ಬ್ರೇಕಿಂಗ್ ನ್ಯೂಸ್
ಸುಳ್ಯ

ರಾಜ್ಯ ವಕೀಲರ ಪರಿಷತ್ ಸದಸ್ಯತ್ವ ಚುನಾವಣೆ : ಸುಳ್ಯ ವಕೀಲರ ಪೈಕಿ ಪ್ರಥಮ ನಾಮಪತ್ರ ಸಲ್ಲಿಕೆ

ಸುಳ್ಯ : Tulu Times l ಮಾರ್ಚ್ 11 ರಂದು ನಡೆಯಲಿರುವ ಚುನಾವಣೆಗೆ ಸದಸ್ಯತ್ವ ಸ್ಥಾನಕ್ಕೆ ಆಯ್ಕೆ ನಡೆಯಲಿದ್ದು ಈಗಾಗಲೇ ಸುಮಾರು 160 ಮಂದಿ ವಕೀಲರು ನಾಮಪತ್ರ ಸಲ್ಲಿಸಿದ್ದು, ಸುಳ್ಯ ವಕೀಲರ ಸಂಘದ ಸದಸ್ಯರ ಪೈಕಿ ಪ್ರಥಮವಾಗಿ ಜಯಪ್ರಕಾಶ್ ರೈ ಕನ್ನೆಜಾಲು ರವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿದುಬಂದಿದೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಇದರ ಸದಸ್ಯತ್ವಕ್ಕೆ ರಾಜ್ಯಾದಾದ್ಯಂತ ಚುನಾವಣೆ ನಡೆಯಲಿದ್ದು ಸುಳ್ಯದಿಂದ ನ್ಯಾಯವಾದಿ ಕನ್ನೆಜಾಲು ಜಯಪ್ರಕಾಶ್ ರೈ ಯವರು ಫೆ. 10 ರಂದು ಬೆಂಗಳೂರಿನ ವಕೀಲರ ಪರಿಷತ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿರುವುದು ತಿಳಿದು ಬಂದಿದೆ. ಇವರು ಸುಳ್ಯ ವಕೀಲರ ಸಂಘದ ಹಿರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕೆ. ವಿ.ಜಿ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿರುತ್ತಾರೆ.

State Bar Council membership election: First nomination filed by Sullya lawyers

ಜಿಲ್ಲೆಯಿಂದ ಹಿರಿಯ ನ್ಯಾಯವಾದಿಗಳಾದ ಪಿ.ಪಿ ಹೆಗ್ಡೆ, ಸುಭಾಷ್ ಕೌಡಿಚಾರ್ ಸಂಧ್ಯಾ ಯು. ಪ್ರಭು ರವರು ನಾಮಪತ್ರ ಸಲ್ಲಿಸಿದ್ದಾರೆ. ಜಯಪ್ರಕಾಶ್ ರೈ ಯವರು ಮೂಲತ: ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕನ್ನೆಜಾಲುಮನೆತನದವರಾಗಿದ್ದು ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

State Bar Council membership election: First nomination filed by Sullya lawyers – ತುಳುಟೈಮ್ಸ್

ಇದನ್ನೂ ಓದಿ :ಉಡುಪಿ: ಪ್ರಾರ್ಚೂನರ್ ಕಾರು ಚರಂಡಿಗೆ ಪಲ್ಟಿ; ವಿದ್ಯಾರ್ಥಿಗಳು ಗಂಭೀರ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=2aOYzewLNsyqqPzx

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page