Operation Sindoor ವೇಳೆ ಭಾರತದ ಸೇನೆಯ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರದಂತೆ ಮೆರೆದಿದ್ದ ಬ್ರಹ್ಮೋಸ್ ಕ್ಷಿಪಣಿಗೆ ಮತ್ತಷ್ಟು ಬಲ ತುಂಬಲಾಗಿದೆ. ಶರವೇಗದ ಸರದಾರನ ಬಲವನ್ನು ಇಮ್ಮಡಿಗೊಳಿಸಲಾಗಿದೆ. ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ ಧೀರ ಇದೀಗ ಎದುರಾಳಿಗಳ ಹುಟ್ಟಡಗಿಸಲು ಸಜ್ಜಾಗುತ್ತಿದ್ದಾನೆ.
ಪಾಪಿ ಪಾಕಿಸ್ಥಾನದ ಇಂಚಿಂಚು ಭೂಮಿಯೂ ಬ್ರಹ್ಮೋಸ್ ಟಾರ್ಗೆಟ್ನಲ್ಲಿದೆ. ಕೆಚ್ಚೆದೆಯ ಕ್ಷಿಪಣಿ ಮುಂದೆ ಶತ್ರುಗಳು ಬಾಲ ಬಿಚ್ಚಿದ್ರೆ ಏಕ್ ಮಾರ್ ದೋ ತುಕ್ಡಾ ಆಗೋದು ಗ್ಯಾರಂಟಿಯಾಗಿದೆ. ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನಿ ಉಗ್ರರು ಬಿರುಬೇಸಿಗೆಯಲ್ಲೂ ಗಢಗಢ ನಡುಗುವಂತೆ ಮಾಡಿದ್ದು ಭಾರತೀಯ ಸೇನೆಯ ಪವರ್ಫುಲ್ ಮಿಸೈಲ್ ಬ್ರಹ್ಮೋಸ್. ಉಗ್ರರ ಅಡಗುತಾಣ, ಪರಮಾಣು ಜಾಲವನ್ನೇ ಧ್ವಂಸ ಮಾಡಿದ್ದ ಬ್ರಹ್ಮೋಸ್ ಈಗ ಮತ್ತಷ್ಟು ಶಕ್ತಿ ಹೆಚ್ಚಿಸಿಕೊಂಡಿದೆ. ನಮ್ಮ ತಂಟೆಗೆ ಬಂದ್ರೆ ರಣವಿಕ್ರಮನಾಗಿ ರಣಬೇಟೆಗೆ ಕಾದು ಕೂತಿದೆ.
ಹೇಗಿದೆ ಗೊತ್ತಾ ಬ್ರಹ್ಮೋಸ್ ಪವರ್?
- ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯ ದುಪ್ಪಟ್ಟು ಹೆಚ್ಚಳ
- 300 ಕಿ.ಮೀ. ರಿಂದ 800 ಕಿ.ಮೀಗಳ ವರೆಗೆ ಶಕ್ತಿವರ್ಧನೆ
- 2026-27 ರಲ್ಲಿ ಉತ್ಪಾದನೆಯು ಪ್ರಾರಂಭವಾಗುವ ಸಾಧ್ಯತೆ
- 2027ಕ್ಕೆ ಭಾರತೀಯ ಸೇನೆಗೆ ಅಪ್ಡೇಟ್ ಬ್ರಹ್ಮೋಸ್ ಎಂಟ್ರಿ
- ಪಾಕ್ನ ಮೂಲೆ ಮೂಲೆಗಳೂ ಬ್ರಹ್ಮೋಸ್ ಟಾರ್ಗೆಟ್
ಈಗಾಗಲೇ ಬ್ರಹ್ಮೋಸ್ ಕ್ಷಿಪಣಿ ಶಕ್ತಿ ಎಂಥದ್ದು ಅಂತ ವಿಶ್ವಕ್ಕೆ ಅರ್ಥವಾಗಿದೆ. ಇದೀಗ 800 ಕಿಲೋ ಮೀಟರ್ಗೆ ಶಕ್ತಿಯನ್ನ ಹೆಚ್ಚಿಸಿದ್ರೆ ಪಾಕಿಸ್ತಾನದ ಮೂಲೆ ಮೂಲೆಯೂ ಬ್ರಹ್ಮೋಸ್ನ ಕಣ್ಣಳತೆಯಲ್ಲಿ ಇರಲಿದೆ. ಯೋಧರ ಜೊತೆಗಿನ ದೀಪಾವಳಿಯಲ್ಲಿ ಪ್ರಧಾನಿ ಮೋದಿ ಬ್ರಹ್ಮೋಸ್ ಕ್ಷಿಪಣಿಯ ಪರಾಕ್ರಮವನ್ನ ಹಾಡಿಹೊಗಳಿದ್ರು. ಅರಬ್ಬಿ ಸಮುದ್ರದಲ್ಲಿ ನಿಂತು ಶತ್ರು ದೇಶಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ರು. ಶಬ್ದಕ್ಕಿಂತ ವೇಗದಲ್ಲಿ ನುಗ್ಗುವ ಬ್ರಹ್ಮೋಸ್ ಕ್ಷಿಪಣಿ ಶಕ್ತಿಯನ್ನ ಹೆಚ್ಚಿಸಿಕೊಂಡು ಸೇನೆಯನ್ನ ಸೇರಿದ್ರೆ ಭಾರತೀಯ ಸೇನೆಯ ಬಲ ದುಪ್ಪಟ್ಟು ಆಗೋದಂತೂ ನಿಶ್ಚಿತ.
ಇದನ್ನೂ ಓದಿ: Kasaragod : ಸತ್ತು ಹೋದ ವ್ಯಕ್ತಿ ಮತ್ತೆ ಬದುಕಿ ಬಂದ..!
===============
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











