ಬ್ರೇಕಿಂಗ್ ನ್ಯೂಸ್
ಕ್ರೀಡೆ

ಟಿ20 ವಿಶ್ವಕಪ್ 2026: ಪಾಕಿಸ್ತಾನ ವಿರುದ್ಧ ಭಾರತಕ್ಕೆ 61 ರನ್ ಭರ್ಜರಿ ಜಯ

ಕ್ರಿಕೆಟ್ : Tulu Times l ಟಿ20 ವಿಶ್ವಕಪ್ 2026ರಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 61 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಭಾರತ ಕ್ರಿಕೆಟ್ ತಂಡ ನೀಡಿದ 176 ರನ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಕ್ರಿಕಿಟ್ ತಂಡ 114 ರನ್‌ಗಳಿಗೆ ಆಲೌಟ್ ಆಗಿರುತ್ತದೆ.

ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ;
ಭಾರತದ ಪರ ಇಶಾನ್ ಕಿಶನ್ 40 ಚೆಂಡುಗಳಲ್ಲಿ 77 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. 10 ಬೌಂಡರಿ, 3 ಸಿಕ್ಸರ್ ಇದು ತಂಡಕ್ಕೆ ಬಲವಾದ ಮೊತ್ತವಾಗಿತ್ತು. ಅವರ ಸ್ಫೋಟಕ ಆಟದಿಂದ ಭಾರತ 20 ಓವರ್‌ಗಳಲ್ಲಿ 175/7 ರನ್ ಗಳಿಸಿತು.

ಪಾಕಿಸ್ತಾನದ ಇನ್ನಿಂಗ್ಸ್ ;
ಪಾಕಿಸ್ತಾನದ ಪರ ಉಸ್ಮನ್ ಖಾನ್ 44 ರನ್ ಗಳಿಸಿದರೂ, ಇತರ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಭಾರತದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ತಂಡವನ್ನು 114 ರನ್‌ಗಳಿಗೆ ಸೀಮಿತಗೊಳಿಸಿದರು.

ಈ ಜಯದೊಂದಿಗೆ ಭಾರತ ತಂಡ ಟೂರ್ನಿಯಲ್ಲಿ ಸೋಲಿಲ್ಲದೆ ಸೂಪರ್ 8 ಹಂತಕ್ಕೆ ಪ್ರವೇಶಿಸಿದೆ. ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯಾನಂತರ, ಈ ಜಯ ದೇಶಕ್ಕೆ ಸಮರ್ಪಿತ. ಬ್ಯಾಟಿಂಗ್ ಮೊದಲ ಆಯ್ಕೆ ಸರಿಯಾದ ನಿರ್ಧಾರವಾಗಿತ್ತು. ಇಶಾನ್ ಕಿಶನ್ ಹೊಣೆ ಹೊತ್ತ ಆಟ ಅದ್ಭುತ
ಹಾಗೂ ತಂಡದ ಬೌಲಿಂಗ್ ಕೂಡ ಸಮಾನವಾಗಿ ಕೊಡುಗೆ ನೀಡಿತು.

T20 World Cup 2026: India beats Pakistan by 61 runs – ತುಳುಟೈಮ್ಸ್

ಇದನ್ನೂ ಓದಿ : ಅಮೇರಿಕಾದಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶವವಾಗಿ ಪತ್ತೆ

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wrBMy_DIHWs?si=DhIFOch4XoknaJfk

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 5

You cannot copy content of this page