ಕಾರ್ಕಳ: Tulu Times | ರಬ್ಬರ್ ಟ್ಯಾಪಿಂಗ್ ಗೆಂದು ಹೋದ ಕೇರಳದ ಕಾರ್ಮಿಕರಿಬ್ಬರು ಓಮ್ನಿ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕಿನ ಕಡ್ತಲ ಎಂಬಲ್ಲಿ ಕೇರಳ ಮೂಲದ ಸಾಬು .ಕೆ.ಎಸ್(44) ಹಾಗೂ ಮೊಹಮ್ಮದ್ ಅರಾಫತ್(41) ಓಮ್ನಿ ಕಾರಿನ ಜೊತೆಗೆ ಮನೆಯಿಂದ ಎಸ್ಕೇಪ್ ಆದ ಘಟನೆ ನಡೆದಿದೆ.
ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡುವ ಸಲುವಾಗಿ ರಬ್ಬರ್ ತೋಟ ಹೊಂದಿದ್ದ ರಮೇಶ್ ಕುಮಾರ್ ಎಂಬವರು ವರಂಗದಲ್ಲಿರುವ ತೋಟದಲ್ಲಿ ಬೆಳಗ್ಗೆ 4 ಗಂಟೆಗೆ ಓಮ್ನಿ ಕಾರಿನಲ್ಲಿ ಕಳುಹಿಸಿದ್ದರು. ಕಾರ್ಮಿಕರಲ್ಲಿ ಇಬ್ಬರು ಟ್ಯಾಪಿಂಗ್ ಮಾಡದೇ ಕಾರಿನ ಜೊತೆ ಪರಾರಿಯಾಗಿದ್ದಾರೆ. ಈ ಕುರಿತು ರಮೇಶ್ ಕುಮಾರ್ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ವರಾಹಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ: 11 ಮಂದಿ ಬಂಧನ
ಕುಂದಾಪುರ: ಪ್ರತ್ಯೇಕ ಪ್ರಕರಣದಲ್ಲಿ, ವರಾಹಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ದ ಕುಂದಾಪುರ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ.ಫೆಬ್ರವರಿ 10ರ ಮಂಗಳವಾರ ಮುಂಜಾನೆ ಕಂಡೂರು ಸೇತುವೆ ಸಮೀಪದ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಸಿಕ್ಕಿಬಿದ್ದವರನ್ನು ಬಂಧನ ಮಾಡಿರುವುದು ವರದಿಯಾಗಿದೆ.
ಬಂಧಿತರನ್ನು ಸೈಟ್ ಸೂಪರ್ವೈಸರ್ ಅಜ್ವಲ್ ಹಾಗೂ ಕಾರ್ಮಿಕರಾದ ರಾಮಶಂಕರ್ ರಾಜೀರ್ (35), ರಾಮ್ ಕುಮಾರ್ (40), ಗೋವಿಂದ ಚೌಧರಿ (26), ಶಿವಮುನಿ (32), ಜುನ್ನಾ ರಾಜೀರ್ (35), ಸತ್ಯದೇವ (30), ಕಮಲೇಶ್ ನಿಶಾದ್ (35), ಸಂತೋಷ್ ನಿಶಾದ್ (23), ಓಂ ಪ್ರಕಾಶ್ ರಾಜ್ರರ್ (34) ಮತ್ತು ರಮೇಶ್ ರಾಜೂರ್ (35) ಎಂದು ಗುರುತಿಸಲಾಗಿದೆ.
ದಾಳಿಯ ವೇಳೆ ಪೊಲೀಸರು ಸುಮಾರು ₹3 ಲಕ್ಷ ಮೌಲ್ಯದ ನಾಲ್ಕು ದೋಣಿಗಳು ಹಾಗೂ ಅಂದಾಜು ಮೂರು ಅರ್ಧ ಯುನಿಟ್ ಮರಳು (₹4,500 ಮೌಲ್ಯ) ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಮರಳು ದಂಡೆಯ ಮಾಲೀಕ ಸುನಿಲ್ ಶೆಟ್ಟಿ ಹಾಗೂ ಸೂಪರ್ವೈಸರ್ ಅಜ್ವಲ್ ಅವರು ನಿಗದಿತ ‘ಜಿಯೋ-ಫೆನ್ಸಿಂಗ್’ ಗಡಿ ಮೀರಿ ಅಕ್ರಮವಾಗಿ ಮರಳು ತೆಗೆಯಲು ಹಾಗೂ ಸಾಗಿಸಲು ಕಾರ್ಮಿಕರಿಗೆ ಸೂಚನೆ ನೀಡುತ್ತಿದ್ದರೆಂದು ಆರೋಪಿಸಲಾಗಿದೆ. ನಿಖರ ಮಾಹಿತಿಯ ಆಧಾರದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎನ್ನಲಾಗಿದೆ.
Karkala: Those who went for rubber tapping escaped in an Omni car- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











