ಮಂಗಳೂರು: Tulu Times | ಕಾಸರಗೋಡು ಆರ್.ಡಿ. ನಗರದ ಮೀಪುಗುರಿ ನಿವಾಸಿ ವೈಶಾಲಿ(23) ಎಂಬಾಕೆ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಕ್ರಿಮಿನಾಲೊಜಿ ವ್ಯಾಸಂಗ ಮಾಡುತ್ತಿದ್ದು, ಈಕೆ ಪಿಜಿಯಲ್ಲಿ ವಾಸ್ತವ್ಯವಿದ್ದಳು. ಅಲ್ಲದೇ, 2026ನೇ ಜನವರಿಯಿಂದ ಈಕೆ ಸುರತ್ಕಲ್‌ನ Fly Qube ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಇದೀಗ, ಈಕೆ ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ವೈಶಾಲಿಯು ಮೊಹಮ್ಮದ್ ಮಿದ್ಲಾಜ್ ಪಿ.ಹೆಚ್. ಎಂಬ ಅನ್ಯಕೋಮಿನ ಯುವಕನೊಂದಿಗೆ ಕೇರಳದ ವಯನಾಡ್ ರಿಜಿಸ್ಟರ್ ಆಫೀಸಿನಲ್ಲಿ ಜ.31ರಂದು ರಿಜಿಸ್ಟರ್ ಮದುವೆಯಾಗಿರುವ ಬಗ್ಗೆ ವಾಟ್ಸಾಪ್ ಸಂದೇಶವನ್ನು ವೈಶಾಲಿಯ ಸಂಬಂಧಿ ಹರಿದಾಸ್ ಎಂಬವರು ಗಮನಿಸಿದ್ದರು.
ಆ ಸಂದೇಶವನ್ನು ಅವರು ವೈಶಾಲಿಯ ಹೆತ್ತವರಿಗೆ ಕಳುಹಿಸಿಕೊಟ್ಟಿದ್ದರು. ಆದ್ದರಿಂದ ಅವರು ಪುತ್ರಿಗೆ ಕರೆ ಮಾಡಿ ಮಾತನಾಡಿದ್ದು, ಬಳಿಕ ಮತ್ತೊಮ್ಮೆ ಫೋನ್ ಮಾಡಿದಾಗ ವೈಶಾಲಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದೀಗ ಆಕೆ ಫೆ.8ರಿಂದ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೊತೆಗೆ ಆಕೆ ವಾಸ್ತವ್ಯವಿರುವ ಪಿಜಿ ಮನೆಯವರು ಬಂದು ನೋಡಿದಾಗ ಪುತ್ರಿ ರೂಮಿನಲ್ಲಿ ಇರಲಿಲ್ಲ. ಆದ್ದರಿಂದ ಮನೆಯ ಮಾಲಕರ ಸಿಸಿ ಕ್ಯಾಮರಾ ಪರಿಶೀಲಿಸಿಕೊಂಡಾಗ ಫೆ.9ರಂದು ಪಿಜಿಯಿಂದ ತೆರಳಿರುವುದು ಕಂಡು ಬಂದಿದೆ. ಆದ್ದರಿಂದ ಪೊಲೀಸರು ಆಕೆ ಈವರೆಗೂ ಮಗಳು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ ಆದುದರಿಂದ ಕಾಣೆಯಾದ ಆಕೆಯನ್ನು ಪತ್ತೆ ಮಾಡಿಕೊಡಬೇಕಾಗಿ ಹೆತ್ತವರು ಸುರತ್ಕಲ್ ಠಾಣೆಯಲ್ಲಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
Love Jihad case: A young woman eloped with a foreign youth! – ತುಳು ಟೈಮ್ಸ್
ಇದನ್ನೂ ಓದಿ : ಭಾರತದ ಕಾಫಿ ರಫ್ತು 2026ರಲ್ಲಿ $2 ಬಿಲಿಯನ್ ಗಡಿ ದಾಟುವ ನಿರೀಕ್ಷೆ
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/bXVRChrgqts?si=SQPaxel35P9PQT_S











