್ನು ಮಾರಿಬಿಡಬೇಡಿ. ರೈತರನ್ನು ರಾಜಕೀಯ ಕಾರಣಕ್ಕಾಗಿ ಬಲಿಯಾಗಿಸಬೇಡಿ. ವಿದೇಶಿ ಒತ್ತಡಕ್ಕೆ ಮಣಿಯಬೇಡಿ. ರೈತರು ಈ ರಾಷ್ಟ್ರದ ಜೀವನಾಡಿ, ಎಂದು ಅವರು ಹೇಳಿಕೆ ನೀಡಿರುತ್ತಾರೆ.
India-US trade deal controversy: Don’t victimize farmers — CM Siddaramaiah appeals – ತುಳುಟೈಮ್ಸ್
ಇದನ್ನೂ ಓದಿ : ಬಾಂಬ್ ಬೆದರಿಕೆ: ಆರು ಜಿಲ್ಲೆಗಳ ನ್ಯಾಯಾಲಯಗಳು ಹಾಗೂ ಧಾರವಾಡ ಕೋರ್ಟ್ ಕಟ್ಟೆಚ್ಚರ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wrBMy_DIHWs?si=HC5qz_EM-vFVElXK











