ಬ್ರೇಕಿಂಗ್ ನ್ಯೂಸ್
ಕರಾವಳಿ

ಪಿಲಿಕುಳ ಜೈವಿಕ ಉದ್ಯಾನ ನಿರ್ವಹಣೆ ಶೀಘ್ರವೇ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರ

ಮಂಗಳೂರು : Tulu Times | ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ‘ಪಿಲಿಕುಳ ವನ್ಯಜೀವಿ ಉದ್ಯಾನ (ಪಿಲಿಕುಳ ಜೈವಿಕ ಉದ್ಯಾನ)’ ನಿರ್ವಹಣೆಯನ್ನು ಶೀಘ್ರದಲ್ಲೇ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗುವುದು. ಈ ಸಂಬಂಧ ಚರ್ಚೆಗಳು ಬಹುತೇಕ ಅಂತಿಮ ಹಂತ ತಲುಪಿದ್ದು, ನಿರ್ವಹಣಾ ವೆಚ್ಚ ನಿಗದಿಪಡಿಸುವ ಪ್ರಕ್ರಿಯೆಯಷ್ಟೇ ಬಾಕಿಯಿದೆ.

ಅರಣ್ಯ ಇಲಾಖೆಯಡಿ ಕಾರ್ಯನಿರ್ವಹಿಸುವ ಮೃಗಾಲಯ ಪ್ರಾಧಿಕಾರವು ಮೃಗಾಲಯ ನಿರ್ವಹಣೆಯಲ್ಲಿ ವಿಶೇಷ ಪರಿಣತಿ ಹೊಂದಿದೆ. ಈ ಹಿನ್ನೆಲೆ, ಪಿಲಿಕುಳ ಜೈವಿಕ ಉದ್ಯಾನದ ನಿರ್ವಹಣೆಯನ್ನು ಮೃಗಾಲಯ ಪ್ರಾಧಿಕಾರಕ್ಕೆ ವಹಿಸುವುದು ಸೂಕ್ತವೆಂಬ ಅಭಿಪ್ರಾಯ ಇತ್ತೀಚಿನ ದಿನಗಳಲ್ಲಿ ಬಲ ಪಡೆದಿದೆ. ಪ್ರಸ್ತುತ ಮೃಗಾಲಯ ಪ್ರಾಧಿಕಾರವು ರಾಜ್ಯದ ಎರಡು ಪ್ರಮುಖ ಮೃಗಾಲಯಗಳಾದ ಬನ್ನೇರುಘಟ್ಟ ಮತ್ತು ಮೈಸೂರು ಮೃಗಾಲಯ, ಜೊತೆಗೆ ಒಟ್ಟು ಒಂಬತ್ತು ಸಣ್ಣ ಮೃಗಾಲಯಗಳನ್ನು ನಿರ್ವಹಿಸುತ್ತಿದೆ. ಈಗ ಪಿಲಿಕುಳ ಜೈವಿಕ ಉದ್ಯಾನವನ್ನು ಖಾಸಗಿ ರೀತಿಯಲ್ಲಿ ನಿರ್ವಹಿಸಲಾಗುತ್ತಿದ್ದು, ಅದನ್ನು ಸಂಪೂರ್ಣವಾಗಿ ಮೃಗಾಲಯ ಪ್ರಾಧಿಕಾರಕ್ಕೆ ವರ್ಗಾಯಿಸುವಂತೆ ಬೇಡಿಕೆಗಳು ಕೇಳಿಬಂದಿದ್ದವು. ಆದರೆ ಉದ್ಯಾನವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಹಿನ್ನೆಲೆಯಲ್ಲಿ, ಮಾಲಿಕತ್ವವನ್ನು ವರ್ಗಾಯಿಸದೆ ಕೇವಲ ನಿರ್ವಹಣೆಯನ್ನು ಮಾತ್ರ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ.

ಅರಣ್ಯ ಇಲಾಖೆಯ ಅಧೀನದಲ್ಲಿರುವ ಮೃಗಾಲಯ ಪ್ರಾಧಿಕಾರವು ಮೃಗಾಲಯ ನಿರ್ವಹಣೆಯಲ್ಲಿ ವಿಶಾಲ ಅನುಭವ ಹೊಂದಿದ್ದು, ಇದರ ಮೂಲಕ ಪ್ರಾಣಿ ಹಾಗೂ ಪಕ್ಷಿಗಳ ಆರೈಕೆ ಮತ್ತು ಸಂರಕ್ಷಣೆ ಇನ್ನಷ್ಟು ಸುಧಾರಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪಿಲಿಕುಳ ಜೈವಿಕ ಉದ್ಯಾನವು ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

Pilikula Biological Park management to be handed over to Zoo Authority soon – ತುಳು ಟೈಮ್ಸ್

ಇದನ್ನೂ ಓದಿ : ಭಾರತದ ಕಾಫಿ ರಫ್ತು 2026ರಲ್ಲಿ $2 ಬಿಲಿಯನ್ ಗಡಿ ದಾಟುವ ನಿರೀಕ್ಷೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/bXVRChrgqts?si=SQPaxel35P9PQT_S

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 30

You cannot copy content of this page