ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ಪಿಕಪ್, ಟಿಪ್ಪರ್‌ನಲ್ಲಿ ವಿದ್ಯಾರ್ಥಿಗಳ ಸಾಗಣೆ : ಮುಖ್ಯ ಶಿಕ್ಷಕರ ಅಮಾನತು

ಬೆಳ್ತಂಗಡಿ : Tulu Times l ಸರಕು ಸಾಗಣೆ ವಾಹನಗಳಾದ ಪಿಕಪ್ ಹಾಗೂ ಟಿಪ್ಪರ್‌ನಲ್ಲಿ ವಿದ್ಯಾರ್ಥಿಗಳನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ದ ಘಟನೆಗೆ ಸಂಬಂಧಿಸಿ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕ ಕಿರಣ್ ಅವರನ್ನು ಅಮಾನತುಗೊಳಿಸಿರುವುದು ವರದಿಯಾಗಿದೆ.

ಪ್ರಕರಣ ಸಂಬಂಧ ಇಬ್ಬರು ವಾಹನ ಚಾಲಕರ ವಿರುದ್ಧವೂ ವೇಣೂರು ಪೊಲೀಸ್ ಠಾಣೆ ನಲ್ಲಿ ಪ್ರಕರಣ ದಾಖಲಾಗಿದೆ.ಬೆ ಳ್ತಂಗಡಿ ತಾಲೂಕಿನ ಬಲೆಂಜ ಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಫೆಬ್ರವರಿ 9ರಂದು ಇನ್‌ಚಾರ್ಜ್ ಮುಖ್ಯ ಶಿಕ್ಷಕ ಕಿರಣ್ ನೇತೃತ್ವದಲ್ಲಿ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು.

ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ;

ವಿದ್ಯಾರ್ಥಿಗಳನ್ನು ಸರಕು ಸಾಗಣೆಗಾಗಿ ಬಳಸುವ ಪಿಕಪ್ ಮತ್ತು ಟಿಪ್ಪರ್ ವಾಹನಗಳಲ್ಲಿ ಸ್ಥಳೀಯ ನಾಲ್ಕೂರು ಅನಿಲ್ ಫಾರ್ಮ್‌ಗೆ ಕರೆದೊಯ್ದು ಅದೇ ವಾಹನಗಳಲ್ಲಿ ಹಿಂತಿರುಗಿಸಲಾಗಿತ್ತು. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಫೆಬ್ರವರಿ 12ರಂದು ಬೆಳ್ತಂಗಡಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ನಂತರ ಇನ್‌ಚಾರ್ಜ್ ಮುಖ್ಯ ಶಿಕ್ಷಕ ಕಿರಣ್ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಲಾಯಿತು.

ಬಲೆಂಜ ನಿವಾಸಿ ಧರಣೇಂದ್ರ ನೀಡಿದ ದೂರಿನ ಮೇರೆಗೆ ಪಿಕಪ್ ಚಾಲಕ ನವೀನ್ ಹಾಗೂ ಟಿಪ್ಪರ್ ಚಾಲಕ ಪ್ರವೀಣ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Transporting students in pickup, tipper: Head teacher suspended – ತುಳುಟೈಮ್ಸ್

ಇದನ್ನೂ ಓದಿ : ಮಲೆಂಗಲ್ಲು ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/IsWKknFtrrw?si=E5rgSkET_honv1ls

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page