ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪುತ್ತೂರು: ಅಜಿತ್ ರೈ ಹೊಸಮನೆ ಅವರಿಗೆ ಕೋರ್ಟ್ ನೋಟಿಸ್‌ !

ಪುತ್ತೂರು: Tulu Times | ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಅವರ ಗಡಿಪಾರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್  ನೋಟಿಸ್‌‌ ನೀಡಿದೆ.

ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55ರಂತೆ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮ ಹೊಸಮನೆ ನಿವಾಸಿ ಅಜಿತ್ ರ ವಿರುದ್ಧ  ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಆದೇಶ ಹೊರಡಿಸುವ ಕುರಿತು ಸಲ್ಲಿಸಿರುವ ಪ್ರಸ್ತಾವನೆಗೆ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 25ರಂದು ನಡೆಸಲಿದೆ. ಸದ್ರಿ ಪ್ರಕರಣದಲ್ಲಿ ಸ್ವತಃ ಯಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದು.  ತಪ್ಪಿದಲ್ಲಿ ಈ ಪ್ರಕರಣದಲ್ಲಿ ಆಸಕ್ತಿ ಇಲ್ಲವೆಂದು ಭಾವಿಸಿ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷೀ ಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನುವ ಮಾಹಿತಿ ನೀಡಿದೆ.

ಕಾಸರಗೋಡಿನ ಚಿನ್ನು ಪಾಪು ಆತ್ಮಹತ್ಯೆಗೆ ಕಾರಣವೇನು ಗೊತ್ತಾ..?

ಕಾಸರಗೋಡು: ಪ್ರತ್ಯೇಕ ಪ್ರಕರಣದಲ್ಲಿ, ಸೋಷಿಯಲ್ ಮೀಡಿಯಾ ಇನ್ಸುಯೆನ್ಸರ್ ಚಿನ್ನು ಪಪ್ಪು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಈ ಹುಡುಗಿಯ ಆತ್ಮಹತ್ಯೆಗೆ ಶರಣಾಗಿರುವುದು ಎಲ್ಲರಿಗೂ ಶಾಕ್ ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್ ಈ ಹುಡುಗಿ!

ಕಾಸರಗೋಡು ಶೈಲಿಯ ಭಾಷೆ ಹಾಗೂ ಸ್ಥಳೀಯ ಆಹಾರದ ವಿಡಿಯೋಗಳಿಂದ ವೈರಲ್ ಆಗಿದ್ದ ಚಿನ್ನು ಪಾಪು 24 ವರ್ಷ ವಯಸ್ಸಿನ ಹುಡುಗಿ ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ವೀಡಿಯೋಗಳನ್ನು ಮಾಡುತ್ತಿದ್ದರು. ಇತ್ತೀಚೆಗೆ ಡಿವೋರ್ಸ್ ಪಡೆದ ಇವರ ನಿಜವಾದ ಹೆಸರು ಕೆ. ರೇಷ್ಯಾ ಇವರು ಕಡಿಮೆ ಸಮಯದಲ್ಲಿಯೇ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಇವರು ಮೂಲತಃ ಅಡೂರ್‌ನವರು. ಇಬರು ಕಾಸರಗೋಡು ನಗರದ ಬಳಿ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ. ಗಂಗಾಧರನ್ ಮತ್ತು ಶೈಲಜಾ ಇವರ ಪೋಷಕರು. ರೇಷ್ಮಾ ಸದಾ ಕ್ರಿಯಾಶೀಲರಾಗಿದ್ದು, ಸೋಶಿಯಲ್ ಮೀಡಿಯಾ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು ಎಂದು ಕುಟುಂಬಸ್ಥರು ಹೇಳುತ್ತಾರೆ.

ಮದುವೆಯಾಗಿ ನಾಲ್ಕು ವರ್ಷದ ಮಗ..ಡಿವೋರ್ಸ್ ನಿಂದ ನೊಂದು ಆತ್ಮಹತ್ಯೆಯೇ..?

ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು, ದೇಶೀಯ ಖಾದ್ಯಗಳನ್ನು ಸರಳವಾಗಿ ಪರಿಚಯಿಸುತ್ತಿದ್ದ ಅವರ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದೆ. ರೇಷ್ಮಾ ಪ್ರೀತಿಸಿ ಮದುವೆಯಾಗಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಅವರ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ರೇಷ್ಮಾಗೆ ನಾಲ್ಕು ವರ್ಷದ ಮಗನಿದ್ದಾನೆ. ಸದ್ಯ ಮಗ ಅಡೂರ್‌ನಲ್ಲಿರುವ ಅಜ್ಜ-ಅಜ್ಜಿ ಜೊತೆಗಿದ್ದಾನೆ. ಇನ್ನು ರೇಷ್ಮಾ ಸಾವಿಗೆ [ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆ ತಿಳಿದು ನೆರೆಹೊರೆಯವರು ರೇಷ್ಮಾರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ಪೋಷಕರಿಗೆ ಮಾಹಿತಿ ನೀಡಲಾಗಿದೆ. 7ರಿಂದ 10ದಿನಗಳಿಗೊಮ್ಮೆ ಕಂಟೆಂಟ್ ಗಳನ್ನು ಪೋಸ್ಟ್ ಮಾಡುತ್ತಿದ್ದ ರೇಷ್ಮಾ ಆರು ದಿನಗಳ ಹಿಂದೆ ತರಕಾರಿಯ ಕುರಿತ ಕೊನೆಯ ಪೋಸ್ಟ್ ಶೇರ್ ಮಾಡಿದ್ದರು. ಈ ವೀಡಿಯೋ 5,800 ಲೈಕ್ ಪಡೆದಿದೆ.

Puttur: Court notice issued to Ajit Rai Hosamane!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page