ಪರಿಸರ : Tulu Times l ಸಾಮಾಜಿಕ ಜಾಲತಾಣಗಳಲ್ಲಿ ಮನೆಗಿಡಗಳ ಪಾಲನೆಗೆ ಸಂಬಂಧಿಸಿದ ಹಲವು ಸಲಹೆಗಳು ಹರಿದಾಡುತ್ತಿವೆ. ಅದರಲ್ಲಿ ಸಾಮಾನ್ಯವಾಗಿ ಕೇಳಿಬರುವ ಸಲಹೆ ಎಂದರೆ ಅಕ್ಕಿ ತೊಳೆಯುವ ನೀರನ್ನು ಗೊಬ್ಬರದಂತೆ ಬಳಸುವುದು. ಅಕ್ಕಿ ತೊಳೆಯುವ ನಂತರ ಉಳಿಯುವ ನೀರನ್ನು ಗಿಡಗಳಿಗೆ ಹಾಕಿದರೆ ಪೋಷಕಾಂಶ ಸಿಗುತ್ತದೆ ಎನ್ನುವುದು ಇದರ ಹಿಂದಿನ ಕಲ್ಪನೆ.
ಆದರೆ, ಅಕ್ಕಿ ನೀರು ನಿಜವಾಗಿಯೂ ಗಿಡಗಳಿಗೆ ಲಾಭಕರವೇ? ಈ ಕುರಿತು ತಜ್ಞರು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸಂಕ್ಷಿಪ್ತ ಉತ್ತರ – ಇಲ್ಲ. ಪ್ಲಾಂಟಾ ಸಂಸ್ಥೆಯ ಸಸ್ಯ ತಜ್ಞ ಎಲಿನ್ ಹ್ಯಾರಿಸನ್ ಅವರ ಪ್ರಕಾರ, ಅಕ್ಕಿ ನೀರಲ್ಲಿ ಗಿಡಗಳಿಗೆ ಅಗತ್ಯವಾದ ನೈಟ್ರೋಜನ್, ಫಾಸ್ಫರಸ್ ಮತ್ತು ಪೊಟ್ಯಾಸಿಯಂ ಪ್ರಮಾಣ ಸಮರ್ಪಕವಾಗಿರುವುದಿಲ್ಲ. ಆದ್ದರಿಂದ ಇದು ಸಮತೋಲನ ಗೊಬ್ಬರಕ್ಕೆ ಪರ್ಯಾಯವಾಗುವುದಿಲ್ಲ.
ಗಿಡಗಳಿಗೆ ಅಕ್ಕಿ ನೀರು ಬಳಸಬಹುದೇ?
ಅಕ್ಕಿ ನೀರು ಗೊಬ್ಬರವಲ್ಲದಿದ್ದರೂ, ನೀರಿನ ವ್ಯರ್ಥತೆಯನ್ನು ತಪ್ಪಿಸಲು ಅದನ್ನು ಕೆಲವೊಮ್ಮೆ ಗಿಡಗಳಿಗೆ ಹಾಕಬಹುದು. ಆದರೆ ಇದರಿಂದ ಗಿಡಗಳಿಗೆ ಮಹತ್ವದ ಪೋಷಕಾಂಶ ಸಿಗುತ್ತದೆ ಎಂದು ನಿರೀಕ್ಷಿಸಬಾರದು.
ತಜ್ಞ ಹ್ಯಾಂಕಾಕ್ ಅವರ ಮಾತಿನಲ್ಲಿ, ಅಕ್ಕಿ ನೀರಿನಲ್ಲಿ ಇರುವ ಪೋಷಕಾಂಶಗಳು ಗಿಡಗಳು ಬಳಸುವ ರೂಪಕ್ಕೆ ಬದಲಾಗುವ ಪ್ರಮಾಣ ಅತಿ ಕಡಿಮೆ. ಆದ್ದರಿಂದ ಇದರ ಪರಿಣಾಮವೂ ಅಲ್ಪ ಎನ್ನಲಾಗಿದೆ.
ಅಕ್ಕಿ ನೀರು ಬಳಸುವಾಗ ಗಮನಿಸಬೇಕಾದ ವಿಷಯಗಳು ;
ಅಕ್ಕಿ ನೀರು ಉಪ್ಪಿಲ್ಲದದ್ದಾಗಿರಬೇಕು. ಅಕ್ಕಿಗೆ ಉಪ್ಪು, ಬೆಣ್ಣೆ ಅಥವಾ ಎಣ್ಣೆ ಸೇರಿಸಿದ್ದರೆ ಆ ನೀರನ್ನು ಗಿಡಗಳಿಗೆ ಹಾಕಬಾರದು, ತಿಂಗಳಿಗೆ ಒಮ್ಮೆಗಿಂತ ಹೆಚ್ಚು ಬಳಸಬಾರದು,
ಹಳೆಯ ಅಕ್ಕಿ ನೀರನ್ನು ಉಳಿಸಿಕೊಂಡು ಬಳಸಬಾರದು, ಏಕೆಂದರೆ ಅದು ಫರ್ಮೆಂಟ್ ಆಗಿ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗಬಹುದು. ಅತಿಯಾಗಿ ಬಳಸಿದರೆ ಮಣ್ಣಿನಲ್ಲಿ ಸ್ಟಾರ್ಚ್ ಜಮೆಯಾಗುವ ಸಾಧ್ಯತೆ ಇದೆ, ಇದರಿಂದ ಫಂಗಸ್ ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚಾಗಬಹುದು.
Is it beneficial to pour rice washing water on plants? Expert clarifies – ತುಳುಟೈಮ್ಸ್
ಇದನ್ನೂ ಓದಿ : ಬಿಜೆಪಿ ಶಾಸಕ ಭೈರತಿ ಬಸವರಾಜು ಕೊನೆಗೂ ಆರೆಸ್ಟ್ ! ಆಗಿದ್ದೇನು…?
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/IsWKknFtrrw?si=NQrF_w10vWPutWF5











