ಬ್ರೇಕಿಂಗ್ ನ್ಯೂಸ್
ಕರ್ನಾಟಕಸುಳ್ಯ

ಸುಳ್ಯದಲ್ಲಿ ಕಾಡಾನೆ ಹಾವಳಿಗೆ ಬೇಸತ್ತ ಜನ..ತೋಟದಲ್ಲಿ ಬೀಡುಬಿಟ್ಟ ಕಾಡಾನೆ !

ಸುಳ್ಯ: Tulu Times | ದಕ್ಷಿಣಕನ್ನಡದಲ್ಲಿ ಆನೆಗಳ ಹಾವಳಿ ಕಡಿಮೆ ಏನಲ್ಲ.. ಕಾಡಾನೆಗಳ ದಾಳಿಯಿಂದ ಅದೆಷ್ಟೋ ಜನ ಜೀವವನ್ನೇ ಕಳೆದುಕೊಂಡಿರುವ ಘಟನೆಗಳ ನಡೆದಿವೆ. ಇದೀಗ ಸುಳ್ಯ-ಪುತ್ತೂರು ಗಡಿ ಪ್ರದೇಶದಲ್ಲಿ ಕೃಷಿ ತೋಟಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.

ಮುಂದುವರಿದ ಕಾಡಾನೆ ಹಾವಳಿಯಿಂದ ಕೃಷಿ ಹಾಳಾಗುತ್ತಿದೆ. ಕಳೆದ ರಾತ್ರಿ  ಪೆರ್ನಾಜೆ ಸುಬ್ರಹ್ಮಣ್ಯ ಭಟ್‌, ಸತೀಶ್‌ ಪೆರ್ನಾಜೆ, ಜಯರಾಮ ಗೌಡ, ಅಶೋಕ್‌ ಪೆರ್ನಾಜೆ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ಅಡಿಕೆ, ಬಾಳೆ ಕೃಷಿಯನ್ನು  ಸಂಪೂರ್ಣ ಹಾನಿಗೊಳಿಸಿದೆ.

ಇದನ್ನೂ ಓದಿ: ಬೆಳ್ತಂಗಡಿ: ರಸ್ತೆ ಕಾಂಕ್ರಿಟೀಕರಣ & ಸೇತುವೆ ನಿರ್ಮಾಣ ಕಾಮಗಾರಿಗೆ ಹರೀಶ್ ಪೂಂಜ ಚಾಲನೆ!

ಕಾರ್ಕಳ: ಕೊರಗಜ್ಜದೇವಸ್ಥಾನದ ಧರ್ಮದರ್ಶಿ ದಿವಾಕರ ಪೂಜಾರಿ ವಿಧಿವಶ

ಕಾರ್ಕಳ: ಪ್ರತ್ಯೇಕ ಪ್ರಕರಣದಲ್ಲಿ, ಜಾರಿಗೆ ಕಟ್ಟಿ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ಅವರು ಹಾರ್ಟ್ ಅಟ್ಯಾಕ್ ನೀಂದ ವಿಧಿವಶರಾಗಿದ್ದಾರೆ. ಮುಂಡ್ಯೂರಿನ ಜಾರಿಗೆಕಟ್ಟೆಯಲ್ಲಿ ಕೊರಗಜ್ಜ ಕೊರಗರ ಪಂಜುರ್ಲಿ, ಪರಿವಾರ ಶಕ್ತಿಗಳ ಕೇಂದ್ರಕ್ಕೆ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಿದ್ದು ಕ್ಷೇತ್ರದಲ್ಲಿ ನಿರಂತರ ಕೋಲ, ಅಗೇಲು ಸೇವೆಗಳು ನಡೆಯುತ್ತಿದ್ದವು. ಹೀಗಾಗಿ ಪ್ರತಿದಿನದ ಹಾಗೆ ದೈವ ದರ್ಶನಕ್ಕೆಂದು ತೆರಳಿದ್ದಾಗ ಹೃದಯಾಘಾತವಾಗಿದೆ. ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇನ್ನು ದಿವಾಕರ ಪೂಜಾರಿ ನಿಧನಕ್ಕೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾ‌ರ್, ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪಟ್ಟ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಮುಂಬಯಿನ ಉದ್ಯಮಿ ಐಕಳ ಗಣೇಶ್ ಶೆಟ್ಟಿ, ಕಂಬಳ ಕ್ಷೇತ್ರದ ಬೋಳದಗುತ್ತು ಸತೀಶ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

People are fed up with the wild elephant menace in Sullia.. A wild elephant has set up camp in the garden!- ತುಳುಟೈಮ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 126

You cannot copy content of this page