ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಮಂಗಳೂರಿನಲ್ಲಿ 13 ರೂಟ್‌ಗಳಲ್ಲಿ ಸರಕಾರಿ ಬಸ್‌ ಸಂಚಾರ ಶೀಘ್ರದಲ್ಲಿ ಆರಂಭ!

ಮಂಗಳೂರು: Tulu Times | ಮಂಗಳೂರಿನ 13 ಹೊಸ ರೂಟ್‌ಗಳಿಗೆ ಶೀಘ್ರದಲ್ಲೇ ಸರಕಾರಿ ಬಸ್‌ ಸಂಚಾರ ಆರಂಭಗೊಳ್ಳಲಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ: ಕಡಿಮೆ ಕೊಬ್ಬಿನ ಆಹಾರವು ಹೃದಯ ಹಾಗೂ ಮೆಟಾಬಾಲಿಕ್ ಆರೋಗ್ಯಕ್ಕೆ ಸಹಾಯಕ

ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮಂಗಳೂರು ನಗರಕ್ಕೆ ಹಚ್ಚುವರಿ ಬಸ್‌ ಪ್ರವೇಶಕ್ಕೆ  ಅಡ್ಡಿಯಾಗಿ ಹೊರಡಿಸಿದ ಅಧಿಸೂಚನೆ ರದ್ದುಗೊಂಡಿದ್ದು, ಅತೀ ಶೀಘ್ರದಲ್ಲಿಯೇ 13 ರೂಟ್‌ಗಳಲ್ಲಿ ಸರಕಾರಿ ಬಸ್‌ ಸಂಚಾರ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೇಂದ್ರ ಭಾಗವಾದ ಸ್ಟೇಟ್‌ ಬ್ಯಾಂಕ್‌ನಿಂದ ಬಸ್‌ ಸಂಚಾರಕ್ಕೆ ಅವಕಾಶ ಇರಲಿಲ್ಲ. ಇದೀಗ,  ಡಿಎಂ ಅಧಿಸೂಚನೆಯಿಂದಾಗಿ ನಗರದ ಕೇಂದ್ರ ಭಾಗವಾದ ಸ್ಟೇಟ್‌ ಬ್ಯಾಂಕ್‌ನಿಂದ ಬಸ್‌ ಸಂಚಾರಕ್ಕೆ ಅವಕಾಶ ಇರಲಿಲ್ಲ. ಸ್ಟೇಟ್‌ಬ್ಯಾಂಕ್‌ನಿಂದ ನೇರವಾಗಿ ಜಿಲ್ಲೆಯ ವಿವಿಧ ಕಡೆಗಳಿಗೆ ಬಸ್‌ ಸಂಚಾರ ಆರಂಭ ಮಾಡಬಹುದು. ಇದೀಗ ಹೊಸ ರೂಟ್‌ಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ: ಶಿವರಾತ್ರಿ ದಿನ ಶಿವನಿಗೆ ಪ್ರಿಯವಾದ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ

2013ರ ಅಧಿಸೂಚನೆ ಪ್ರಕಾರ, ಕದ್ರಿ ಮಲ್ಲಿಕಟ್ಟೆ ಕೊನೆ ನಿಲ್ದಾಣ ಇದ್ದುದನ್ನು ನಂತೂರುವರೆಗೆ, ಕಂಕನಾಡಿ ಇದ್ದುದನ್ನು ಪಂಪ್‌ವೆಲ್‌, ಲೇಡಿಹಿಲ್‌ ಇದ್ದುದನ್ನು ಕೊಟ್ಟಾರ ಕ್ರಾಸ್‌ ಎಂದು ನಿಗದಿಪಡಿಸಲಾಗಿತ್ತು. ಹೀಗಾಗಿ, ಸ್ಟೇಟ್‌ಬ್ಯಾಂಕ್‌ ಕಡೆಯಿಂದ ಹೊಸ ಬಸ್‌ ಸಂಚರಿಸಲು ಅವಕಾಶ ಇರಲಿಲ್ಲ. ಅದಕ್ಕೂ ಮುಂಚೆ,  1991ರಲ್ಲಿ ನಗರ ಸಾರಿಗೆ ಬಸ್‌ಗಳಿಗೆ ಮತ್ತು 1994ರಲ್ಲಿ ಗ್ರಾಮಾಂತರ ಬಸ್‌ಗಳಿಗೆ ಸ್ಟೇಟ್‌ಬ್ಯಾಂಕ್‌ ಪ್ರವೇಶಿಸಲು ನಿರ್ಬಂಧ ವಿಧಿಸಿ ಡಿಎಂ ಅಧಿಸೂಚನೆ ಹೊರಡಿಸಲಾಗಿತ್ತು.

Government bus services to start soon on 13 routes in Mangalore!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 158

You cannot copy content of this page