ಜೀವನಶೈಲಿ: Tulu Times | ನಮ್ಮ ದೇಹ ಎಲ್ಲಾ ಬಗೆಯ ಆಹಾರ ಪದಾರ್ಥಗಳನ್ನು ಬಯಸುತ್ತದೆ. ಅದ್ರಲ್ಲೂ ಕೊಲೆಸ್ಟ್ರಾಲ್ ನಿಯಂತ್ರಿಸಲು ಪ್ರತಿನಿತ್ಯ ಕೆಲವೊಂದು ಸಲಹೆಗಳನ್ನು ಮರೆಯದೆಯೇ ಅನುಸರಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಕೊಬ್ಬು ಅನ್ನೋದು ದೇಹಕ್ಕೆ ಅಗತ್ಯವಿದ್ದರೂ ಕೂಡ ಅತಿಯಾದ ಪ್ರಮಾಣ ಆರೋಗ್ಯಕ್ಕೆ ಹಾನಿಕಾರಕ. ಬದಲಾಗುತ್ತಿರುವ ಜೀವನಶೈಲಿಯಿಂದ ನಮ್ಮ ಆರೋಗ್ಯ ದೇಹ ಬದಲಾವಣೆಯನ್ನು ಬಯಸುತ್ತದೆ. ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದಾಗ ರಕ್ತ ಪ್ರವಾಹ ಕಡಿಮೆಯಾಗುತ್ತದೆ ಮತ್ತು ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಕೊಲೆಸ್ಟ್ರಾಲ್ ನಿಯಂತ್ರಿಸಲು ಏನು ಮಾಡಬೇಕು?
ಕೊಲೆಸ್ಟ್ರಾಲ್ ನಿಂದ ವ್ಯಕ್ತಿಯಲ್ಲಿ ಆಯಾಸ, ತಲೆತಿರುಗುವಿಕೆ, ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ನೋವು, ಉಸಿರಾಟದ ತೊಂದರೆ ಮತ್ತು ಎದೆಯಲ್ಲಿ ಅಸಹಜ ಒತ್ತಡದಂತಹ ಸಮಸ್ಯೆಗಳು ಕಂಡುಬರಬಹುದು. ಕಣ್ಣುಗಳ ಸುತ್ತಲಿನ ಚರ್ಮದ ಸಿಪ್ಪೆ ಸುಲಿಯುವುದು ಅಥವಾ ತೂಕ ಹೆಚ್ಚಾಗುವುದು ಕಂಡುಬರಬಹುದು. ಇನ್ನು ದೀರ್ಘಕಾಲದ ವರೆಗೆ ಹೆಚ್ಚಿನ ಕೊಲೆಸ್ಟ್ರಾಲ್ ಇರುವುದು ಹೃದಯ ಸಂಬಂಧಿ ಕಾಯಿಲೆಗೆ ಒಳಪಡುತ್ತಾರೆ. ಹುರಿದ ಮತ್ತು ಕೊಬ್ಬಿನಾಂಶ ಅಧಿಕವಾಗಿರುವ ಆಹಾರ ಸೇವನೆ ಮಾಡುವುದು ಬೇಡ. ಹಣ್ಣು, ತರಕಾರಿ, ಓಟ್ಸ್, ಕಡಲೆಕಾಯಿ ಮತ್ತು ಅಗಸೆ ಬೀಜಗಳಂತಹ ಆಹಾರವನ್ನು ಸೇವಿಸಬೇಕು. ಪ್ರತಿದಿನ ವಾಕಿಂಗ್, ಯೋಗ ಅಥವಾ ಸೈಕ್ಲಿಂಗ್‌ನಂತಹ ವ್ಯಾಯಾಮ ಮಾಡಬೇಕು. ನೀರು ಕುಡಿಯಬೇಕು. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಒಳ್ಳೆಯದು. ಆಳವಾದ ಉಸಿರಾಟವನ್ನು ಅಭ್ಯಾಸ ಮಾಡುವುದು ಒಳ್ಳೆಯದು.
What should I do to control cholesterol?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











