ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಮುಂಡಾಜೆಯ ಕಲ್ಮಂಜ- ಧರ್ಮಸ್ಥಳ ರಸ್ತೆಯ ಸಮೀಪ ಬೆಂಕಿ ಅನಾಹುತ

ಮುಂಡಾಜೆ: Tulu Times | ಇಂದು ಮುಂಡಾಜೆಯ ಕಲ್ಮಂಜ- ಧರ್ಮಸ್ಥಳ ರಸ್ತೆಯ  ಮೈರಣಗುಡ್ಡೆಗೆ ಬೆಂಕಿ ತಗುಲಿದ ಘಟನೆ  ನಡೆದಿದೆ.

ಬೆಂಕಿಯನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದಿಂದ ನಂದಿಸುವ ಯತ್ನ ಮಾಡಿದ್ದಾರೆ. ಬೆಂಕಿ ಆರಿಸುವ ವೇಳೆ ಸ್ಥಳೀಯ ವ್ಯಕ್ತಿಯೊಬ್ಬರು ಸುಮಾರು 20 ಅಡಿಯಿಂದ ಜಾರಿ ಬಿದ್ದ ಘಟನೆ ನಡೆದಿದೆ. ಗುಡ್ಡವನ್ನು ಸುಟ್ಟ ಬೆಂಕಿ ಸಮೀಪದಲ್ಲಿರುವ ರಬ್ಬರ್ ತೋಟಕ್ಕೂ ವ್ಯಾಪಿಸಿದೆ. ಸುತ್ತ ಇರುವ ರಬ್ಬರ್‌ ಗಿಡಕ್ಕೂ ಹಾನಿಯಾಗಿದೆ. ಬೆಂಕಿ ಯಾವ ಕಾರಣದಿಂದ  ಉಂಟಾಗಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಅದೃಷ್ಟವಶಾತ್ ಯಾರಿಗೂ  ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.

ಬೆಳ್ತಂಗಡಿ: ಒಲೆಗೆ ಬೆಂಕಿ ಹಚ್ಚುವಾಗ ಬೆಂಕಿ ತಗುಲಿದ ಮಹಿಳೆ ಸಾವು

ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಬಚ್ಚಲು ಒಲೆಗೆ ಬೆಂಕಿ ಹಚ್ಚುವಾಗ ಬಟ್ಟೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಫೆ. 7ರಂದು ಮನೆಯ ಬಚ್ಚಲು ಕೋಣೆಯಲ್ಲಿ ನೀರು ಬಿಸಿ ಮಾಡಲು ಬೆಂಕಿ ಹಚ್ಚುವಾಗ ಮೀನಾಕ್ಷಿ (63) ಎಂಬವರಿಗೆ ಆಕಸ್ಮಿಕವಾಗಿ ಬಟ್ಟೆಗೆ ಬೆಂಕಿ ತಗುಲಿದೆ. ಈ ಸಂದರ್ಭದಲ್ಲಿ ತಕ್ಷಣವೇ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ಹೀಗಾಗಿ, ಅಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

Fire breaks out near Kalamanja-Dharamsthala road in Mundaje- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 159

You cannot copy content of this page