ಜೀವನಶೈಲಿ: Tulu Times | ನಿಮ್ಮ ಮುಖ ಹೊಳಪು ಕಳೆದುಕೊಂಡಿದ್ಯಾ, ಕೂದಲು ಬೂದು ಬಣ್ಣಕ್ಕೆ ತಿರುಗುತ್ತಿದೆಯೇ? ಅದಕ್ಕೆ ಸರಳ ಉಪಾಯಗಳೇನು ನೋಡೋಣ ಈ ಸ್ಟೋರಿಲಿ..
ಇನ್ನು ಕೂದಲಿನ ಆರೋಗ್ದೇಯ ಚೆನ್ನಾಗಿರಬೇಕು ಅಂತ ಅಂದರೆ, ದೇಹಕ್ಕೆ ಗಿಡಮೂಲಿಕೆಗಳು, ಮಸಾಲೆಗಳು, ಎಲೆಗಳು ಮತ್ತು ಹೂವುಗಳನ್ನು ಸರಿಯಾಗಿ ಸೇವಿಸುವುದರಿಂದ ಯೋಜನಗಳನ್ನು ಪಡೆಯಬಹುದು. ಅದರಲ್ಲಿ ಕರಿಬೇವು ಒಂದು. ಇದು ಚರ್ಮ, ಕೂದಲು ಮತ್ತು ಜೀರ್ಣಕ್ರಿಯೆಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಕರುಳು, ಕೂದಲು ಮತ್ತು ಚರ್ಮಕ್ಕೆ ಪ್ರಯೋಜನ ನೀಡುತ್ತದೆ.
ಕರಿಬೇವನ್ನು ನಾವು ಅಡುಗೆಯಲ್ಲಿ ಬಳಸುತ್ತೇವೆ. ಇದು ಚರ್ಮ, ಕೂದಲು ಮತ್ತು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ, ಚರ್ಮವನ್ನು ಹೊಳಪುಗೊಳಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕರಿಬೇವು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ, ನೆತ್ತಿಯನ್ನು ಪೋಷಿಸುತ್ತದೆ ಮತ್ತು ತಲೆಹೊಟ್ಟು ನಿವಾರಿಸುತ್ತದೆ. ಕರಿಬೇವು ಚರ್ಮದಲ್ಲಿ ಎಣ್ಣೆ ಮತ್ತು ಶುಷ್ಕತೆಯನ್ನು ಸಹ ಸಮತೋಲನಗೊಳಿಸುತ್ತದೆ.
ಕರಿಬೇವು ಎಲೆಗಳು ನಿಮ್ಮ ಕರುಳು ಮತ್ತು ಜೀರ್ಣಕ್ರಿಯೆಗೆ ಅತ್ಯಂತ ಪ್ರಯೋಜನಕಾರಿ. ಇದು ಕೂದಲು, ಚರ್ಮ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ, ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಆಯುರ್ವೇದದ ಪ್ರಕಾರ, 7-8 ಕರಿಬೇವು ಎಲೆಗಳನ್ನು ನೀರಿನಲ್ಲಿ ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು. ತಜ್ಞರ ಸಲಹೆಯಂತೆ ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಚರ್ಮ, ಕೂದಲು ಮತ್ತು ಕರುಳಿನ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ಶಾಂಪೂ ಮಾಡಿಕೊಂಡು ಕೂದಲಿಗೆ ಹಚ್ಚಿ!
ಒಂದು ಕಪ್ ತೆಂಗಿನ ಎಣ್ಣೆಗೆ 10-15 ಕರಿಬೇವಿನ ಎಲೆಗಳನ್ನು ಹಾಕಿ, ಎಲೆಗಳು ಕಪ್ಪಾಗುವವರೆಗೆ ಬಿಸಿ ಮಾಡಿ. ಈ ಎಣ್ಣೆಯನ್ನು ತಲೆಗೆ ಮಸಾಜ್ ಮಾಡಿ 30-45 ನಿಮಿಷಗಳ ನಂತರ ಶಾಂಪೂ ಮಾಡಿ. ಕರಿಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿ, ಅದಕ್ಕೆ ಮೊಸರು ಸೇರಿಸಿ. ಈ ಮಿಶ್ರಣವನ್ನು ನೆತ್ತಿಗೆ ಹಚ್ಚಿ 30 ನಿಮಿಷಗಳ ನಂತರ ತೊಳೆಯಿರಿ. ಪ್ರತಿದಿನ ಬೆಳಗ್ಗೆ ಕರಿಬೇವಿನ ಎಲೆಗಳನ್ನು ನೇರವಾಗಿ ಜಗಿಯುವುದರಿಂದ ಕೂದಲು ಮೊಣಕಾಲಿನವರೆಗೆ ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.
Here’s a simple trick to darken your hair!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











