ಆರೋಗ್ಯ : Tulu Times l ದೇಹದ ಮೆಟಾಬಾಲಿಸಂ ಹೆಚ್ಚಿಸಲು ಶಕ್ತಿ ವ್ಯಾಯಾಮ (Strength Training) ಸಹಾಯಕವೆಂದು ಈಗಾಗಲೇ ತಿಳಿದಿದ್ದರೂ, ಇದೀಗ ಅದು ಮೆದುಳಿನ ವೃದ್ಧಾಪ್ಯ ಪ್ರಕ್ರಿಯೆಯನ್ನೂ ನಿಧಾನಗೊಳಿಸಬಹುದು ಎಂಬ ಮಹತ್ವದ ಮಾಹಿತಿ ಹೊರಬಂದಿದೆ. GeroScience ಪತ್ರಿಕೆಯಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ನಿಯಮಿತ ಪ್ರತಿರೋಧ ವ್ಯಾಯಾಮ (Resistance Training) ದೀರ್ಘಕಾಲದ ಮೆದುಳಿನ ಆರೋಗ್ಯ ಮತ್ತು ಜ್ಞಾನ ಸಾಮರ್ಥ್ಯವನ್ನು ಕಾಪಾಡಲು ಸಹಾಯಕವಾಗಬಹುದು.
ಅಧ್ಯಯನದಲ್ಲಿ 2,500 ಕ್ಕೂ ಹೆಚ್ಚು ಜನರನ್ನು ಪರಿಶೀಲಿಸಲಾಗಿದ್ದು, ನಿಯಮಿತವಾಗಿ ತೂಕ ಎತ್ತುವ ವ್ಯಾಯಾಮ ಮಾಡಿದವರ ಮೆದುಳು ವಯಸ್ಸು ನಿಧಾನಗೊಳ್ಳುತ್ತಿರುವ ಲಕ್ಷಣಗಳು ಕಂಡುಬಂದಿವೆ.
ಭಾಗವಹಿಸಿದವರು ನಿರ್ದಿಷ್ಟ ಅವಧಿಗೆ ಶಕ್ತಿ ವ್ಯಾಯಾಮ ಕಾರ್ಯಕ್ರಮ ಅನುಸರಿಸಿದ ನಂತರ, ಅವರ ಮೆದುಳಿನ ಆರೋಗ್ಯವನ್ನು ವಿಶ್ರಾಂತಿ ಸ್ಥಿತಿಯ ಕಾರ್ಯಾತ್ಮಕ ಎಂಆರ್‌ಐ (MRI) ಸ್ಕ್ಯಾನ್ ಮೂಲಕ ಅಳೆಯಲಾಯಿತು. ಈ ತಂತ್ರಜ್ಞಾನ “Brain Ageing Clock” ಮೂಲಕ ವ್ಯಕ್ತಿಯ ನಿಜವಾದ ವಯಸ್ಸಿನೊಂದಿಗೆ ಮೆದುಳಿನ ಜೀವಶಾಸ್ತ್ರೀಯ ವಯಸ್ಸನ್ನು ಹೋಲಿಕೆ ಮಾಡುತ್ತದೆ.
ಮುಖ್ಯ ಕಂಡುಬಂದ ಅಂಶಗಳು ;
ಶಕ್ತಿ ವ್ಯಾಯಾಮ ಮಾಡಿದವರ ಮೆದುಳು 1.4 ರಿಂದ 2.3 ವರ್ಷಗಳಷ್ಟು ಕಿರಿಯದಂತೆ ಕಾಣಿಸಿಕೊಂಡಿದೆ, ಗಮನ ಮತ್ತು ನಿರ್ಧಾರ ಸಾಮರ್ಥ್ಯಕ್ಕೆ ಸಂಬಂಧಿಸಿದ ಮೆದುಳಿನ ಜಾಲಗಳಲ್ಲಿ ಸುಧಾರಣೆ ಕಂಡುಬಂದಿದೆ, ಮಧ್ಯಮ ಹಾಗೂ ಹೆಚ್ಚು ತೀವ್ರತೆಯ ವ್ಯಾಯಾಮ ಎರಡೂ ಲಾಭಕಾರಿಯಾಗಿದೆ,
ಸ್ಮೃತಿ ಸಮಸ್ಯೆಗಳಿಲ್ಲದ ಹಿರಿಯರಲ್ಲೂ ಉತ್ತಮ ಪರಿಣಾಮ ಕಂಡುಬಂದಿದೆ. ತಜ್ಞರ ಪ್ರಕಾರ, ಇದು ವ್ಯಾಯಾಮವು ಮೆದುಳಿನ ವಿವಿಧ ಭಾಗಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ ಎಂಬುದನ್ನು ಸೂಚಿಸುತ್ತದೆ.
ಆರೋಗ್ಯ ತಜ್ಞರು ಹೇಳುವಂತೆ, ನಡೆಯುವುದು ಅಥವಾ ಓಡುವುದರ ಜೊತೆಗೆ ತೂಕ ಎತ್ತುವ ವ್ಯಾಯಾಮ ಸೇರಿಸಿದರೆ ಮೆದುಳಿನ ಆರೋಗ್ಯಕ್ಕೆ ಹೆಚ್ಚುವರಿ ಲಾಭ ದೊರೆಯಬಹುದು.
ಅಲ್ಲದೇ, ಮನೆಯಲ್ಲೇ ದೇಹಭಾರ ವ್ಯಾಯಾಮಗಳು, ರೆಸಿಸ್ಟನ್ಸ್ ಬ್ಯಾಂಡ್ ಬಳಕೆ, ಹಗುರ ತೂಕಗಳಿಂದ ಆರಂಭ, ವ್ಯಾಯಾಮಕ್ಕೂ ಮೊದಲು ವಾರ್ಮ್-ಅಪ್, ವಿಶ್ರಾಂತಿ ದಿನಗಳನ್ನು ಕಡ್ಡಾಯವಾಗಿ ಪಾಲಿಸುವುದು ಉತ್ತಮ
Strength training may slow brain aging: New study – ತುಳುಟೈಮ್ಸ್
ಇದನ್ನೂ ಓದಿ : ಮಹಾಶಿವರಾತ್ರಿ ಅಂಗವಾಗಿ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/DgrGL2FhBLE?si=wh1oWzeTMPxS7iqQ











