ಧಾರ್ಮಿಕ : Tulu Times | ಈ ವರ್ಷ ಮಹಾಶಿವರಾತ್ರಿಯ ದಿನಾಂಕ ಕುರಿತು ಭಕ್ತರಲ್ಲಿ ಗೊಂದಲ ಉಂಟಾಗಿದೆ. ಫಾಲ್ಗುಣ ಕೃಷ್ಣ ಚತುರ್ಧಶಿ ತಿಥಿ ಫೆಬ್ರವರಿ 15ರಂದು ಆರಂಭವಾಗಿ ಫೆಬ್ರವರಿ 16ರವರೆಗೆ ಇರುವುದರಿಂದ “ಯಾವ ದಿನ ಆಚರಿಸಬೇಕು?” ಎಂಬ ಪ್ರಶ್ನೆ ಹೆಚ್ಚಾಗಿದೆ. ಹಿಂದೂ ಪಂಚಾಂಗ ಪ್ರಕಾರ, ಚತುರ್ಧಶಿ ತಿಥಿ ಮಧ್ಯರಾತ್ರಿ ವೇಳೆಗೆ ಬರುವ ದಿನವೇ ಮಹಾಶಿವರಾತ್ರಿ ಆಚರಣೆಗೆ ಯೋಗ್ಯ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಪಂಚಾಂಗಗಳ ಪ್ರಕಾರ ಈ ವರ್ಷ ಮಹಾಶಿವರಾತ್ರಿ ಫೆಬ್ರವರಿ 15ರಂದು ಆಚರಿಸಲಾಗುತ್ತದೆ.
ಮಹಾಶಿವರಾತ್ರಿ, ಅಂದರೆ ‘ಶಿವನ ಮಹಾ ರಾತ್ರಿ’ ಶಿವ ಮತ್ತು ಪಾರ್ವತಿ ಅವರ ದಿವ್ಯ ವಿವಾಹವನ್ನು ಸ್ಮರಿಸುವ ಹಬ್ಬವಾಗಿದೆ. ಆತ್ಮಜಾಗೃತಿ, ಪಾಪ ನಿವಾರಣೆ ಮತ್ತು ಮೋಕ್ಷದ ಸಂಕೇತವಾಗಿ ಈ ಹಬ್ಬವನ್ನು ದೇಶಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ.
ಶುಭ ಮುಹೂರ್ತ (ರಾತ್ರಿ ಪೂಜೆ ಸಮಯ)
ಪ್ರಥಮ ಪ್ರಹರ: ಸಂಜೆ 6:11 ರಿಂದ 9:23
ದ್ವಿತೀಯ ಪ್ರಹರ: ರಾತ್ರಿ 9:23 ರಿಂದ 12:35 (ಫೆ.16)
ತೃತೀಯ ಪ್ರಹರ: 12:35 ರಿಂದ 3:47 (ಫೆ.16)
ಚತುರ್ಥ ಪ್ರಹರ: 3:47 ರಿಂದ ಬೆಳಿಗ್ಗೆ 6:59 (ಫೆ.16)
ಭಕ್ತರು ನಾಲ್ಕು ಪ್ರಹರಗಳಲ್ಲಿ ಶಿವಪೂಜೆ ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ ಎಂದು ನಂಬಿಕೆ ಇದೆ.
ಪೂಜೆ ವಿಧಾನ ಮತ್ತು ಆಚರಣೆಗಳು ;
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಚಿಯಾದ ವಸ್ತ್ರ ಧರಿಸುವುದು, ಶಿವಲಿಂಗಕ್ಕೆ ಜಲ, ಹಾಲು, ಮೊಸರು, ತುಪ್ಪ, ಜೇನುಗಳಿಂದ ಅಭಿಷೇಕ, ಬಿಲ್ವ, ಹೂವು, ಹಣ್ಣು ಅರ್ಪಣೆ, “ಓಂ ನಮಃ ಶಿವಾಯ” ಮಂತ್ರ ಜಪ, ರಾತ್ರಿ ಜಾಗರಣೆ ಮತ್ತು ಧ್ಯಾನ, ಉಪವಾಸ ವ್ರತ, ಮುಂದಿನ ದಿನ ಉಪವಾಸ ಮುರಿಯುವುದು
ಹಬ್ಬದ ಮಹತ್ವ ;
ಮಹಾಶಿವರಾತ್ರಿ ಅಜ್ಞಾನ ಮತ್ತು ಅಂಧಕಾರದ ಮೇಲೆ ಜ್ಞಾನದ ವಿಜಯವನ್ನು ಸೂಚಿಸುತ್ತದೆ. ಈ ದಿನ ಶಿವನು ಲೋಕವನ್ನು ರಕ್ಷಿಸಲು ವಿಷಪಾನ ಮಾಡಿದನು ಎಂಬ ನಂಬಿಕೆ ಇದೆ. ಮತ್ತೊಂದು ನಂಬಿಕೆಯಲ್ಲಿ, ಈ ರಾತ್ರಿ ಶಿವನು ಸೃಷ್ಟಿ–ಸ್ಥಿತಿ–ಲಯದ ತಾಂಡವ ನೃತ್ಯ ಮಾಡಿದನು ಎಂದು ಹೇಳಲಾಗುತ್ತದೆ.
What day is Mahashivratri? What is the auspicious time and how is the worship method? – ತುಳು ಟೈಮ್ಸ್
ಇದನ್ನೂ ಓದಿ : ಹೊಸಕೋಟೆ ಹೊರವಲಯದಲ್ಲಿ ಭೀಕರ ಸರಣಿ ಅಪಘಾತ: ಏಳು ಮಂದಿ ಸ್ಥಳದಲ್ಲೇ ಸಾವು
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/DgrGL2FhBLE?si=LlRqS4BBtB_ijE4H











