ಬ್ರೇಕಿಂಗ್ ನ್ಯೂಸ್
ದೇಶ

ಅಮೇರಿಕಾದಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶವವಾಗಿ ಪತ್ತೆ

ಕರ್ನಾಟಕ : Tulu Times l ಅಮೆರಿಕದಲ್ಲಿ ಕಾಣೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಶವವಾಗಿ ಪತ್ತೆಯಾಗಿರುವ ದುಃಖದ ಸುದ್ದಿ ಹೊರಬಂದಿದೆ. ಕರ್ನಾಟಕ ಮೂಲದ ಈ ವಿದ್ಯಾರ್ಥಿ University of California, Berkeley ನಲ್ಲಿ ಎಂ.ಎಸ್. (Master of Science) ವ್ಯಾಸಂಗ ಮಾಡುತ್ತಿದ್ದರು.

ಸ್ಥಳೀಯ ಸಮಯದ ಪ್ರಕಾರ ಶನಿವಾರ ಕ್ಯಾಲಿಫೋರ್ನಿಯಾದ Lake Anza ನಲ್ಲಿ ಅವರ ಶವ ಪತ್ತೆಯಾಗಿದೆ. ಅವರು ಕಳೆದ ವಾರದಿಂದ ಕಾಣೆಯಾಗಿದ್ದರು ಎಂದು ತಿಳಿದುಬಂದಿದೆ.
ರೂಮ್‌ಮೇಟ್ ಬನೀತ್ ಸಿಂಗ್ ಹೇಳಿಕೆಯ ಪ್ರಕಾರ ಕಳೆದ ಎರಡು ವಾರಗಳಿಂದ ಅವರು ಕಡಿಮೆ ಆಹಾರ ಸೇವಿಸುತ್ತಿದ್ದರು. ಚಿಪ್ಸ್ ಮತ್ತು ಕುಕ್ಕೀಸ್ ಮಾತ್ರ ತಿನ್ನುತ್ತಿದ್ದರು.

ಯಾರೊಂದಿಗೂ ಹೆಚ್ಚು ಮಾತನಾಡದೆ ನಿರ್ಲಕ್ಷ್ಯವಾಗಿ ವರ್ತಿಸುತ್ತಿದ್ದರು. ಜನವರಿ 21ರಂದು ಸಾಕೇತ್ ಅವರು ಲೇಕ್ ಅಂಜಾಗೆ ಬರಲು ಆಹ್ವಾನಿಸಿದ್ದರೆ, ತಾನು ಹೋಗಿರಲಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ. ನಂತರ ಅದೇ ಸ್ಥಳದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

Indian Consulate in San Francisco ಈ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದೆ. ಕುಟುಂಬಕ್ಕೆ ಅಗತ್ಯ ಸಹಾಯ, ಮೃತದೇಹವನ್ನು ಭಾರತಕ್ಕೆ ತರಲು ವ್ಯವಸ್ಥೆ ಸೇರಿದಂತೆ ಎಲ್ಲ ನೆರವು ನೀಡಲಾಗುವುದು ಎಂದು ತಿಳಿಸಿದೆ. ಸ್ಥಳೀಯ ಪೊಲೀಸರು ಸಾವಿನ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಘಟನೆಯ ಕುರಿತು ತನಿಖೆ ಮುಂದುವರಿದಿದೆ.

Karnataka student missing in US found dead – ತುಳುಟೈಮ್ಸ್

ಇದನ್ನೂ ಓದಿ : ನಾಸಾ ತಿಳಿಸಿದ ಭಾರತೀಯ ಮನೆಗಳಲ್ಲಿ ಗಾಳಿ ಶುದ್ಧೀಕರಿಸುವ ಸಸ್ಯಗಳು ಇಲ್ಲಿವೆ

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wrBMy_DIHWs?si=zfXjhGRZiHTud4p0

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page