ಬೆಂಗಳೂರು : Tulu Times l ರಾಜ್ಯದ ಸರ್ಕಾರಿ ಬಸ್ ಸೇವೆ ನೀಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಲಗೇಜ್ ಶುಲ್ಕವನ್ನು ಹೆಚ್ಚಿಸಿದೆ. ಹೊಸ ದರಗಳು ಫೆಬ್ರವರಿ 16ರಿಂದ ಜಾರಿಗೆ ಬಂದಿವೆ ಎಂದು ನಿಗಮ ಪ್ರಕಟಿಸಿದೆ.
KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಅವರು ಮಾಹಿತಿ ನೀಡಿ, ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೆಚ್ಚ ಮತ್ತು ಇತರೆ ಕಾರ್ಯಾಚರಣಾ ಖರ್ಚುಗಳು ಹೆಚ್ಚಾದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಲಗೇಜ್ ಶುಲ್ಕಗಳು ;
1 ರಿಂದ 5 ಹಂತಗಳು (Stages) — ₹6
6 ರಿಂದ 12 ಹಂತಗಳು — ₹12
156 ರಿಂದ 160 ಹಂತಗಳು — ₹145
ನಿಗಮದ ಪ್ರಕಾರ, ಲಗೇಜ್ ಶುಲ್ಕವನ್ನು ಕೊನೆಯ ಬಾರಿ 2021ರಲ್ಲಿ ಹೆಚ್ಚಿಸಲಾಗಿತ್ತು. ನಂತರ ಪ್ರಯಾಣ ದರಗಳಲ್ಲಿ ಬದಲಾವಣೆ ನಡೆದಿದ್ದರೂ ಸಾಮಾನು ಶುಲ್ಕದಲ್ಲಿ ಬದಲಾವಣೆ ಆಗಿರಲಿಲ್ಲ.
ಪ್ರಯಾಣಿಕರಿಗೆ ಸೂಚನೆ ;
KSRTC ಬಸ್‌ಗಳಲ್ಲಿ ಹೆಚ್ಚಿನ ಸಾಮಾನು ತೆಗೆದುಕೊಂಡು ಪ್ರಯಾಣಿಸುವವರು ಹೊಸ ದರಗಳನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ಪಡೆಯುವಂತೆ ನಿಗಮ ಮನವಿ ಮಾಡಿದೆ. ಈ ಕ್ರಮದಿಂದ ಹೆಚ್ಚುತ್ತಿರುವ ವೆಚ್ಚಗಳನ್ನು ಸಮತೋಲನಗೊಳಿಸಿ ರಾಜ್ಯದಾದ್ಯಂತ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಬಸ್ ಸೇವೆಯನ್ನು ಮುಂದುವರಿಸಲು ಸಹಕಾರವಾಗಲಿದೆ ಎಂದು KSRTC ತಿಳಿಸಿದೆ.
Luggage charges increase in Karnataka State Road Transport Corporation (KSRTC) buses – ತುಳುಟೈಮ್ಸ್
ಇದನ್ನೂ ಓದಿ : ಬೆಳ್ತಂಗಡಿ: ಅಜ್ಜಿಯ ತಿಥಿಗೆ ಆಮೆ ಹಿಡಿದವರ ಬಂಧನ !
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wrBMy_DIHWs?si=AofqIPxOVJpRLH3e











