ಸುಳ್ಯ : Tulu Times | ರಾಜಕಾರಣಿಗಳು ಸುಳ್ಳು ಭರವಸೆ ನೀಡಿ ನಂತರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ, ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಲ್ತಾಜೆ ಪ್ರದೇಶದ ಗ್ರಾಮಸ್ಥರು ಮತದಾನ ಬಹಿಷ್ಕಾರದ ಘೋಷಣೆಯೊಂದಿಗೆ ಬ್ಯಾನರ್ ಹಾಕಿ ಸಂಕೇತಾತ್ಮಕ ಪ್ರತಿಭಟನೆ ನಡೆಸಿರುತ್ತಾರೆ.
ವಾಲ್ತಾಜೆ–ಕರಂಗಲ್ಲು ರಸ್ತೆ (ಬಾಲ್ಕಜೆ ತಿರುವು ಬಳಿ) ಹಾಗೂ ವಾಲ್ತಾಜೆ–ಮಲೆರ್ ಕುಮೇರಿ ರಸ್ತೆಗಳನ್ನು ಕಾಂಕ್ರೀಟೀಕರಣ ಮಾಡುವುದಾಗಿ ರಾಜಕೀಯ ನಾಯಕರು ಭರವಸೆ ನೀಡಿದ್ದರು. ಈ ಸಂಬಂಧ ಗುದ್ದಲಿ ಪೂಜೆ ನೆರವೇರಿಸಿ, ಲಡ್ಡು ತಿಂದು, ಜನರಿಂದ ಕೈತಟ್ಟಿಸಿಕೊಂಡು ನಂತರ ಕಾಮಗಾರಿ ನಡೆಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ;
ಪ್ರತಿಭಟನೆಯ ಭಾಗವಾಗಿ ಗ್ರಾಮಸ್ಥರು ಹಾಕಿದ ಬ್ಯಾನರ್‌ನಲ್ಲಿ, “ವಾಲ್ತಾಜೆ–ಕರಂಗಲ್ಲು ರಸ್ತೆ (ಬಾಲ್ಕಜೆ ತಿರುವು) ಮತ್ತು ವಾಲ್ತಾಜೆ–ಮಲೆರ್ ಕುಮೇರಿ ರಸ್ತೆ ಕಾಂಕ್ರೀಟೀಕರಣದ ಬಗ್ಗೆ ಸುಳ್ಳು ಭರವಸೆ ನೀಡಿ, ಗುದ್ದಲಿ ಪೂಜೆ ಮಾಡಿ, ಲಡ್ಡು ತಿಂದು ಕೈ ಚಪ್ಪಾಳೆ ಗಿಟ್ಟಿಸಿಕೊಂಡು ಹೋದ ರಾಜಕಾರಣಿಗಳಿಗೆ ಧಿಕ್ಕಾರ. ಈ ರೀತಿ ನಮ್ಮನ್ನು ನಿರ್ಲಕ್ಷ್ಯ ಮಾಡಿದ ಕಾರಣ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ” ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಗ್ರಾಮಸ್ಥರು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ವರ್ಷಗಳಿಂದ ಬಾಕಿಯಿರುವ ತಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ ಮುಂದಿನ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Accused of false promises: Villagers put up banners boycotting voting in Sullia – ತುಳು ಟೈಮ್ಸ್
ಇದನ್ನೂ ಓದಿ : ಉಡುಪಿ: ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಆರೋಪದಡಿ ಪ್ರಕರಣ ದಾಖಲು!
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/bXVRChrgqts?si=SQPaxel35P9PQT_S











